Tuesday 7 May 2013

ಡಾ . ಸುಲೋಚನ ಗುಣಶೀಲ ವ್ಯಕ್ತಿಯಲ್ಲ ಶಕ್ತಿ .


    ದಿನಾಂಕ 5 -5 - 2 0 1 3 ರ ರ ಸಂಜೆ ಫೋನ್ ಮಾಡಿದ ದೇವಿಕ ಗುಣಶೀಲ , ನಮ್ಮ ತಾಯಿಯವರ ಸ್ಮರಣಾರ್ಥ ಹೋಟೆಲ್ ಲಲಿತ್ ಅಶೋಕದಲ್ಲಿ 6 - 5 -2013 ರ ರ ಸಂಜೆ BSOG ಒಂದು ಕಾರ್ಯಕ್ರಮ ಏರ್ಪಡಿಸಿದ್ದಾರೆ , ನೀವು ಮಾತನಾಡುವಿರಾ ? ಎಂದು ಕೇಳಿದಾಗ ಸಂತೋಷವಾಗಿ ಒಪ್ಪಿಕೊಂಡೆ .
ದಾ. ಸುಲೋಚನ ಗುನಶೀಲರ ಬಗ್ಗೆ ಮಾತನಾಡುವುದೆಂದರೆ ಮನದುಂಬಿ ಬರುತ್ತದೆ . ನೂರಾರು ಜನ ಮಾತನಾದುವವರಿದ್ದರೂ ನನ್ನ ಭಾಷಣದೊಂದಿಗೆ ನಿನ್ನೆ ರಾತ್ರಿಯ ಕಾರ್ಯಕ್ರಮ ಮುಕ್ತಾಯವಾಯಿತು . ಅದಾಗಲೇ ಒಂಭತ್ತು ಗಂಟೆಯಾಗಿತ್ತು . ಏಕೊ ಬೇಡವೆಂದರೂ ಇಂದು ಸುಲೋಚನ ಪದೇ ಪದೇ ನೆನಪಾಗುತ್ತಿದ್ದಾರೆ . ಆಕೆಯ ವ್ಯಕ್ತಿತ್ವವೇ ಹಾಗಿತ್ತು .

      ಈಗ್ಗೆ ಆರೇಳು ವರ್ಷಗಳ ಹಿಂದೆ ಹಂಪಿ ವಿಶ್ವವಿದ್ಯಾಲಯದ ಮಹಿಳೆ ಮತ್ತು ವಿಜ್ಞಾನ ಎಂಬ ವಿಶ್ವಕೋಶದ ಸಂಭಂದ ನಮ್ಮಿಬ್ಬರ ಸ್ನೇಹ ಶುರುವಾಗಿತ್ತು . ನಾನು ವೈದ್ಯೆಯಲ್ಲದಿದ್ದರೂ ನನ್ನ ಬಗೆಗೆ ಆಕೆ ತೋರಿದ ಅಕ್ಕರೆ ಮತ್ತು ಸೆಳೆತ ನನ್ನನ್ನು ಚಕಿತ ಗೊಳಿಸುತ್ತದೆ . ಅನಂತರದ ದಿನಗಳಲ್ಲಿ ಆಕೆ ನಮ್ಮ ಮನೆಗೂ ನಾನು ಅವರ ಆಸ್ಪತ್ರೆ ಮನೆಗೂ ಹೋಗಿ ಕುಳಿತು ಮನಬಿಚ್ಚಿ ಮಾತನಾಡುವುದು ಸಾಗಿತ್ತು . ಈ ಹಂತದಲ್ಲಿ ಅವರಿಗೆ ನಾನು ಆಟೋಬಯಾಗ್ರಫಿ ಬರೆಯಲು ಸೂಚಿಸಿದೆ ." ಆಗ ಅವರು ನಾನೇನ್ ಮಾಹಾ ಸಾಧನೆ ಮಾಡಿದ್ದೇನೆ ? ಅದೂ ಅಲ್ಲದೆ ನನ್ನ ಬಯಾಗ್ರಫಿ ಯಾರು ಓದುತ್ತಾರೆ ? " ಎಂದೆಲ್ಲ ಹೇಳಿ ತಳ್ಳಿಹಾಕಿಬಿದುತ್ತಿದ್ದರು . ಕೆಲವು ವೇಳೆ ಸಾತ್ವಿಕ ಕಾರಣಗಳಿಗೆ ನಾನೂ ಹಟಮಾರಿಯೇ ಅನ್ನಿ !. ಇಲ್ಲಿಗೆ ಬಿಡದ ನಾನು ಅವರಿಗೆ ಏಳೆಂಟು ಬಯಾಗ್ರಫಿ ಪುಸ್ತಕ ಉದುಗೊರೆನೀಡಿ ಇದನ್ನು ಓದಿ ಆನಂತರ ಬಯಾಗ್ರಫಿ ಬಗ್ಗೆ ಯೋಚನೆ ಮಾಡಿ ಎಂದುಹೇಳಿ ಅವರ ಮನೆಯಿಂದ ಹೊರಟು ಬಂದಿದ್ದೆ . ಇದಾದ ಕೆಲವು ತಿಂಗಳ ನಂತರ ಫೋನ್ ಮಾಡಿದ ಸುಲೋಚನ "ರೀ ಕಮಲಾ ನಾನು ಬರೆಯೋಕೆ ಪ್ರಾರಂಭಿಸಿದ್ದೇನೆ ಎಂದು ಹೇಳಿದರು . ಆಗ ಬಹಳ ಸಂತೋಷಪಟ್ಟ ನಾನು ಒಳ್ಳೆಯದು ಬೇಗ ಬರೆದು ಮುಗಿಸಿ ಎಂದು ಹೇಳಿದೆ . ಅನಂತರ ಕಾರಣಾಂತರಗಳಿಂದ ಅದನ್ನು ನಾನೇ ಬರೆಯುವಂತಾದದ್ದು ದೈವಸಂಕಲ್ಪವಷ್ಟೇ . ಅದಕ್ಕೆ ಆ ಪುಸ್ತಕದಲ್ಲಿ " ಈ ಪುಸ್ತಕವನ್ನು ನಾನು ಬರೆದೆ ಎಂದು ಹೇಳಿದರೆ ಅಹಂಕಾರದ ಮಾತಾದೀತು " ಎಂದು ಸೇರಿಸಿದ್ದೇನೆ .

     ಬರೆಯುವ ಪ್ರಕ್ರಿಯೆ ಪ್ರಾರಂಭವಾದಾಗ ಒಮ್ಮೆ ಫೋನ್ ಮಾಡಿದ ಅವರು " ಮೊದಲ ಕಂತಿನ ಡ್ರಾಫ್ಟ್ ಯಾವಾಗ ಕೊಡುತ್ತೀ" ?
ಎಂದು ಕೇಳಿದರು . ನಾನು ಒಂದು ತಿಂಗಳು ಎಂದು ಹೇಳಿದೆ . ಅಲ್ಲಿಗೆ ಮರೆತೂ ಬಿಟ್ಟಿದ್ದೆ ಅನ್ನಿ !.
ತಿಂಗಳು ತುಂಬಿದದಿನ ಬೆಳಗ್ಗೆ ನನ್ನ ಮೊಬೈಲಿನಲ್ಲಿ ಸದ್ದಾಗಿ ಸುಲೋಚನ ಎಂದು ಹೆಸರು ನೋಡಿದ ಕೂಡಲೆ ನನ್ನ ಬೆವರು ಹರಿದಿತ್ತು . ಫೋನ್ ಎತ್ತಿದ ಕೂಡಲೇ "ಕೆಲಸ ಆಗಿದೆಯಾ ? ನನ್ನ ಡ್ರೈವರ್ ಕಳಿಸುತ್ತೇನೆ ಡ್ರಾಫ್ಟ್ ಕೊಟ್ಟು ಕಳಿಸು ವಿರಾ " ಎಂದಾಗ ಸುಲೋಚನ ಜೊತೆಗೆ ನಾನು ಹೇಗೆ ಕೆಲಸ ಮಾಡಬೇಕೆಂಬುದು ಅರ್ಥವಾಗಿಹೊಗಿತ್ತು . ಡ್ರಾಫ್ಟ್ ತಲುಪಿದ ಕೆಲವೇ ದಿನಗಳಲ್ಲಿ ಅದನ್ನು ಸಂಸ್ಕರಿಸಿ ನನಗೆ ತಲುಪಿಸುತ್ತಿದ್ದ ಆಕೆ ನಾನು ಹೇಗೆ ಕೆಲಸ ಮಾಡಬೇಕೆಂಬುದನ್ನು ಕೃತಿಯಲ್ಲಿ ತೋರಿಸಿ ಬಿಟ್ಟಿದ್ದರು .

   ಪುಸ್ತಕದ ಕೆಲಸಕ್ಕೂ ಮುಂಚೆಯಾಗಲಿ , ಮುಗಿಯುವವರೆಗಾಗಲಿ ,ಅನಂತರವೂ ಆಕೆ ನನ್ನನ್ನು ಕಾಯ್ದಪರಿ ಜೀವನ ಪೂರ್ತಿ ನೆನೆಸಿ ಕೊಳ್ಳುವಂತಾದ್ದು .
ಆಕೆ ಹಾನ್ ಕಾಂಗ್ ಗೆ ಚಿಕಿತ್ಸೆಗೆ ತೆರಳುವಮುನ್ನ ಮನೆಗೆ ಕರೆದು ಉಪಚರಿಸಿ ಬಿಗಿದಪ್ಪಿದ ಸುಲೋಚನ " ಕಮಲಾ ನನ್ನ ಕೊನೆಯ ದಿನಗಳನ್ನು ಬಹಳ interesting ಆಗಿ ಕಳೆಯುವಂತೆ ಮಾಡಿದೆ . ಈ ಪುಸ್ತಕ ರಚನೆಯಲ್ಲಿ ತೊಡಗದಿದ್ದರೆ ನಾನು ಹೇಗೆ ಸಮಯ ಕಳೆಯುತ್ತಿದ್ದೇನೋ ಗೊತ್ತಿಲ್ಲ ". ಎಂದು ಹೇಳಿದಾಗ ಧನ್ಯತೆಯ ಭಾವಮೂಡಿ ಭಾವುಕಳಾಗಿದ್ದೆ . ಇದೆಲ್ಲವನ್ನೂ ನಿನ್ನೆಯ ಭಾಷಣದಲ್ಲಿ ಹೇಳಬೇಕೆಂದರೆ ಸಮಯಾಭಾವ ವಿದ್ದುದರಿಂದ ಬೇರೆ dimension ಹೇಳಿದ್ದಾಯಿತು . ಏಕೊ ಏನೊ ಮನಸ್ಸು ನಿನ್ನೆಯಿಂದ ಮನಸ್ಸು ಆಕೆಯನ್ನು ಬಹುವಾಗಿ ನೆನೆಪಿಸಿತು .

No comments:

Post a Comment