Tuesday 7 May 2013

ತಾರಾಲಯ ಸಮ್ಮರ್ ಕ್ಯಾಂಪ್ ಮತ್ತು ನಾನು

ಇಂದು ಸೆಂಟ್ರಲ್ ಬೆಂಗಳೂರಿನ ದ್ರೈವ್ ಗೆ ಕೊನೆಯದಿನ . ರಸ್ತೆಯಲ್ಲಿ ಹೋಗುವಾಗ ರವಿಂದ್ರಕಲಾಕ್ಷೇತ್ರ , ಕಾರ್ಪೋರೇಶನ್ ಕಟ್ಟಡ , ಹಡ್ಸನ್ ಸರ್ಕಲ್ , ಮೈಸೂರ್ ಬ್ಯಾಂಕ್ , ಯೂನಿವರ್ಸಿಟಿ ಲಾ ಕಾಲೇಜು ,ಬಲಗಡೆ ಸೆಂಟ್ರಲ್ ಕಾಲೇಜು , ಅರ್ ಸಿ ಕಾಲೇಜು ,ಚಾಲುಕ್ಯ ಹೋಟೆಲ್ , ಬಸವಭವನ , ಬಸವೇಶ್ವರರ ಪ್ರತಿಮೆ , ದೂರದಲ್ಲಿ ರಾಜಭವನ , ವಿಧಾನಸೌಧ ಎಲ್ಲವನ್ನು ಕಂಡು ನನ್ನ1988 - 89ರ MSc ಓದುವ ದಿನಗಳು ನೆನಪಾದವು .
ಈ ಮದ್ಯೆ "ಕಾರ್ಲ್ ಟನ್ " ಹೌಸ್ ಬಳಿ(ಮಹಾರಾಣಿ ಕಾಲೇಜು ಪಕ್ಕ) 90 ಸೆಕಂಡುಗಳ ಕಾಲ ಸಿಗ್ನಲ್ ಬಿದ್ದಿತು . ಗಾಡಿ ಆಫ್ ಮಾಡಿ ಕತ್ತೆತ್ತಿ ರಸ್ತೆಯನ್ನೊಮ್ಮೆ ನೋಡಿದೆ ಆಹಾ ಎಡ ಬಲ ಗಳಲ್ಲಿದ್ದ ಮರಗಳು ಮೈ ತುಂಬಾ ಬಣ್ಣ ಬಣ್ಣದ ಹೂಗಳನ್ನು ಹೊತ್ತು ನಿಂತಿದ್ದನ್ನು ನೋಡಿ ಮನದುಂಬಿ ಬಂದಿತು . ಸಿಗ್ನಲ್ ಬಿದ್ದಿದ್ದನ್ನು ಪಾಸಿಟಿವ್ ಆಗಿ ಉಪಯೋಗಿಸಿದ ಧನ್ಯತಾ ಭಾವ ಮೂಡಿತು .
ಇನ್ನು ವಾಪಾಸು ಬರುವಾಗ ಶೇಷಾದ್ರಿ ರಸ್ತೆಯ ಕಾಲೆಜುಶಿಕ್ಷಣ ಇಲಾಖೆ , U V C E ಇಂಜಿನೀರಿಂಗ್ ಕಾಲೇಜು , ರಿಸರ್ವ್ ಬ್ಯಾಂಕ್ , ಬಲಕ್ಕೆ St Mathas ಆಸ್ಪತ್ರೆ , ನನ್ನಪ್ಪನ ಕೊನೆಯ ದಿನಗಳು ಕಳೆದ ಆಸ್ಪತ್ರೆ , ಸಿದ್ದಯ್ಯ ರಸ್ತೆ , ಲಾಲಭಾಗ್ ರಸ್ತೆಯ ಸುಪ್ರಸಿದ್ದ MTR ಇವೆಲ್ಲವೂ ಇತಿಹಾಸದ ಭಾಗವಾದರೆ , ಲಾಲಭಾಗ್ ಪಶ್ಹಿಮ ದ್ವಾರದಲ್ಲಿ ನಿನ್ನೆ ಮೊನ್ನೆ ಓಪನ್ ಆಗಿರುವ "ಮೀರಾ ದೆಲಿಕೆಸಿ " ಅಯ್ಯೋ ಇಲ್ಲಿ ಕಾಪಿ ಕುಡಿಯಬಾರದೆ ಎಂದು ಕರೆದಂತಾಯಿತು . ಆದರೂ ಬೇರೆ ಕೆಲಸ ವಿದ್ದುದರಿಂದ ಮನೆ ಸೇರಿದ್ದಾಯಿತು .
ಒಟ್ಟಾರೆಯಾಗಿ 10 ದಿನಗಳಲ್ಲಿ ನನಗೆ ನೆನಪಿನ ಮೆರವಣಿಗೆ ಮಾಡಿಸಿದ "ತಾರಾಲಯದ" ನನ್ನ ಮಗಳ ಸಮ್ಮರ್ ಸ್ಕೂಲ್ ಗೆ ಧನ್ಯವಾದಗಳು . ಅಯ್ಯೋ ದಿನಾ ಹೋಗಬೇಕಲ್ಲಾ ಎಂದು ಭಾವಿಸಿದ್ದಾರೆ ಈ ನೆನಪಿನ ಮೆರವಣಿಗೆ ನನಗೆ ದಕ್ಕುತ್ತಿರಲಿಲ್ಲ.

ನಿನ್ನೆಯ ವರದಿ:

ಈಗ್ಗೆ 10 ದಿನಗಳಿಂದ ಸೆಂಟ್ರಲ್ ಬೆಂಗಳೂರಿನಲ್ಲಿ ಡ್ರೈವ್ ಮಾದುತ್ತಿದ್ದೇನೆ . ಬಸವನಗುಡಿ ಎಂಬ ಸುಂದರ ಹಸಿರಿನ "ಮಹಾಪ್ರಪಂಚ " ದಿಂದ ಹೊರಬಂದಾಗಲೇ ನಿಜವಾದ ಬೆಂಗಳೂರಿನ ದರ್ಶನವಾಗುವುದು . ಬಸವನಗುಡಿ - ಜೆ ಸಿ ರಸ್ತೆ - ಮೈಸೂರ್ ಬ್ಯಾಂಕ್ - ಪ್ಯಾಲೇಸ್ ರಸ್ತೆ - ಚಾಲುಕ್ಯ ಹೋಟೆಲ್ - ತಾರಾಲಯ - ನೃಪ ತುಂಗರಸ್ತೆ - ಸಿದ್ದಯ್ಯರಸ್ತೆ - ಲಾಲಭಾಗ್ - ಕೃ ಮ್ ಬಿಗಲ್ ರಸ್ತೆ - ವಾಡಿಯರಸ್ತೆ - ಬಸವನಗುಡಿ .
ಈ ಸರ್ಕ್ಯೂಟ್ ಕೇವಲ 9 ಕಿ ಮಿ ಆದರೂ , ಸುಂದರವಾದ ಸರ್ಕ್ಯೂಟ್ . ಚಾರಿತ್ರಿಕವಾದದ್ದು . ಆದರೂ ಎ ಸಿ ಕಾರಿನಲ್ಲಿ ಕೂತು, ಹಾಡುಹಾಕಿಕೊಂಡು ಜುಮ್ಮೆಂದು ಹೋಗುವುದಕ್ಕೂ ಸ್ವಂತ ಡ್ರೈವ್ ಮಾದುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ ಅನ್ನಿಸಿತು. ಏನೇ ಆಗಲಿ ನಮ್ಮ ಬಸವನಗುಡಿ ಬಂದತಕ್ಷಣ ರಸ್ತೆಯ ಇಕ್ಕೆಲದ ಮರಗಳು " ಸಾಮ್ರಾಟ ಅಶೋಕ ಚಕ್ರವರ್ತಿಯನ್ನು " ನೆನಪಿಸುತ್ತದೆ . ಅದಕ್ಕೆ ಬಸವನಗುಡಿ ರಿಯಲ್ ಎಸ್ಟೇಟ್ ರೇಟು ಆಪಾಟಿ ಹೆಚ್ಚಾಗಿರುವುದು ಅಂತ ಅರ್ಥವಾಯಿತು.
ಈ ಸರ್ಕ್ಯೂಟ್ ಪ್ರಯಾಣ 11 - 12 ಗಂಟೆಯ ಅವಧಿಯಲ್ಲಿ ಕೆವೆಲ 20 ನಿಮಿಷದಲ್ಲಾದರೆ , 1 --2 ಗಂಟೆಯ ಅವಧಿಯಲ್ಲಿ ಸುಮಾರು 90 ನಿಮಿಷಗಳಷ್ಟಾಗುತ್ತದೆ . ಇದು ನನ್ನ 10 ದಿನಗಳ ಡ್ರೈವಿಂಗ್ ನ ಸಂಶೋಧನಾ - ಸಂಖ್ಯಾಶಾಸ್ತ್ರೀಯ
ವಿವರಣೆ .!!!!!!!!!!!!!!!!!!!!!!!!!!

No comments:

Post a Comment