Friday 19 April 2019

ಮಹಿಳೆ ವಿಜ್ಞಾನ ಮತ್ತು ಎಫ್ ಆರ್ ಎಸ್ ಗೌರವ


ಮಹಿಳೆ ವಿಜ್ಞಾನ ಮತ್ತು ಎಫ್ ಆರ್ ಎಸ್ ಗೌರವ ವಿಸ್ತಾರವಾದ ಕ್ಷೇತ್ರವೇ ಆಗಿದೆ.
ಆದರೆ ಇತ್ತೀಚಿಗೆ ಭಾರತೀಯ ಮಹಿಳೆ ಗಗನದೀಪ್ ಕಾಂಗ್ ಅವರಿಗೆ ಲಂಡನ್ ನಲ್ಲಿರುವ ರಾಯಲ್ ಸೊಸೈಟಿಯು ತನ್ನ ಸದಸ್ಯತ್ವ - ಎಫ್ ಆರ್ ಎಸ್ ಅನ್ನು ನೀಡಿ ಗೌರವಿಸಿದೆ. ಗಗಣದೀಪ್ ಕಾಂಗ್ ಫರೀದಾಬಾದ್ ನಲ್ಲಿರುವ Translational Health Science and Technology Institute (THSTI)ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕಿಯಾಗಿರುವರು.

ಅಧುನಿಕ ವಿಜ್ಞಾನ ವ್ಯಕ್ತಿಗತ ನೆಲೆಯಿಂದ ಸಾಂಸ್ಥಿಕನೆಲೆಗೆ ಸ್ಥಿತ್ಯಂತರ ಗೊಳ್ಳುವ ಹೊತ್ತಿನಲ್ಲಿ ಪ್ರಾರಂಭವಾದ ಸಂಸ್ಥೆಯೇ ರಾಯಲ್ ಸೊಸೈಟಿ (November 28, 1660,). ಇದರ ಜೊತೆಗೆ ಬ್ರಿಟಿಷ್ ಅಸೋಸಿಯೇಷನ್ ಫಾರ್ ಅಡ್ವಾನ್ಸ್ಮೆಂಟ್ ಆಫ್ ಸೈನ್ಸ್ (1831 ) ಸಹ ಸೇರಿದೆ.
ಒಂದು ಕಾಲಕ್ಕೆ ನ್ಯೂಟನ್ ಈ ಸಂಸ್ಥೆಯ ಅಧ್ಯಕ್ಷನಾಗಿದ್ದನು( (1703–1727).

ಸಂಸ್ಥೆಯು ಪ್ರಾರಂಭವಾದ 345 ವರ್ಷಗಳ ನಂತರ ಮೊದಲಬಾರಿಗೆ Kathleen Lonsdale(1945) ಎಂಬ ಮಹಿಳೆಗೆ ಇವರಿಗೆ ಎಫ್ ಆರ್ ಎಸ್ ಸದಸ್ಯತ್ವ ದೊರಕುತ್ತದೆ. ಇದು ಸುಮ್ಮನೆ ಸಾಧ್ಯವಾಗಲಿಲ್ಲ Dorothy Hodgkin(1947ರಲ್ಲಿ ಎಫ್ ಆರ್ ಎಸ್ ಗೌರವವು ದೊರೆಯಿತು) ರವರು ಮಾಡಿದ ಪ್ರಯತ್ಫ- ಹೋರಾಟದ ಫಲವಾಗಿ ಮಹಿಳೆಯರಿಗೆ ರಾಯಲ್ ಸೊಸೈಟಿಯ ಪ್ರವೇಶ ದೊರೆಯಿತು. Dorothy Hodgkin ಪೆನ್ಸಿಲಿನ್ ಹರಳುಗಳ ರಚನೆಯನ್ನು ಕಂಡುಹಿಡಿದಾಕೆ. ೧೯೪೦ರ ದಶಕದಲ್ಲಿ ಒಂದು ದಿನ ಆಕೆ ರಾಯಲ್ ಸೊಸೈಟಿಯ ಮೆಟ್ಟಿಲುಗಳ ಮೇಲೆ ಕುಳಿತಿದ್ದಾಗ ಹೊರಬಂದ ವಿಜ್ಞಾನಿಯೊಬ್ಬರು ನೀನು ಯಾರು? ಇಲ್ಲೇಕೆ ಕುಳಿತಿರುವಿ? ಎಂದು ಕೇಳಿದಾಗ ತನ್ನನು ಪರಿಚಯಿಸಿಕೊಂಡ ಡಾರತಿ ತಾನು ಪೆನ್ಸಿಲಿನ್ ಹರಳುಗಳ ರಚನೆಯನ್ನು ಕಂಡುಹಿಡಿದಿರುವುದಾಗಿ ಹೇಳಿದರು . ಅದಕ್ಕೆ ಪ್ರತಿಕ್ರಿಯಿಸಿದ ಅವರು ನಿಮಗೆ ನೊಬೆಲ್ ಪಾರೀತೋಷಕ ಲಭಿಸುವುದೆಂದು ತಿಳಿಸಿದರು. ಅದಕ್ಕೊಪ್ಪದ ಡಾರತಿ ತನಗೆ ಎಫ್ ಆರ್ ಎಸ್ ಗೌರವ ಬೇಕೆಂದು ತಿಳಿಸಿದರು . ಅದು ಕಷ್ಟವಾಗಬಹುದೆಂದು ಆ ವಿಜ್ಞಾನಿ ತಿಳಿಸಿದರು. ಆದರೆ ಡಾರತಿ ಇದಕ್ಕಾಗಿ ಹಲವು ಮಹಿಳಾ ವಿಜ್ಞಾನಿಗಳೊಂದಿಗೆ ಹೋರಾಟವನ್ನೇ ಮಾಡುತ್ತಾರೆ .
ಎಫ್ ಆರ್ ಎಸ್ ಗೌರವವು ನೊಬೆಲ್ ಪಾರೀತೋಷಕಕ್ಕಿಂತ ಮಿಗಿಲಾದುದು ಎಂದು ವಿಜ್ಞಾನಿ ವಲಯ ಪರಿಗಣಿಸುತ್ತದೆ.
ಡಾರತಿ ಹಲವು ಬಾರಿ ಬೆಂಗಳೂರಿಗೆ ಬಂದಿದ್ದಾರೆ . ಒಮ್ಮೆ ಬೆಂಗಳೂರು ವಿಜ್ನ್ಯಾನ ವೇದಿಕೆಯಲ್ಲಿ ಉಪನ್ಯಾಸ ನೀಡಿದ್ದಾರೆ
1660 ರಲ್ಲಿ ಸಂಸ್ಥೆ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೆ ಸು. 8000 ವಿಜ್ಞಾನಿಗಳು ಗೌರವ ಪಡೆದಿದ್ದಾರೆ ಅವರಲ್ಲಿ 2018ರ ಲೆಕ್ಕದಂತೆ ಸು 1800ಜನರು ಬದುಕಿದ್ದಾರೆ ಇದರಲ್ಲಿ ಮಹಿಳಾ ವಿಜ್ಞಾನಿಗಳ ಸಂಖ್ಯೆ ಶೇ8.5ರಷ್ಟಾಗಿದೆ.
ಈ ಹಿನ್ನೆಲೆಯಲ್ಲಿ ನೋಡಿದಾಗ ಭಾರತದ ಮಹಿಳಾ ವಿಜ್ಞಾನಿಯೊಬ್ಬರು ಖಾತೆ ತೆಗೆದದದ್ದು ಮಹತ್ವದ ಅಂಶವೇ ಆಗಿದೆ.
ಈ ಹಿಂದೆ ಭಾರತೀಯ ಮೂಲದ ಮಹಿಳೆಗೆ ದೊರಕಿಲ್ಲವೇ ಎಂದು ನೋಡಿದಾಗ ನೊಬೆಲ್ ಪ್ರಶಸ್ತಿ ವಿಜೇತ ವೆಂಕಿ ರಾಮಕೃಷ್ಣನ್ ಅವರ ತಂಗಿ ಸೂಕ್ಶ್ಮಾಣು ತಜ್ಞೆ ಲಲಿತ ರಾಮಕೃಷ್ಣನ್ಅವರಿಗೆ 2018ರಲ್ಲಿ ದೊರಕಿದೆಯಾದರೂ ಅವರ ಪೌರತ್ವ ಅಮೆರಿಕನ್ ದೇಶದ್ದಾಗಿರುವುದರಿಂದ ಪ್ರಶಸ್ತಿಯ ಲೆಕ್ಕ ಆ ದೇಶಕ್ಕೆ ಸೇರಿದ್ದು.
ದಿವಂಗತರಾದ ನ್ಯೂಟನ್, ಐ ನ್ ಸ್ಟೀನ್ , ಜೆ ಸಿ ಬೋಸ್ , ಸಿ ವಿ ರಾಮನ್ , ಮೇಘನಾದ ಸಹ ಹಾಗೂ ಅಪ್ಪಟ ಬೆಂಗಳೂರಿನ ಕನ್ನಡಿಗ ರೊದ್ದಂ ನರಸಿಂಹ ಮುಂತಾದವರು ಈ ಸಂಸ್ಥೆಯ ಗೌರವ ಪಡೆದಿರುವರು. ಇವರ ಸಾಲಿಗೆ ಗಗನದೀಪ್ ಕಾಂಗ್ ಸೇರುತ್ತಾರೆ ಆದ್ದರಿಂದ ಇದು ಹೆಚ್ಹಿನ ಮಹತ್ವ ಪಡೆದಿದೆ .
ಆದುನಿಕ ಭಾರತದ ವಿಜ್ಞಾನ ಪರಂಪರೆಯಲ್ಲಿ ಏಷಿಯಾಟಿಕ್ ಸೊಸೈಟಿ(1784) , ಇಂಡಿಯನ್ ಅಕಾಡೆಮಿ ಆಫ್ ಕಲ್ತಿವಷನ್ ಆಫ್ ಸೈನ್ಸಸ್(1876) ಮತ್ತು ಭಾರತೀಯ ವಿಜ್ಞಾನ ಕಾಂಗ್ರೆಸ್ (1914) ಇವೆಲ್ಲವೂ ಪ್ರಮುಖ ಪಾತ್ರವಹಿಸುತ್ತವೆ. ಇವುಗಳ ಪ್ರಾರಂಭವು ರಾಯಲ್ ಸೊಸೈಟಿ (November 28, 1660,) ಬ್ರಿಟಿಷ್ ಅಸೋಸಿಯೇಷನ್ ಫಾರ್ ಅಡ್ವಾನ್ಸ್ಮೆಂಟ್ ಆಫ್ ಸೈನ್ಸ್ (1831 ) ಈ ಸಂಸ್ಥೆಗಳಿಂದ ತಮ್ಮ ಪ್ರೇರಣೆ ಪಡೆದಿವೆ.
ಗಣಿತಜ್ಞ The Viscount Brouncker (1662–1677) ರಾಯಲ್ ಸೊಸೈಟಿಯ ಪ್ರಾರಂಭಿಕ ಅಧ್ಯಕ್ಷರಾದರೆ ಪ್ರಸ್ತುತ ಭಾರತೀಯ ಮೂಲದ Venkatraman Ramakrishnan (2015–present) ಅಧ್ಯಕ್ಷರಾಗಿದ್ದಾರೆ .
ಗಗನ ದೀಪ್ ಕಾಂಗ್ ಅವರೊಂದಿಗೆ ಪದ್ಮಭೂಷಣ ಯೂಸುಫ್ ಹಮೈದ್ , ಪ್ರೊ ಗುರುದ್ಯಾಲ್ ಬೆಸ್ರ , ಪ್ರೊ. ಮಂಜುಲ್ ಭಾರ್ಗವ್ , ಪ್ರೊ. ಅನಂತ್ ಪರೇಖ್ ಮತ್ತು ಪ್ರೊ. ಅಕ್ಷಯ್ ವೆಂಕಟೇಶ್ ಎಫ್ ಆರ್ ಎಸ್ ಗೌರವಕ್ಕೆ ಪಾತ್ರರಾಗಿದ್ದಾರೆ .

Wednesday 10 April 2019

ಕಪ್ಪು ಕುಳಿ ಆಲಿಯಾಸ್ ಕೃಷ್ಣ ವಿವರ ಅಲಿಯಾಸ್ ಬ್ಲಾಕ್ ಹೋಲ್ ಇದರ ಪ್ರಥಮ ಛಾಯಾಚಿತ್ರ - ಏನಿದರ ವಿಶೇಷ ?




ಕಪ್ಪು ಕುಳಿಗಳ ಇಂದಿನ ಫೋಟೋ ವಿಶ್ವಾದ್ಯಂತ ಸಂಚಲನ ಮೂಡಿಸಿದೆ. ಏಕೆಂದರೆ ಇದುವರೆಗೂ ಇದನ್ನು 'ನೋಡಲು' ಸಾಧ್ಯವಾಗಿರಲಿಲ್ಲ.
ಸೂರ್ಯನಿಗಿಂತ ಹಲವು ಪಟ್ಟು ದೊಡ್ಡದಾದ ನಕ್ಷತ್ರಗಳ ವಿಕಾಸದ ಅಂತಿಮ ಹಂತ ಕಪ್ಪು ಕುಳಿಗಳು .
ಈ ಆಕಾಶಕಾಯಗಳು ಕಣ್ಣಿಗೆ ಕಾಣುವುದಿಲ್ಲ. ಏಕೆಂದರೆ ಈ ಕಾಯಗಳು ಬೆಳಕನ್ನೂ ಸಹ ತನ್ನಿಂದ ಹೊರಹೋಗಲು ಬಿಡುವುದಿಲ್ಲ . ಇವುಗಳ ವಿಮೋಚನವೇಗ ಅಂದರೆ ಎಸ್ಕೇಪ್ ವೆಲಾಸಿಟಿ ಬೆಳಕಿನ ವೇಗಕ್ಕೆ(ಸೆಕೆಂಡಿಗೆ ೩ ಲಕ್ಷ ಕಿ ಮೀ) . ಸಮನಾಗಿ ಅಥವಾ ಹೆಚ್ಚಾಗಿರುವುದು. ಭೂಮಿಯ ವಿಮೋಚನಾವೇಗ ಸೆಕೆಂಡಿಗೆ ೧೧. ೨ ಕಿ ಮೀ ಇರುವುದು . ISRO PSLV-C37 . ರಾಕೇಟಿನ ವೇಗ ಸೆಕೆಂಡಿಗೆ ೭. ೫ ಕಿ ಮೀ ಇದೆ. ಕಪ್ಪು ಕುಳಿಗಳು ತಮ್ಮ ಅಗಾಧ ಗುರುತ್ವ ಕಾರಣದಿಂದಾಗಿ ತಮ್ಮ ಅಸ್ತಿತ್ವದ ಸುಳಿವನ್ನು ನೇರವಾಗಿ ನಮಗೆ ಬಿಟ್ಟುಕೊಡದಿದ್ದರೂ ಗುರುತ್ವ ಮಸೂರ(Gravitational lensing), ಮತ್ತೊಂದು ನಕ್ಷತ್ರವನ್ನು(ತನ್ನ ಅವಳಿ ಅಥವಾ ತ್ರಿವಳಿ ) ತನ್ನೊಡಲೊಳಗೆ ಸೆಳೆದುಕೊಳ್ಳುವಾಗ ಹೊರಹೊಮ್ಮುವ ವಿಕಿರಣಗಳ ಮುಖಾಂತರ ಪರೋಕ್ಷವಾಗಿ ತಮ್ಮ ಇರುವಿಕೆಯಬಗ್ಗೆ ಸುಳಿವನ್ನು ನೀಡುತ್ತಿದ್ದವು.
ಈ ಆಕಾಶಕಾಯಗಳನ್ನು ಬೆನ್ನತ್ತಿ ಅಭ್ಯಾಸ ಮಾಡಿದವರಲ್ಲಿ ದಿವಂಗತರಾದ ಸ್ಟೀಫನ್ ಹಾಕಿಂಗ್ , ಬೆಂಗಳೂರಿನ ಸಿ ವಿ ವಿಶ್ವೇಶ್ವರ ಮುಂತಾದವರಿದ್ದಾರೆ .
ಇದರ ಛಾಯಾಚಿತ್ರ ತೆಗೆಯಲು ನಡೆಸಿದ ಅನೇಕ ಪ್ರಯತ್ನಗಳಿಗೆ ಫಲವೆಂಬಂತೆ ಇಂದಿನ ' ಕಪ್ಪು ಕುಳಿಯ ಛಾಯಾಚಿತ್ರ ' ನಮ್ಮೆದುರಿದೆ .
ಈವೆಂಟ್ ಹೊರೈಜನ್ ಟೆಲಿಸ್ಕೋಪ್ ಎಂಬ ದೂರದರ್ಶಕದ ಮುಖಾಂತರ ಎರಡು ವರ್ಶಗಳಿಂದ ನಡೆಸಿದ ಅಧ್ಯಯನ ಮತ್ತು ಕಂಪ್ಯೂಟರ್ ಸಂಸ್ಕರಣದ ಪ್ರಕ್ರಿಯೆಯಿಂದಾಗಿ ಈ ಫೋಟೋ ಮೂಡಿಬಂದಿದೆ.
ಇದರ ಕೆಲವು ವಿವರ ಹೀಗಿದೆ.
ಭೂಮಿಯಿಂದ ೫ * ಹತ್ತರ ಘಾತ ೨೦ ಕಿ ಮೀ. (5x10^20 ಕಿ ಮೀ) ದೂರದಲ್ಲಿರುವ ವಿರ್ಗೋ ನಕ್ಷತ್ರ ಸಮೂಹದ ಮಧ್ಯದಲ್ಲಿ/ ಎಂ ೮೭ ನೀಹಾರಿಕೆ (ಗ್ಯಾಲಕ್ಸಿ ) ಯಲ್ಲಿರುವ ಈ ಕಪ್ಪು ಕುಳಿ ಸೂರ್ಯನಿಗಿಂತ ೬೫೦ ಕೋಟಿಗೂ ಹೆಚ್ಚು ದ್ರವ್ಯರಾಶಿ(ಭಿನ್ನ ರೂಪದಲ್ಲಿ ) ಹೊಂದಿದೆ .

ಕಪ್ಪು ಕುಳಿಗಳು ಕಣ್ಣಿಗೆ ಕಾಣುವುದಿಲ್ಲ ಎಂದಾದರೆ ಫೋಟೋ ಹೇಗೆ ತೆಗೆದಿರಿ? ಎಂಬ ಪ್ರಶ್ನೆ ನಿಮ್ಮದಾದಲ್ಲಿ ಈ ಕೆಳಗಿನ ವಿವರಗಳನ್ನು ಓದಿ.

https://iopscience.iop.org/article/10.3847/2041-8213/ab0ec7