Wednesday 10 April 2019

ಕಪ್ಪು ಕುಳಿ ಆಲಿಯಾಸ್ ಕೃಷ್ಣ ವಿವರ ಅಲಿಯಾಸ್ ಬ್ಲಾಕ್ ಹೋಲ್ ಇದರ ಪ್ರಥಮ ಛಾಯಾಚಿತ್ರ - ಏನಿದರ ವಿಶೇಷ ?




ಕಪ್ಪು ಕುಳಿಗಳ ಇಂದಿನ ಫೋಟೋ ವಿಶ್ವಾದ್ಯಂತ ಸಂಚಲನ ಮೂಡಿಸಿದೆ. ಏಕೆಂದರೆ ಇದುವರೆಗೂ ಇದನ್ನು 'ನೋಡಲು' ಸಾಧ್ಯವಾಗಿರಲಿಲ್ಲ.
ಸೂರ್ಯನಿಗಿಂತ ಹಲವು ಪಟ್ಟು ದೊಡ್ಡದಾದ ನಕ್ಷತ್ರಗಳ ವಿಕಾಸದ ಅಂತಿಮ ಹಂತ ಕಪ್ಪು ಕುಳಿಗಳು .
ಈ ಆಕಾಶಕಾಯಗಳು ಕಣ್ಣಿಗೆ ಕಾಣುವುದಿಲ್ಲ. ಏಕೆಂದರೆ ಈ ಕಾಯಗಳು ಬೆಳಕನ್ನೂ ಸಹ ತನ್ನಿಂದ ಹೊರಹೋಗಲು ಬಿಡುವುದಿಲ್ಲ . ಇವುಗಳ ವಿಮೋಚನವೇಗ ಅಂದರೆ ಎಸ್ಕೇಪ್ ವೆಲಾಸಿಟಿ ಬೆಳಕಿನ ವೇಗಕ್ಕೆ(ಸೆಕೆಂಡಿಗೆ ೩ ಲಕ್ಷ ಕಿ ಮೀ) . ಸಮನಾಗಿ ಅಥವಾ ಹೆಚ್ಚಾಗಿರುವುದು. ಭೂಮಿಯ ವಿಮೋಚನಾವೇಗ ಸೆಕೆಂಡಿಗೆ ೧೧. ೨ ಕಿ ಮೀ ಇರುವುದು . ISRO PSLV-C37 . ರಾಕೇಟಿನ ವೇಗ ಸೆಕೆಂಡಿಗೆ ೭. ೫ ಕಿ ಮೀ ಇದೆ. ಕಪ್ಪು ಕುಳಿಗಳು ತಮ್ಮ ಅಗಾಧ ಗುರುತ್ವ ಕಾರಣದಿಂದಾಗಿ ತಮ್ಮ ಅಸ್ತಿತ್ವದ ಸುಳಿವನ್ನು ನೇರವಾಗಿ ನಮಗೆ ಬಿಟ್ಟುಕೊಡದಿದ್ದರೂ ಗುರುತ್ವ ಮಸೂರ(Gravitational lensing), ಮತ್ತೊಂದು ನಕ್ಷತ್ರವನ್ನು(ತನ್ನ ಅವಳಿ ಅಥವಾ ತ್ರಿವಳಿ ) ತನ್ನೊಡಲೊಳಗೆ ಸೆಳೆದುಕೊಳ್ಳುವಾಗ ಹೊರಹೊಮ್ಮುವ ವಿಕಿರಣಗಳ ಮುಖಾಂತರ ಪರೋಕ್ಷವಾಗಿ ತಮ್ಮ ಇರುವಿಕೆಯಬಗ್ಗೆ ಸುಳಿವನ್ನು ನೀಡುತ್ತಿದ್ದವು.
ಈ ಆಕಾಶಕಾಯಗಳನ್ನು ಬೆನ್ನತ್ತಿ ಅಭ್ಯಾಸ ಮಾಡಿದವರಲ್ಲಿ ದಿವಂಗತರಾದ ಸ್ಟೀಫನ್ ಹಾಕಿಂಗ್ , ಬೆಂಗಳೂರಿನ ಸಿ ವಿ ವಿಶ್ವೇಶ್ವರ ಮುಂತಾದವರಿದ್ದಾರೆ .
ಇದರ ಛಾಯಾಚಿತ್ರ ತೆಗೆಯಲು ನಡೆಸಿದ ಅನೇಕ ಪ್ರಯತ್ನಗಳಿಗೆ ಫಲವೆಂಬಂತೆ ಇಂದಿನ ' ಕಪ್ಪು ಕುಳಿಯ ಛಾಯಾಚಿತ್ರ ' ನಮ್ಮೆದುರಿದೆ .
ಈವೆಂಟ್ ಹೊರೈಜನ್ ಟೆಲಿಸ್ಕೋಪ್ ಎಂಬ ದೂರದರ್ಶಕದ ಮುಖಾಂತರ ಎರಡು ವರ್ಶಗಳಿಂದ ನಡೆಸಿದ ಅಧ್ಯಯನ ಮತ್ತು ಕಂಪ್ಯೂಟರ್ ಸಂಸ್ಕರಣದ ಪ್ರಕ್ರಿಯೆಯಿಂದಾಗಿ ಈ ಫೋಟೋ ಮೂಡಿಬಂದಿದೆ.
ಇದರ ಕೆಲವು ವಿವರ ಹೀಗಿದೆ.
ಭೂಮಿಯಿಂದ ೫ * ಹತ್ತರ ಘಾತ ೨೦ ಕಿ ಮೀ. (5x10^20 ಕಿ ಮೀ) ದೂರದಲ್ಲಿರುವ ವಿರ್ಗೋ ನಕ್ಷತ್ರ ಸಮೂಹದ ಮಧ್ಯದಲ್ಲಿ/ ಎಂ ೮೭ ನೀಹಾರಿಕೆ (ಗ್ಯಾಲಕ್ಸಿ ) ಯಲ್ಲಿರುವ ಈ ಕಪ್ಪು ಕುಳಿ ಸೂರ್ಯನಿಗಿಂತ ೬೫೦ ಕೋಟಿಗೂ ಹೆಚ್ಚು ದ್ರವ್ಯರಾಶಿ(ಭಿನ್ನ ರೂಪದಲ್ಲಿ ) ಹೊಂದಿದೆ .

ಕಪ್ಪು ಕುಳಿಗಳು ಕಣ್ಣಿಗೆ ಕಾಣುವುದಿಲ್ಲ ಎಂದಾದರೆ ಫೋಟೋ ಹೇಗೆ ತೆಗೆದಿರಿ? ಎಂಬ ಪ್ರಶ್ನೆ ನಿಮ್ಮದಾದಲ್ಲಿ ಈ ಕೆಳಗಿನ ವಿವರಗಳನ್ನು ಓದಿ.

https://iopscience.iop.org/article/10.3847/2041-8213/ab0ec7

No comments:

Post a Comment