Thursday 23 May 2013

ಮಂಜುಳೆಯ ಮನೆ ಗೃಹಪ್ರವೇಶ .

    ಈಗ್ಗೆ ಎರಡುದಶಕಗಳ ಹಿಂದೆ ತಿಪಟೂರಿನಿಂದ  ಬೆಂಗಳೂರಿಗೆ ವಲಸೆ ಬಂದು ನೆಲೆನಿಂತವರಲ್ಲಿ ಮಂಜುಳಾ - ಪರಮೇಶ್ ಕುಟುಂಬವೂ ಒಂದು . ಇಂದು ಅವರು ಕಟ್ಟಿದ ಮನೆಯ ಗೃಹಪ್ರವೇಶ . ಎಲ್ಲ ಕೆಲಸ ನಿಲ್ಲಿಸಿ  ಅಲ್ಲಿಗೆ ಹೋಗಿಬಂದೆ . ನನ್ನ ಹಳೆಯ ಕಾಲೇಜಿನ ಸಹೋದ್ಯೋಗಿಗಳು ಅನೇಕ ಸ್ನೇಹಿತರೂ ಅಪ್ತೆಷ್ಟರು ಸಿಕ್ಕಿ ಸಂತೋಷವಾಯಿತು , ಹಾಗೆಯೇ ಮನಸ್ಸು ಫ್ಲಾಶ್ ಬ್ಯಾಕ್ ಗೆ ಜಾರಿತು.

  ಎರಡು ದಶಕಗಳ ಹಿಂದೆ ತಿಪಟೂರಿನ ಮದುವೆಮನೆಯಲ್ಲಿ  ಅಲಂಕಾರಭೂಶಿತೆಯಾಗಿದ್ದ ಮಂಜುಳೆಯನ್ನು ನೋಡಿದ ಪರಮೇಶ್ ಆಕೆಯ ಸ್ನಿಗ್ದ ಸೌಂದರ್ಯಕ್ಕೆ clean bold ಆಗಿಬಿಟ್ಟಿದ್ದರು . ಆ ಕೂಡಲೆ ಆಕೆಯಬಗ್ಗೆ ವಿಷಯ ಸಂಗ್ರಹಿಸಿದ ಪರಮೇಶ್ ತತ್ಕ್ಷಣ ಕಾರ್ಯಪ್ರವೃತ್ತರಾಗಿ ನಂಜುಂಡಪ್ಪ (ಮಂಜುಳೆಯ  ತಂದೆ )ನವರ ಸ್ನೇಹಿತರೊಬ್ಬರನ್ನು ಕರೆದುಕೊಂಡು ಒಂದೆರಡು ದಿನದಲ್ಲೇ ಮಂಜುಳೆಯ ಮನೆಗೆ ಹಾಜರಾಗಿ ನಿಮ್ಮ ಮಗಳನ್ನು ನನಗೆ ಕೊಡುವಿರಾ? ಎಂದು ಕೇಳಿಯೇ ಬಿಟ್ಟರು .

ಹುಡುಗನ ಬಗ್ಗೆ ಅಲ್ಲಿ  ಇಲ್ಲಿ ವಿಚಾರಿಸಿದ ನಂಜುಂಡಪ್ಪ ನವರು , ಮಗಳನ್ನು ಕೊಡಲು ಮನಸ್ಸು ಮಾಡಿದರು . ಆಗಿನ್ನೂ ಪರಮೇಶ್ ಸಣ್ಣ ಸರ್ಕಾರಿ ನೌಕರಿಯಲ್ಲಿದ್ದರು .( ಇಂದು ದೊಡ್ಡ ಅಧಿಕಾರಿ, ನನ್ನ ದೊಡ್ಡಣ್ಣ ನ  ಇಲಾಖೆಯಲ್ಲಿ!!). BSc, MSc ಎರಡೂ ಪರೀಕ್ಷೆಯನ್ನು  rank ಪಡೆದು ಪಾಸು ಮಾಡಿದ್ದ ಹಳ್ಳಿಯ ಹುಡುಗ ಪರಮೇಶನ ರೂಪವನ್ನಾಗಲಿ ಅಂತಸ್ತನ್ನಾಗಲಿ ನಂಜುಂಡಪ್ಪನವರು ಪರಿಗಣಿಸಿದ್ದರೆ ಬಹುಶಹ ಮಗಳನ್ನು ಕೊಡುತ್ತಿರಲಿಲ್ಲವೇನೋ ?
ಆದರೆ ಸಗುಣ ಸಂಪನ್ನನಾಗಿದ್ದ ಪರಮೇಶನ ಗುಣವೊಂದನ್ನೇ ನಂಜುಂಡಪ್ಪನವರು ಪರಿಗಣಿಸಿದ್ದು ಇಂದಿನ ತಂದೆ ತಾಯಿಯರಿಗೆ ಮಾದರಿ ಯಾಗ ಬಹುದು .

  ಮದುವೆಯ ನಂತರ ಬೆಂಗಳೂರಿಗೆ ಬಂಡ ಮಂಜುಳಾ ಕೆಲಸಕ್ಕೆ ಸೇರಿದ್ದು S J R ಕಾಲೇಜಿಗೆ .
ಹೊಸ ಸಂಸಾರ, ಅದಾಗ ತಾನೆ MSc ಮುಗಿಸಿದ್ದ ಮಂಜುಳಾ ನೇರವಾಗಿ  college to kitchen ಗೆ  ಬಂದವಳಾಗಿದ್ದಳು .  Staff Room ನಲ್ಲಿ ನಾನು, ಸಿದ್ದಲಿಂಗಮ್ಮ, ಸಂಧ್ಯಾ ಎಲ್ಲರೂ ಆಕೆಗೆ ದಿನಕ್ಕೊಂದು ಅಡಿಗೆ ಹೇಳಿಕೊಟ್ಟು ಮನೆಗೆ ಕಳಿಸುತ್ತಿದ್ದೆವು . ಮನೆಯಲ್ಲಿ ನಡೆದ ಆ ಪ್ರಯೋಗಕ್ಕೆ ಪರಮೇಶ್ ಮೊದಲ taster . ಒಂದು ದಿನವೂ ಹೆಂಡತಿಯ ಅಡುಗೆ ಬಗ್ಗೆ complaint ಮಾಡದ ಪರಮೇಶ್ ನಿಜಕ್ಕೂ ದೊಡ್ಡ ಮನುಷ್ಯ . ಇಂದು ಮಂಜುಳಾ 50 ಜನರಿಗೆ ರುಚಿಕಟ್ಟಾದ ಅಡುಗೆ ಮಾಡಬಲ್ಲಳು , ಇದು ಆಕೆ ಗೆದ್ದ ಚಾಲೆಂಜ್ .

   ಸುಂದರಿಯೂ  ಬುದ್ದಿವಂತೆಯೂ ಆದ ಮಂಜುಳಾ ಚೆನ್ನಾಗಿ ಓದುವ ಮುದ್ದಾದ ಮಗ ಮತ್ತು ಮಗಳ ತಾಯಿ . .ಅತ್ತೆಯ ಜೊತೆ ಸೊಸೆಯಾಗಿ ಹೊಂದಿಕೊಂಡು ನಡೆದಿರುವ ಈಕೆ ಬೆಳೆದ ಮನೆ ಕೊಟ್ಟ ಮನೆ ಎರಡನ್ನು ನಿಭಾಯಿಸಿದಳು . PhD ಮಾಡುವ  ತಾಕತ್ತು ಆಸೆ ಎಲ್ಲ ಇದ್ದಾಗ್ಯೂ ಮನೆಗೆ ಕಷ್ಟವಾಗುವುದೆಂದು ಓದನ್ನು ನಿಲ್ಲಿಸಿ ಸಂಸಾರದಲ್ಲಿ ಲೀನವಾದಳು .

   ಇಂದು ಅವರ ಮನೆಯಲ್ಲಿ ಮಂಜುಳೆಯ ತಂದೆ ಅಕ್ಕಂದಿರು ಅಣ್ಣ ಎಲ್ಲ ಸಿಕ್ಕಿದ್ದರು . ಪರಮೇಶ್ ಅವರ ತಾಯಿ ಯೂ ಸಿಕ್ಕಿದರು ." ಅಮ್ಮ ಮಗ ಸೊಸೆ ಮನೆಕಟ್ಟಿದರು ಬಹಳ ಸಂತೋಷವಾಯಿತು "ಎಂದು ನಾನು ಅಂದಾಗ, ಆ ಮುಗ್ದ, ವಿದವೆಯದ, ಅನಕ್ಷರಸ್ತ ಹಳ್ಳಿಯ ಹೆಂಗಸಿನ ಕಣ್ಣಂಚಿನ ಹೊಳಪು ಗುರುತಿಸುವವರಿಗೆ ಮಾತ್ರ ಗೊತ್ತಾಗುತ್ತಿತ್ತು .
   ದಾಂಪತ್ಯದ ಯಶಸ್ಸು ಹಣ ಅಂತಸ್ತು ಅಥವಾ ರೂಪದಲ್ಲಿಲ್ಲ . ಬದಲಿಗೆ ಬದುಕನ್ನು ಕಟ್ಟಿಕೊಳ್ಳುವ ಪರಿಯಲ್ಲಿದೆ ಎಂಬುದಕ್ಕೆ ಮಂಜುಳಾ - ಪರಮೇಶ್ ಒಂದು ಉದಾಹರಣೆಯಷ್ಟೇ . ಅವರಿಗೆ ಒಳ್ಳೆಯದಾಗಲಿ
ಎಂದು ಮತ್ತೊಮ್ಮೆ ಹಾರೈಸುತ್ತೇನೆ .



No comments:

Post a Comment