Wednesday 29 May 2013

ನಮ್ಮಪ್ಪನ ಊರು ಹಾವೇರಿ ಜಿಲ್ಲೆಯ ಹರವಿ

ವರದಾ ನದಿ ದಂಡೆಯ ಮೇಲಿರುವ ಸಣ್ಣ ಹಳ್ಳಿ "ಹರವಿ". reference ಹೇಳುವುದಾದರೆ ಬಂಕಾಪುರದ ಪಕ್ಕದ ಹಳ್ಳಿ . ನಮ್ಮಪ್ಪ 1940 ರ ದಶಕದಲ್ಲೇ ಉದರನಿಮಿತ್ತ ಉದ್ಯೋಗವನ್ನರಸಿ ಊರು ಬಿಟ್ಟರು . transferable ಕೆಲಸದಲ್ಲಿದ್ದುದರಿಂದ ಊರೂರು ಸುತ್ತಿ ಕೊನೆಗೆ ಬೆಂಗಳೂರಿನಲ್ಲಿ ನೆಲೆನಿಂತರು .

ನಾನು 7ನೇ ತರಗತಿಯಲ್ಲಿದ್ದಾಗ ನಮ್ಮಮ್ಮನ ಜೊತೆ ಹೋಗಿ 15 ದಿನ ಇದ್ದದ್ದು ಬಿಟ್ಟರೆ ಅಂತರ ಇಷ್ಟು ಸುಧೀರ್ಘ ವಾಗಿ ಎಂದೂ ಇರಲಿಲ್ಲ . ಆದರೆ ವರ್ಷಕ್ಕೆ ಮೂರ್ನಾಲ್ಕು ಬಾರಿ Visiting Professor ಕೆಲಸ ಮಾಡಿಕೊಂಡಿದ್ದೇನೆ .


ಆದರೆ ಈಗ ಅಲ್ಲಿ ನದಿ ಒಣಗಿ ಹೋಗಿದೆ . ನಾನು ಚಿಕ್ಕವಳಿದ್ದಾಗ ಬೇಸಗೆಯಲ್ಲೂ ಸಣ್ಣಗೆ ಹರಿಯುತ್ತಿತ್ತು .
ದಿನವೂ ಬಟ್ಟೆ ಹೊಗೆಯುವವರ ಜೊತೆ ಹೋಗಿ ನೀರಲ್ಲಿ ಕಾಲಾಡಿಸಿಕೊಂಡು ಕುಳಿತುಕೊಳ್ಳುತ್ತಿದ್ದುದು ಹಸಿರಾಗಿರುವ ನೆನಪು .ಹಚ್ಹ ಹಸುರಿನ ಹೊಲಗಳು, ಅಲ್ಲಿನ ನವಿಲುಗಳು ಕಣ್ಣ ಮುಂದೆ ಬಂದಂತಾಗುತ್ತಿದೆ .
ಹೊಲದಿಂದಬರುವಾಗ ಶೇಂಗಾ ಕಿತ್ತು ತಂದು ಮನೆಯಲ್ಲಿ ಬೇಯಿಸಿ ತಿಂದದ್ದು ಎಲ್ಲಾ ನಿನ್ನೆ ಮೊನ್ನೆ ಆದಂತಿದೆ. .
ಪಕ್ಕದಲ್ಲಿ ವರದ - ಧರ್ಮ ನದಿ ಸೇರುವ ಕೂಡಲ ಇದೆ .ಇಲ್ಲಿ ನಾವು ಬೆಂಗಳೂರಿನಿಂದ ಬಂದಿದ್ದೇವೆಂದು ನಮ್ಮ ಜೊತೆಗೆ ಎಲ್ಲರೂ ಬಂದು ರೊಟ್ಟಿ ಗಂಟು, ಹಿಟ್ಟಿನ ಪಲ್ಯೆ , ಬೇಳೆ ಪಲ್ಯೆ , ಪಚಡಿ , ಇತ್ಯಾದಿಗಳನ್ನು ಕೂಡಿ ತಿಂದದದ್ದು ಇನ್ನು ಹಸಿರಾದ ನೆನಪು .

ಇದನ್ನು ನೆನಪು ಮಾಡಿಕೊಳ್ಳಲು ಕಾರಣ 27 -5-2013(ನಿನ್ನೆ) ಅಲ್ಲಿ , ನಮ್ಮಪ್ಪಾಜಿಯ ತಮ್ಮನ ಮಗ ಶಿವಲಿಂಗಪ್ಪನ ಮಗಳು ಗೀತಳ ಮದುವೆಗಾಗಿ ತೆರಳಿದ್ದೆವು . ಶಿವಲಿಂಗಪ್ಪ ಬೆಂಗಳೂರಿನಲ್ಲಿ ನಮ್ಮೆಲ್ಲರೊಂದಿಗೆ ಹೈಸ್ಕೂಲ್ ಓದಿದ್ದು . junior ಎರೆಸೀಮೆ ತಂಡಗಳೊಂದಿಗೆ senior ಎರೆಸೀಮೆ ಕುಟುಂಬದ ನಾವೆಲ್ಲರೂ ಸೇರಿದ್ದು ಬಹಳ ಸುಂದರ ಸಮ್ಮಿಲನವಾಗಿತ್ತು .

ಅಲ್ಲಿನ ಬತ್ತಿಹೋದ ಹೊಳೆ , ಹೊಲ ಎಲ್ಲವನ್ನು ನನ್ನ ಮಗಳ ಕೈ ಹಿಡಿದುಕೊಂಡು ತೋರಿಸಿಕೊಂಡು ಕಾಮೆಂಟರಿ ಹೇಳುತ್ತಾ ಸಾಗಿದ್ದು ನನ್ನಿಂದ ನನ್ನ ಮಗಳಿಗೊಂದು nostalgic ಪಾಠ , ಆಕೆ ಸುಮ್ಮನೆ ಬಂದದ್ದು ನನ್ನ ಪುಣ್ಯ .
Amma enough Amma shall we go back ಎಂದು ಹೇಳದ ರೀತಿಯಲ್ಲಿ ಕರೆದುಕೊಂಡು ಹೋಗಿದ್ದು 24 ವರ್ಷದ teaching experiansu!!!!!!!!!!!!.


ಟ್ರಾನ್ಸ್ಲೇಷನ್ ಮತ್ತು ನಾನು

ಟ್ರಾನ್ಸ್ಲೇಶನ್  ಮಾಡುವುದೆಂದರೆ ಮನೆ ರಿಪೇರಿ ಕೆಲಸ ಮಾಡಿಸಿದಂತೆ . ಅಥವಾ ಇನ್ನೊಬ್ಬರ ಬಟ್ಟೆಯನ್ನು ಹಾಕಿಕೊಂಡು ಅಲ್ತ್ರೆಶನ್ ಮಾಡಿದಂತೆ . ಕೆಲವು ಭಾರಿ ಅಲ್ತ್ರೆಶನ್ ಬಹಳ ಚೆನ್ನಾಗಿ  ಫಿಟ್ ಆಗಿ ಹೊಸಬಟ್ಟೆಗಿಂತ  ಚೆನ್ನಾಗಿ ಕಾಣಬಹುದು . ಮತ್ತೆ ಕೆಲವುಬಾರಿ ಇದು ಅಲ್ತ್ರೆಶನ್ ಅಂತ ಗೊತ್ತಾಗಿ ಬಿಡುತ್ತದೆ . ಯಾವುದಕ್ಕೂ ಟೈಲರ್  ಹಾಗು ಬಟ್ಟೆಯ ಸೈಜಿನ ಮೇಲೆ ಅವಲಂಬನ  ವಾಗಿರುತ್ತದೆ .
ಟ್ರಾನ್ಸ್ಲೇಷನ್  ಕೆಅಸ ನಡೆಯುತ್ತಿದೆ . ದಿನವೆಲ್ಲಾ ಕೂತರೂ ಎರಡು ಪೇಜು ಮುಗಿಯುವುದಿಲ್ಲ . ಇದು ಎಲ್ಲರಿಗೂ  ಹೀಗೆನಾ? ಗೊತ್ತಿಲ್ಲ . .....
ಬಲ್ಲವರು ಹೇಳಬಹುದು .

 ಕೂತು ಕೂತು ಸಾಕಾಯಿತು ಅದಕ್ಕೇ ಈ ಪೋಸ್ಟು .
 

Thursday 23 May 2013

ಮಂಜುಳೆಯ ಮನೆ ಗೃಹಪ್ರವೇಶ .

    ಈಗ್ಗೆ ಎರಡುದಶಕಗಳ ಹಿಂದೆ ತಿಪಟೂರಿನಿಂದ  ಬೆಂಗಳೂರಿಗೆ ವಲಸೆ ಬಂದು ನೆಲೆನಿಂತವರಲ್ಲಿ ಮಂಜುಳಾ - ಪರಮೇಶ್ ಕುಟುಂಬವೂ ಒಂದು . ಇಂದು ಅವರು ಕಟ್ಟಿದ ಮನೆಯ ಗೃಹಪ್ರವೇಶ . ಎಲ್ಲ ಕೆಲಸ ನಿಲ್ಲಿಸಿ  ಅಲ್ಲಿಗೆ ಹೋಗಿಬಂದೆ . ನನ್ನ ಹಳೆಯ ಕಾಲೇಜಿನ ಸಹೋದ್ಯೋಗಿಗಳು ಅನೇಕ ಸ್ನೇಹಿತರೂ ಅಪ್ತೆಷ್ಟರು ಸಿಕ್ಕಿ ಸಂತೋಷವಾಯಿತು , ಹಾಗೆಯೇ ಮನಸ್ಸು ಫ್ಲಾಶ್ ಬ್ಯಾಕ್ ಗೆ ಜಾರಿತು.

  ಎರಡು ದಶಕಗಳ ಹಿಂದೆ ತಿಪಟೂರಿನ ಮದುವೆಮನೆಯಲ್ಲಿ  ಅಲಂಕಾರಭೂಶಿತೆಯಾಗಿದ್ದ ಮಂಜುಳೆಯನ್ನು ನೋಡಿದ ಪರಮೇಶ್ ಆಕೆಯ ಸ್ನಿಗ್ದ ಸೌಂದರ್ಯಕ್ಕೆ clean bold ಆಗಿಬಿಟ್ಟಿದ್ದರು . ಆ ಕೂಡಲೆ ಆಕೆಯಬಗ್ಗೆ ವಿಷಯ ಸಂಗ್ರಹಿಸಿದ ಪರಮೇಶ್ ತತ್ಕ್ಷಣ ಕಾರ್ಯಪ್ರವೃತ್ತರಾಗಿ ನಂಜುಂಡಪ್ಪ (ಮಂಜುಳೆಯ  ತಂದೆ )ನವರ ಸ್ನೇಹಿತರೊಬ್ಬರನ್ನು ಕರೆದುಕೊಂಡು ಒಂದೆರಡು ದಿನದಲ್ಲೇ ಮಂಜುಳೆಯ ಮನೆಗೆ ಹಾಜರಾಗಿ ನಿಮ್ಮ ಮಗಳನ್ನು ನನಗೆ ಕೊಡುವಿರಾ? ಎಂದು ಕೇಳಿಯೇ ಬಿಟ್ಟರು .

ಹುಡುಗನ ಬಗ್ಗೆ ಅಲ್ಲಿ  ಇಲ್ಲಿ ವಿಚಾರಿಸಿದ ನಂಜುಂಡಪ್ಪ ನವರು , ಮಗಳನ್ನು ಕೊಡಲು ಮನಸ್ಸು ಮಾಡಿದರು . ಆಗಿನ್ನೂ ಪರಮೇಶ್ ಸಣ್ಣ ಸರ್ಕಾರಿ ನೌಕರಿಯಲ್ಲಿದ್ದರು .( ಇಂದು ದೊಡ್ಡ ಅಧಿಕಾರಿ, ನನ್ನ ದೊಡ್ಡಣ್ಣ ನ  ಇಲಾಖೆಯಲ್ಲಿ!!). BSc, MSc ಎರಡೂ ಪರೀಕ್ಷೆಯನ್ನು  rank ಪಡೆದು ಪಾಸು ಮಾಡಿದ್ದ ಹಳ್ಳಿಯ ಹುಡುಗ ಪರಮೇಶನ ರೂಪವನ್ನಾಗಲಿ ಅಂತಸ್ತನ್ನಾಗಲಿ ನಂಜುಂಡಪ್ಪನವರು ಪರಿಗಣಿಸಿದ್ದರೆ ಬಹುಶಹ ಮಗಳನ್ನು ಕೊಡುತ್ತಿರಲಿಲ್ಲವೇನೋ ?
ಆದರೆ ಸಗುಣ ಸಂಪನ್ನನಾಗಿದ್ದ ಪರಮೇಶನ ಗುಣವೊಂದನ್ನೇ ನಂಜುಂಡಪ್ಪನವರು ಪರಿಗಣಿಸಿದ್ದು ಇಂದಿನ ತಂದೆ ತಾಯಿಯರಿಗೆ ಮಾದರಿ ಯಾಗ ಬಹುದು .

  ಮದುವೆಯ ನಂತರ ಬೆಂಗಳೂರಿಗೆ ಬಂಡ ಮಂಜುಳಾ ಕೆಲಸಕ್ಕೆ ಸೇರಿದ್ದು S J R ಕಾಲೇಜಿಗೆ .
ಹೊಸ ಸಂಸಾರ, ಅದಾಗ ತಾನೆ MSc ಮುಗಿಸಿದ್ದ ಮಂಜುಳಾ ನೇರವಾಗಿ  college to kitchen ಗೆ  ಬಂದವಳಾಗಿದ್ದಳು .  Staff Room ನಲ್ಲಿ ನಾನು, ಸಿದ್ದಲಿಂಗಮ್ಮ, ಸಂಧ್ಯಾ ಎಲ್ಲರೂ ಆಕೆಗೆ ದಿನಕ್ಕೊಂದು ಅಡಿಗೆ ಹೇಳಿಕೊಟ್ಟು ಮನೆಗೆ ಕಳಿಸುತ್ತಿದ್ದೆವು . ಮನೆಯಲ್ಲಿ ನಡೆದ ಆ ಪ್ರಯೋಗಕ್ಕೆ ಪರಮೇಶ್ ಮೊದಲ taster . ಒಂದು ದಿನವೂ ಹೆಂಡತಿಯ ಅಡುಗೆ ಬಗ್ಗೆ complaint ಮಾಡದ ಪರಮೇಶ್ ನಿಜಕ್ಕೂ ದೊಡ್ಡ ಮನುಷ್ಯ . ಇಂದು ಮಂಜುಳಾ 50 ಜನರಿಗೆ ರುಚಿಕಟ್ಟಾದ ಅಡುಗೆ ಮಾಡಬಲ್ಲಳು , ಇದು ಆಕೆ ಗೆದ್ದ ಚಾಲೆಂಜ್ .

   ಸುಂದರಿಯೂ  ಬುದ್ದಿವಂತೆಯೂ ಆದ ಮಂಜುಳಾ ಚೆನ್ನಾಗಿ ಓದುವ ಮುದ್ದಾದ ಮಗ ಮತ್ತು ಮಗಳ ತಾಯಿ . .ಅತ್ತೆಯ ಜೊತೆ ಸೊಸೆಯಾಗಿ ಹೊಂದಿಕೊಂಡು ನಡೆದಿರುವ ಈಕೆ ಬೆಳೆದ ಮನೆ ಕೊಟ್ಟ ಮನೆ ಎರಡನ್ನು ನಿಭಾಯಿಸಿದಳು . PhD ಮಾಡುವ  ತಾಕತ್ತು ಆಸೆ ಎಲ್ಲ ಇದ್ದಾಗ್ಯೂ ಮನೆಗೆ ಕಷ್ಟವಾಗುವುದೆಂದು ಓದನ್ನು ನಿಲ್ಲಿಸಿ ಸಂಸಾರದಲ್ಲಿ ಲೀನವಾದಳು .

   ಇಂದು ಅವರ ಮನೆಯಲ್ಲಿ ಮಂಜುಳೆಯ ತಂದೆ ಅಕ್ಕಂದಿರು ಅಣ್ಣ ಎಲ್ಲ ಸಿಕ್ಕಿದ್ದರು . ಪರಮೇಶ್ ಅವರ ತಾಯಿ ಯೂ ಸಿಕ್ಕಿದರು ." ಅಮ್ಮ ಮಗ ಸೊಸೆ ಮನೆಕಟ್ಟಿದರು ಬಹಳ ಸಂತೋಷವಾಯಿತು "ಎಂದು ನಾನು ಅಂದಾಗ, ಆ ಮುಗ್ದ, ವಿದವೆಯದ, ಅನಕ್ಷರಸ್ತ ಹಳ್ಳಿಯ ಹೆಂಗಸಿನ ಕಣ್ಣಂಚಿನ ಹೊಳಪು ಗುರುತಿಸುವವರಿಗೆ ಮಾತ್ರ ಗೊತ್ತಾಗುತ್ತಿತ್ತು .
   ದಾಂಪತ್ಯದ ಯಶಸ್ಸು ಹಣ ಅಂತಸ್ತು ಅಥವಾ ರೂಪದಲ್ಲಿಲ್ಲ . ಬದಲಿಗೆ ಬದುಕನ್ನು ಕಟ್ಟಿಕೊಳ್ಳುವ ಪರಿಯಲ್ಲಿದೆ ಎಂಬುದಕ್ಕೆ ಮಂಜುಳಾ - ಪರಮೇಶ್ ಒಂದು ಉದಾಹರಣೆಯಷ್ಟೇ . ಅವರಿಗೆ ಒಳ್ಳೆಯದಾಗಲಿ
ಎಂದು ಮತ್ತೊಮ್ಮೆ ಹಾರೈಸುತ್ತೇನೆ .



Tuesday 7 May 2013

ತಾರಾಲಯ ಸಮ್ಮರ್ ಕ್ಯಾಂಪ್ ಮತ್ತು ನಾನು

ಇಂದು ಸೆಂಟ್ರಲ್ ಬೆಂಗಳೂರಿನ ದ್ರೈವ್ ಗೆ ಕೊನೆಯದಿನ . ರಸ್ತೆಯಲ್ಲಿ ಹೋಗುವಾಗ ರವಿಂದ್ರಕಲಾಕ್ಷೇತ್ರ , ಕಾರ್ಪೋರೇಶನ್ ಕಟ್ಟಡ , ಹಡ್ಸನ್ ಸರ್ಕಲ್ , ಮೈಸೂರ್ ಬ್ಯಾಂಕ್ , ಯೂನಿವರ್ಸಿಟಿ ಲಾ ಕಾಲೇಜು ,ಬಲಗಡೆ ಸೆಂಟ್ರಲ್ ಕಾಲೇಜು , ಅರ್ ಸಿ ಕಾಲೇಜು ,ಚಾಲುಕ್ಯ ಹೋಟೆಲ್ , ಬಸವಭವನ , ಬಸವೇಶ್ವರರ ಪ್ರತಿಮೆ , ದೂರದಲ್ಲಿ ರಾಜಭವನ , ವಿಧಾನಸೌಧ ಎಲ್ಲವನ್ನು ಕಂಡು ನನ್ನ1988 - 89ರ MSc ಓದುವ ದಿನಗಳು ನೆನಪಾದವು .
ಈ ಮದ್ಯೆ "ಕಾರ್ಲ್ ಟನ್ " ಹೌಸ್ ಬಳಿ(ಮಹಾರಾಣಿ ಕಾಲೇಜು ಪಕ್ಕ) 90 ಸೆಕಂಡುಗಳ ಕಾಲ ಸಿಗ್ನಲ್ ಬಿದ್ದಿತು . ಗಾಡಿ ಆಫ್ ಮಾಡಿ ಕತ್ತೆತ್ತಿ ರಸ್ತೆಯನ್ನೊಮ್ಮೆ ನೋಡಿದೆ ಆಹಾ ಎಡ ಬಲ ಗಳಲ್ಲಿದ್ದ ಮರಗಳು ಮೈ ತುಂಬಾ ಬಣ್ಣ ಬಣ್ಣದ ಹೂಗಳನ್ನು ಹೊತ್ತು ನಿಂತಿದ್ದನ್ನು ನೋಡಿ ಮನದುಂಬಿ ಬಂದಿತು . ಸಿಗ್ನಲ್ ಬಿದ್ದಿದ್ದನ್ನು ಪಾಸಿಟಿವ್ ಆಗಿ ಉಪಯೋಗಿಸಿದ ಧನ್ಯತಾ ಭಾವ ಮೂಡಿತು .
ಇನ್ನು ವಾಪಾಸು ಬರುವಾಗ ಶೇಷಾದ್ರಿ ರಸ್ತೆಯ ಕಾಲೆಜುಶಿಕ್ಷಣ ಇಲಾಖೆ , U V C E ಇಂಜಿನೀರಿಂಗ್ ಕಾಲೇಜು , ರಿಸರ್ವ್ ಬ್ಯಾಂಕ್ , ಬಲಕ್ಕೆ St Mathas ಆಸ್ಪತ್ರೆ , ನನ್ನಪ್ಪನ ಕೊನೆಯ ದಿನಗಳು ಕಳೆದ ಆಸ್ಪತ್ರೆ , ಸಿದ್ದಯ್ಯ ರಸ್ತೆ , ಲಾಲಭಾಗ್ ರಸ್ತೆಯ ಸುಪ್ರಸಿದ್ದ MTR ಇವೆಲ್ಲವೂ ಇತಿಹಾಸದ ಭಾಗವಾದರೆ , ಲಾಲಭಾಗ್ ಪಶ್ಹಿಮ ದ್ವಾರದಲ್ಲಿ ನಿನ್ನೆ ಮೊನ್ನೆ ಓಪನ್ ಆಗಿರುವ "ಮೀರಾ ದೆಲಿಕೆಸಿ " ಅಯ್ಯೋ ಇಲ್ಲಿ ಕಾಪಿ ಕುಡಿಯಬಾರದೆ ಎಂದು ಕರೆದಂತಾಯಿತು . ಆದರೂ ಬೇರೆ ಕೆಲಸ ವಿದ್ದುದರಿಂದ ಮನೆ ಸೇರಿದ್ದಾಯಿತು .
ಒಟ್ಟಾರೆಯಾಗಿ 10 ದಿನಗಳಲ್ಲಿ ನನಗೆ ನೆನಪಿನ ಮೆರವಣಿಗೆ ಮಾಡಿಸಿದ "ತಾರಾಲಯದ" ನನ್ನ ಮಗಳ ಸಮ್ಮರ್ ಸ್ಕೂಲ್ ಗೆ ಧನ್ಯವಾದಗಳು . ಅಯ್ಯೋ ದಿನಾ ಹೋಗಬೇಕಲ್ಲಾ ಎಂದು ಭಾವಿಸಿದ್ದಾರೆ ಈ ನೆನಪಿನ ಮೆರವಣಿಗೆ ನನಗೆ ದಕ್ಕುತ್ತಿರಲಿಲ್ಲ.

ನಿನ್ನೆಯ ವರದಿ:

ಈಗ್ಗೆ 10 ದಿನಗಳಿಂದ ಸೆಂಟ್ರಲ್ ಬೆಂಗಳೂರಿನಲ್ಲಿ ಡ್ರೈವ್ ಮಾದುತ್ತಿದ್ದೇನೆ . ಬಸವನಗುಡಿ ಎಂಬ ಸುಂದರ ಹಸಿರಿನ "ಮಹಾಪ್ರಪಂಚ " ದಿಂದ ಹೊರಬಂದಾಗಲೇ ನಿಜವಾದ ಬೆಂಗಳೂರಿನ ದರ್ಶನವಾಗುವುದು . ಬಸವನಗುಡಿ - ಜೆ ಸಿ ರಸ್ತೆ - ಮೈಸೂರ್ ಬ್ಯಾಂಕ್ - ಪ್ಯಾಲೇಸ್ ರಸ್ತೆ - ಚಾಲುಕ್ಯ ಹೋಟೆಲ್ - ತಾರಾಲಯ - ನೃಪ ತುಂಗರಸ್ತೆ - ಸಿದ್ದಯ್ಯರಸ್ತೆ - ಲಾಲಭಾಗ್ - ಕೃ ಮ್ ಬಿಗಲ್ ರಸ್ತೆ - ವಾಡಿಯರಸ್ತೆ - ಬಸವನಗುಡಿ .
ಈ ಸರ್ಕ್ಯೂಟ್ ಕೇವಲ 9 ಕಿ ಮಿ ಆದರೂ , ಸುಂದರವಾದ ಸರ್ಕ್ಯೂಟ್ . ಚಾರಿತ್ರಿಕವಾದದ್ದು . ಆದರೂ ಎ ಸಿ ಕಾರಿನಲ್ಲಿ ಕೂತು, ಹಾಡುಹಾಕಿಕೊಂಡು ಜುಮ್ಮೆಂದು ಹೋಗುವುದಕ್ಕೂ ಸ್ವಂತ ಡ್ರೈವ್ ಮಾದುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ ಅನ್ನಿಸಿತು. ಏನೇ ಆಗಲಿ ನಮ್ಮ ಬಸವನಗುಡಿ ಬಂದತಕ್ಷಣ ರಸ್ತೆಯ ಇಕ್ಕೆಲದ ಮರಗಳು " ಸಾಮ್ರಾಟ ಅಶೋಕ ಚಕ್ರವರ್ತಿಯನ್ನು " ನೆನಪಿಸುತ್ತದೆ . ಅದಕ್ಕೆ ಬಸವನಗುಡಿ ರಿಯಲ್ ಎಸ್ಟೇಟ್ ರೇಟು ಆಪಾಟಿ ಹೆಚ್ಚಾಗಿರುವುದು ಅಂತ ಅರ್ಥವಾಯಿತು.
ಈ ಸರ್ಕ್ಯೂಟ್ ಪ್ರಯಾಣ 11 - 12 ಗಂಟೆಯ ಅವಧಿಯಲ್ಲಿ ಕೆವೆಲ 20 ನಿಮಿಷದಲ್ಲಾದರೆ , 1 --2 ಗಂಟೆಯ ಅವಧಿಯಲ್ಲಿ ಸುಮಾರು 90 ನಿಮಿಷಗಳಷ್ಟಾಗುತ್ತದೆ . ಇದು ನನ್ನ 10 ದಿನಗಳ ಡ್ರೈವಿಂಗ್ ನ ಸಂಶೋಧನಾ - ಸಂಖ್ಯಾಶಾಸ್ತ್ರೀಯ
ವಿವರಣೆ .!!!!!!!!!!!!!!!!!!!!!!!!!!

ಡಾ . ಸುಲೋಚನ ಗುಣಶೀಲ ವ್ಯಕ್ತಿಯಲ್ಲ ಶಕ್ತಿ .


    ದಿನಾಂಕ 5 -5 - 2 0 1 3 ರ ರ ಸಂಜೆ ಫೋನ್ ಮಾಡಿದ ದೇವಿಕ ಗುಣಶೀಲ , ನಮ್ಮ ತಾಯಿಯವರ ಸ್ಮರಣಾರ್ಥ ಹೋಟೆಲ್ ಲಲಿತ್ ಅಶೋಕದಲ್ಲಿ 6 - 5 -2013 ರ ರ ಸಂಜೆ BSOG ಒಂದು ಕಾರ್ಯಕ್ರಮ ಏರ್ಪಡಿಸಿದ್ದಾರೆ , ನೀವು ಮಾತನಾಡುವಿರಾ ? ಎಂದು ಕೇಳಿದಾಗ ಸಂತೋಷವಾಗಿ ಒಪ್ಪಿಕೊಂಡೆ .
ದಾ. ಸುಲೋಚನ ಗುನಶೀಲರ ಬಗ್ಗೆ ಮಾತನಾಡುವುದೆಂದರೆ ಮನದುಂಬಿ ಬರುತ್ತದೆ . ನೂರಾರು ಜನ ಮಾತನಾದುವವರಿದ್ದರೂ ನನ್ನ ಭಾಷಣದೊಂದಿಗೆ ನಿನ್ನೆ ರಾತ್ರಿಯ ಕಾರ್ಯಕ್ರಮ ಮುಕ್ತಾಯವಾಯಿತು . ಅದಾಗಲೇ ಒಂಭತ್ತು ಗಂಟೆಯಾಗಿತ್ತು . ಏಕೊ ಬೇಡವೆಂದರೂ ಇಂದು ಸುಲೋಚನ ಪದೇ ಪದೇ ನೆನಪಾಗುತ್ತಿದ್ದಾರೆ . ಆಕೆಯ ವ್ಯಕ್ತಿತ್ವವೇ ಹಾಗಿತ್ತು .

      ಈಗ್ಗೆ ಆರೇಳು ವರ್ಷಗಳ ಹಿಂದೆ ಹಂಪಿ ವಿಶ್ವವಿದ್ಯಾಲಯದ ಮಹಿಳೆ ಮತ್ತು ವಿಜ್ಞಾನ ಎಂಬ ವಿಶ್ವಕೋಶದ ಸಂಭಂದ ನಮ್ಮಿಬ್ಬರ ಸ್ನೇಹ ಶುರುವಾಗಿತ್ತು . ನಾನು ವೈದ್ಯೆಯಲ್ಲದಿದ್ದರೂ ನನ್ನ ಬಗೆಗೆ ಆಕೆ ತೋರಿದ ಅಕ್ಕರೆ ಮತ್ತು ಸೆಳೆತ ನನ್ನನ್ನು ಚಕಿತ ಗೊಳಿಸುತ್ತದೆ . ಅನಂತರದ ದಿನಗಳಲ್ಲಿ ಆಕೆ ನಮ್ಮ ಮನೆಗೂ ನಾನು ಅವರ ಆಸ್ಪತ್ರೆ ಮನೆಗೂ ಹೋಗಿ ಕುಳಿತು ಮನಬಿಚ್ಚಿ ಮಾತನಾಡುವುದು ಸಾಗಿತ್ತು . ಈ ಹಂತದಲ್ಲಿ ಅವರಿಗೆ ನಾನು ಆಟೋಬಯಾಗ್ರಫಿ ಬರೆಯಲು ಸೂಚಿಸಿದೆ ." ಆಗ ಅವರು ನಾನೇನ್ ಮಾಹಾ ಸಾಧನೆ ಮಾಡಿದ್ದೇನೆ ? ಅದೂ ಅಲ್ಲದೆ ನನ್ನ ಬಯಾಗ್ರಫಿ ಯಾರು ಓದುತ್ತಾರೆ ? " ಎಂದೆಲ್ಲ ಹೇಳಿ ತಳ್ಳಿಹಾಕಿಬಿದುತ್ತಿದ್ದರು . ಕೆಲವು ವೇಳೆ ಸಾತ್ವಿಕ ಕಾರಣಗಳಿಗೆ ನಾನೂ ಹಟಮಾರಿಯೇ ಅನ್ನಿ !. ಇಲ್ಲಿಗೆ ಬಿಡದ ನಾನು ಅವರಿಗೆ ಏಳೆಂಟು ಬಯಾಗ್ರಫಿ ಪುಸ್ತಕ ಉದುಗೊರೆನೀಡಿ ಇದನ್ನು ಓದಿ ಆನಂತರ ಬಯಾಗ್ರಫಿ ಬಗ್ಗೆ ಯೋಚನೆ ಮಾಡಿ ಎಂದುಹೇಳಿ ಅವರ ಮನೆಯಿಂದ ಹೊರಟು ಬಂದಿದ್ದೆ . ಇದಾದ ಕೆಲವು ತಿಂಗಳ ನಂತರ ಫೋನ್ ಮಾಡಿದ ಸುಲೋಚನ "ರೀ ಕಮಲಾ ನಾನು ಬರೆಯೋಕೆ ಪ್ರಾರಂಭಿಸಿದ್ದೇನೆ ಎಂದು ಹೇಳಿದರು . ಆಗ ಬಹಳ ಸಂತೋಷಪಟ್ಟ ನಾನು ಒಳ್ಳೆಯದು ಬೇಗ ಬರೆದು ಮುಗಿಸಿ ಎಂದು ಹೇಳಿದೆ . ಅನಂತರ ಕಾರಣಾಂತರಗಳಿಂದ ಅದನ್ನು ನಾನೇ ಬರೆಯುವಂತಾದದ್ದು ದೈವಸಂಕಲ್ಪವಷ್ಟೇ . ಅದಕ್ಕೆ ಆ ಪುಸ್ತಕದಲ್ಲಿ " ಈ ಪುಸ್ತಕವನ್ನು ನಾನು ಬರೆದೆ ಎಂದು ಹೇಳಿದರೆ ಅಹಂಕಾರದ ಮಾತಾದೀತು " ಎಂದು ಸೇರಿಸಿದ್ದೇನೆ .

     ಬರೆಯುವ ಪ್ರಕ್ರಿಯೆ ಪ್ರಾರಂಭವಾದಾಗ ಒಮ್ಮೆ ಫೋನ್ ಮಾಡಿದ ಅವರು " ಮೊದಲ ಕಂತಿನ ಡ್ರಾಫ್ಟ್ ಯಾವಾಗ ಕೊಡುತ್ತೀ" ?
ಎಂದು ಕೇಳಿದರು . ನಾನು ಒಂದು ತಿಂಗಳು ಎಂದು ಹೇಳಿದೆ . ಅಲ್ಲಿಗೆ ಮರೆತೂ ಬಿಟ್ಟಿದ್ದೆ ಅನ್ನಿ !.
ತಿಂಗಳು ತುಂಬಿದದಿನ ಬೆಳಗ್ಗೆ ನನ್ನ ಮೊಬೈಲಿನಲ್ಲಿ ಸದ್ದಾಗಿ ಸುಲೋಚನ ಎಂದು ಹೆಸರು ನೋಡಿದ ಕೂಡಲೆ ನನ್ನ ಬೆವರು ಹರಿದಿತ್ತು . ಫೋನ್ ಎತ್ತಿದ ಕೂಡಲೇ "ಕೆಲಸ ಆಗಿದೆಯಾ ? ನನ್ನ ಡ್ರೈವರ್ ಕಳಿಸುತ್ತೇನೆ ಡ್ರಾಫ್ಟ್ ಕೊಟ್ಟು ಕಳಿಸು ವಿರಾ " ಎಂದಾಗ ಸುಲೋಚನ ಜೊತೆಗೆ ನಾನು ಹೇಗೆ ಕೆಲಸ ಮಾಡಬೇಕೆಂಬುದು ಅರ್ಥವಾಗಿಹೊಗಿತ್ತು . ಡ್ರಾಫ್ಟ್ ತಲುಪಿದ ಕೆಲವೇ ದಿನಗಳಲ್ಲಿ ಅದನ್ನು ಸಂಸ್ಕರಿಸಿ ನನಗೆ ತಲುಪಿಸುತ್ತಿದ್ದ ಆಕೆ ನಾನು ಹೇಗೆ ಕೆಲಸ ಮಾಡಬೇಕೆಂಬುದನ್ನು ಕೃತಿಯಲ್ಲಿ ತೋರಿಸಿ ಬಿಟ್ಟಿದ್ದರು .

   ಪುಸ್ತಕದ ಕೆಲಸಕ್ಕೂ ಮುಂಚೆಯಾಗಲಿ , ಮುಗಿಯುವವರೆಗಾಗಲಿ ,ಅನಂತರವೂ ಆಕೆ ನನ್ನನ್ನು ಕಾಯ್ದಪರಿ ಜೀವನ ಪೂರ್ತಿ ನೆನೆಸಿ ಕೊಳ್ಳುವಂತಾದ್ದು .
ಆಕೆ ಹಾನ್ ಕಾಂಗ್ ಗೆ ಚಿಕಿತ್ಸೆಗೆ ತೆರಳುವಮುನ್ನ ಮನೆಗೆ ಕರೆದು ಉಪಚರಿಸಿ ಬಿಗಿದಪ್ಪಿದ ಸುಲೋಚನ " ಕಮಲಾ ನನ್ನ ಕೊನೆಯ ದಿನಗಳನ್ನು ಬಹಳ interesting ಆಗಿ ಕಳೆಯುವಂತೆ ಮಾಡಿದೆ . ಈ ಪುಸ್ತಕ ರಚನೆಯಲ್ಲಿ ತೊಡಗದಿದ್ದರೆ ನಾನು ಹೇಗೆ ಸಮಯ ಕಳೆಯುತ್ತಿದ್ದೇನೋ ಗೊತ್ತಿಲ್ಲ ". ಎಂದು ಹೇಳಿದಾಗ ಧನ್ಯತೆಯ ಭಾವಮೂಡಿ ಭಾವುಕಳಾಗಿದ್ದೆ . ಇದೆಲ್ಲವನ್ನೂ ನಿನ್ನೆಯ ಭಾಷಣದಲ್ಲಿ ಹೇಳಬೇಕೆಂದರೆ ಸಮಯಾಭಾವ ವಿದ್ದುದರಿಂದ ಬೇರೆ dimension ಹೇಳಿದ್ದಾಯಿತು . ಏಕೊ ಏನೊ ಮನಸ್ಸು ನಿನ್ನೆಯಿಂದ ಮನಸ್ಸು ಆಕೆಯನ್ನು ಬಹುವಾಗಿ ನೆನೆಪಿಸಿತು .