ಕಪ್ಪು ಕುಳಿಗಳ ಇಂದಿನ ಫೋಟೋ ವಿಶ್ವಾದ್ಯಂತ ಸಂಚಲನ ಮೂಡಿಸಿದೆ. ಏಕೆಂದರೆ ಇದುವರೆಗೂ ಇದನ್ನು 'ನೋಡಲು' ಸಾಧ್ಯವಾಗಿರಲಿಲ್ಲ.
ಸೂರ್ಯನಿಗಿಂತ ಹಲವು ಪಟ್ಟು ದೊಡ್ಡದಾದ ನಕ್ಷತ್ರಗಳ ವಿಕಾಸದ ಅಂತಿಮ ಹಂತ ಕಪ್ಪು ಕುಳಿಗಳು .
ಈ ಆಕಾಶಕಾಯಗಳು ಕಣ್ಣಿಗೆ ಕಾಣುವುದಿಲ್ಲ. ಏಕೆಂದರೆ ಈ ಕಾಯಗಳು ಬೆಳಕನ್ನೂ ಸಹ ತನ್ನಿಂದ ಹೊರಹೋಗಲು ಬಿಡುವುದಿಲ್ಲ . ಇವುಗಳ ವಿಮೋಚನವೇಗ ಅಂದರೆ ಎಸ್ಕೇಪ್ ವೆಲಾಸಿಟಿ ಬೆಳಕಿನ ವೇಗಕ್ಕೆ(ಸೆಕೆಂಡಿಗೆ ೩ ಲಕ್ಷ ಕಿ ಮೀ) . ಸಮನಾಗಿ ಅಥವಾ ಹೆಚ್ಚಾಗಿರುವುದು. ಭೂಮಿಯ ವಿಮೋಚನಾವೇಗ ಸೆಕೆಂಡಿಗೆ ೧೧. ೨ ಕಿ ಮೀ ಇರುವುದು . ISRO PSLV-C37 . ರಾಕೇಟಿನ ವೇಗ ಸೆಕೆಂಡಿಗೆ ೭. ೫ ಕಿ ಮೀ ಇದೆ. ಕಪ್ಪು ಕುಳಿಗಳು ತಮ್ಮ ಅಗಾಧ ಗುರುತ್ವ ಕಾರಣದಿಂದಾಗಿ ತಮ್ಮ ಅಸ್ತಿತ್ವದ ಸುಳಿವನ್ನು ನೇರವಾಗಿ ನಮಗೆ ಬಿಟ್ಟುಕೊಡದಿದ್ದರೂ ಗುರುತ್ವ ಮಸೂರ(Gravitational lensing), ಮತ್ತೊಂದು ನಕ್ಷತ್ರವನ್ನು(ತನ್ನ ಅವಳಿ ಅಥವಾ ತ್ರಿವಳಿ ) ತನ್ನೊಡಲೊಳಗೆ ಸೆಳೆದುಕೊಳ್ಳುವಾಗ ಹೊರಹೊಮ್ಮುವ ವಿಕಿರಣಗಳ ಮುಖಾಂತರ ಪರೋಕ್ಷವಾಗಿ ತಮ್ಮ ಇರುವಿಕೆಯಬಗ್ಗೆ ಸುಳಿವನ್ನು ನೀಡುತ್ತಿದ್ದವು.
ಈ ಆಕಾಶಕಾಯಗಳನ್ನು ಬೆನ್ನತ್ತಿ ಅಭ್ಯಾಸ ಮಾಡಿದವರಲ್ಲಿ ದಿವಂಗತರಾದ ಸ್ಟೀಫನ್ ಹಾಕಿಂಗ್ , ಬೆಂಗಳೂರಿನ ಸಿ ವಿ ವಿಶ್ವೇಶ್ವರ ಮುಂತಾದವರಿದ್ದಾರೆ .
ಇದರ ಛಾಯಾಚಿತ್ರ ತೆಗೆಯಲು ನಡೆಸಿದ ಅನೇಕ ಪ್ರಯತ್ನಗಳಿಗೆ ಫಲವೆಂಬಂತೆ ಇಂದಿನ ' ಕಪ್ಪು ಕುಳಿಯ ಛಾಯಾಚಿತ್ರ ' ನಮ್ಮೆದುರಿದೆ .
ಈವೆಂಟ್ ಹೊರೈಜನ್ ಟೆಲಿಸ್ಕೋಪ್ ಎಂಬ ದೂರದರ್ಶಕದ ಮುಖಾಂತರ ಎರಡು ವರ್ಶಗಳಿಂದ ನಡೆಸಿದ ಅಧ್ಯಯನ ಮತ್ತು ಕಂಪ್ಯೂಟರ್ ಸಂಸ್ಕರಣದ ಪ್ರಕ್ರಿಯೆಯಿಂದಾಗಿ ಈ ಫೋಟೋ ಮೂಡಿಬಂದಿದೆ.
ಇದರ ಕೆಲವು ವಿವರ ಹೀಗಿದೆ.
ಭೂಮಿಯಿಂದ ೫ * ಹತ್ತರ ಘಾತ ೨೦ ಕಿ ಮೀ. (5x10^20 ಕಿ ಮೀ) ದೂರದಲ್ಲಿರುವ ವಿರ್ಗೋ ನಕ್ಷತ್ರ ಸಮೂಹದ ಮಧ್ಯದಲ್ಲಿ/ ಎಂ ೮೭ ನೀಹಾರಿಕೆ (ಗ್ಯಾಲಕ್ಸಿ ) ಯಲ್ಲಿರುವ ಈ ಕಪ್ಪು ಕುಳಿ ಸೂರ್ಯನಿಗಿಂತ ೬೫೦ ಕೋಟಿಗೂ ಹೆಚ್ಚು ದ್ರವ್ಯರಾಶಿ(ಭಿನ್ನ ರೂಪದಲ್ಲಿ ) ಹೊಂದಿದೆ .
ಕಪ್ಪು ಕುಳಿಗಳು ಕಣ್ಣಿಗೆ ಕಾಣುವುದಿಲ್ಲ ಎಂದಾದರೆ ಫೋಟೋ ಹೇಗೆ ತೆಗೆದಿರಿ? ಎಂಬ ಪ್ರಶ್ನೆ ನಿಮ್ಮದಾದಲ್ಲಿ ಈ ಕೆಳಗಿನ ವಿವರಗಳನ್ನು ಓದಿ.
ಬೆಂಗಳೂರು: ವಿದ್ಯಾರ್ಥಿಗಳು ವಿಜ್ಞಾನ ಮತ್ತು ಗಣಿತ ವಿಷಯಗಳಲ್ಲಿ ಉನ್ನತ ಶಿಕ್ಷಣ ಮುಂದುವರಿಸಲು ಹಿಂದೇಟು ಹಾಕುತ್ತಿರುವುದು ದೇಶದ ಅಭಿವೃದ್ಧಿಗೆ ಮಾರಕವಾಗಲಿದೆ ಎಂದು ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಆತಂಕ ವ್ಯಕ್ತಪಡಿಸಿದ್ದಾರೆ. ಉದಯಭಾನು ಕಲಾ ಸಂಘ ಭಾನುವಾರ ಆಯೋಜಿಸಿದ್ದ "ಸುವರ್ಣ ಪುಸ್ತಕಮಾಲೆ' 7ನೇ ಕಂತಿನ ಕೃತಿಗಳ ಲೋಕಾರ್ಪಣೆ' ಸಮಾರಂಭದಲ್ಲಿ ಅವರು ಮಾತನಾಡಿದರು.
ವಿಜ್ಞಾನ ಹಾಗೂ ಗಣಿತ ಕ್ಷೇತ್ರಗಳು ದೇಶವನ್ನು ಅಭಿವೃದ್ಧಿಯತ್ತ ಕೊಂಡಯ್ಯಲಿವೆ. ಈ ಎರಡು ವಿಷಯಗಳು ಕಷ್ಟದಾಯಕ ಎಂಬ ಮನೋಭಾವನೆ ಹೆಚ್ಚಾಗುತ್ತಿರುವುದರಿಂದ ವಿದ್ಯಾರ್ಥಿಗಳು ವಿಜ್ಞಾನ, ಗಣಿತ ವಿಷಯಗಳಲ್ಲಿ ಉನ್ನತ ಶಿಕ್ಷಣ ಪಡೆಯಲು ಹಿಂದೇಟು ಹಾಕುವ ಸಾಧ್ಯತೆಯಿದೆ. ಹಾಗೆಯೇ, ವಿದ್ಯಾರ್ಥಿಗಳ ಆಸಕ್ತಿ ಕೊರತೆಯಿಂದ ಶಾಲೆಗಳಲ್ಲಿಯೂ ಈ ಎರಡೂ ವಿಷಯಗಳ ಭೋಧನೆಗೆ ಹಿನ್ನಡೆ ಉಂಟುಮಾಡಿದೆ. ವಿಜ್ಞಾನ ಹಾಗೂ ಗಣಿತ ಬೆಳವಣಿಗೆ ಆಗದಿದ್ದರೆ ಅದು ದೇಶದ ಅಭಿವೃದ್ಧಿಗೆ ಮಾರಕವಾಗಲಿದೆ ಎಂದು ಎಚ್ಚರಿಸಿದರು.
ಪ್ರಸ್ತುತ ಶಾಲಾ-ಕಾಲೇಜುಗಳಲ್ಲಿ ಮೂಲ ವಿಜ್ಞಾನ ಹೊರತುಪಡಿಸಿ ಅನ್ವಯಿಕ ವಿಜ್ಞಾನವನ್ನೇ ಹೆಚ್ಚು ಭೋದಿಸಲಾಗುತ್ತಿದೆ. ಇದರಿಂದ ಮೂಲ ವಿಜ್ಞಾನ ನಶಿಸುತ್ತಿದೆ. ಅಲ್ಲದೆ, ಭವಿಷ್ಯದಲ್ಲಿ ವಿಜ್ಞಾನ ಕ್ಷೇತ್ರದ ಸಂಶೋಧನೆಗಳ ಪ್ರಮಾಣವೂ ಕುಸಿಯಲಿದೆ. ಭವಿಷ್ಯವನ್ನು ದೃಷ್ಟಿಯಲ್ಲಿಸಿಕೊಂಡು ಶಾಲೆ-ಕಾಲೇಜುಗಳಲ್ಲಿ ಮೂಲ ವಿಜ್ಞಾನ ಭೋದಿಸಲು ಶಿಕ್ಷಕರು ಪ್ರಾಶಸ್ತ್ಯ ನೀಡಬೇಕು ಎಂದು ಸಲಹೆ ನೀಡಿದರು.
ಮಾಜಿ ಸಚಿವೆ ಡಾ. ಲೀಲಾದೇವಿ ಆರ್.ಪ್ರಸಾದ್ ಮಾತನಾಡಿ, ಯಾವ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸದ ಸಂಘ-ಸಂಸ್ಥೆಗಳಿಗೆ ಸರ್ಕಾರ ಈ ಸಾಲಿನ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ಮೀಸಲಿಟ್ಟಿದೆ. ಆದರೆ, ನಮ್ಮ ಸಂಸ್ಕೃತಿ ಹಾಗೂ ಪರಂಪರೆ ಉಳಿಸುತ್ತಿರುವ ಪ್ರಮಾಣಿಕ ಸಂಘ-ಸಂಸ್ಥೆಗಳಿಗೆ ಅನುದಾನ ಮೀಸಲಿಟ್ಟಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಕೆ.ಪಿ. ಸುರೇಶ್ ಅವರ "ಸುರೇಂದ್ರ ಕೌಲಗಿ', ದೀಪಿಕ ಸಾವಿತ್ರಿ ಅವರ "ಕೆ.ವಿ. ರಮೇಶ್', ಡಾ. ಚಿಕ್ಕಣ್ಣ ಯಣ್ಣೆಕಟ್ಟೆ ಅವರ "ಮುದೇನೂರು ಸಂಗಣ್ಣ', ಡಾ.ವೈ.ಸಿ. ಕಮಲಾ ಅವರ "ಡಾ. ಲೀಲಾದೇವಿ ಆರ್.ಪ್ರಸಾದ್' ಹಾಗೂ ಸುಮಂಗಲ ಎಸ್.ಮುಮ್ಮಿಗಟ್ಟಿ ಅವರ ರಚನೆಯ "ಆರ್.ಎಲ್. ನರಸಿಂಹಯ್ಯ' ಕೃತಿಗಳನ್ನು ಲೋಕಾರ್ಪಣೆ ಮಾಡಲಾಯಿತು. ಉದಯಭಾನು ಕಲಾ ಸಂಘದ ಗೌರವಾಧ್ಯಕ್ಷ ನ್ಯಾ.ಎ.ಜೆ. ಸದಾಶಿವ, ಅಧ್ಯಕ್ಷ ಬಿ. ಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.
Read more at https://www.udayavani.com/kannada/news/%E0%B2%AC%E0%B3%86%E0%B2%82%E0%B2%97%E0%B2%B3%E0%B3%82%E0%B2%B0%E0%B3%81-%E0%B2%A8%E0%B2%97%E0%B2%B0/54743/%E0%B2%B5%E0%B2%BF%E0%B2%9C%E0%B3%8D%E0%B2%9E%E0%B2%BE%C2%AE%E2%80%8C-%E0%B2%97%E0%B2%A3%E0%B2%BF%E0%B2%A4-%E0%B2%95%E0%B2%B2%E0%B2%BF%E0%B2%AF%E0%B2%A6%E0%B2%BF%E0%B2%A6%E0%B3%8D%E0%B2%B0%E0%B3%86-%E0%B2%AE%E0%B2%BE%E0%B2%B0%E0%B2%95#RjgEvEZGByH6cJEq.99
ಡಾ. ಗುರುರಾಜ್ ದೇಶಪಾಂಡೆ ವಿರಚಿತ 'ದೇಶಾವಲೋಕನ' ಲೋಕಾರ್ಪಣೆ By Madhusoodhan | Updated: Friday, July 8, 2016, 20:03 [IST] ಹುಬ್ಬಳ್ಳಿ, ಜುಲೈ, 08: ಸಮಸ್ಯೆಯನ್ನು ಗುರುತಿಸಿ ಪರಿಹರಿಸಬೇಕು ಬೇಕಾದರೆ ಅದನ್ನು ಪ್ರೀತಿಸಬೇಕು ಎಂದು ದೇಶಪಾಂಡೆ ಫೌಂಡೇಶನ್ ಸಂಸ್ಥಾಪಕ ಗುರುರಾಜ ದೇಶಪಾಂಡೆ ಹೇಳಿದರು. ಅವರು ಗುರುವಾರ ಸ್ಥಳೀಯ ಬಿವಿಬಿ ಕಾಲೇಜ್ ಕ್ಯಾಂಪಸ್ ನಲ್ಲಿರುವ ದೇಶಪಾಂಡೆ ಫೌಂಡೇಶನ್ ಸಭಾಂಗಣದಲ್ಲಿ "ದೇಶಾವಲೋಕನ" ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡುತ್ತಿದ್ದರು.[ದೇಶಾವಲೋಕನ ಸಮಾನ ಸಮಾಜದ ಕನಸಿಗೊಂದು ಮುನ್ನುಡಿ] ಸಮಸ್ಯೆಯನ್ನು ಗುರುತಿಸಬೇಕಾದರೆ ಅದನ್ನು ಪ್ರೀತಿಸಬೇಕು. ಆಗ ಮಾತ್ರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ. ಈ ರೀತಿಯ ಹಲವಾರು ವಿಷಯಗಳನ್ನು ದೇಶಾವಲೋಕನ ಪುಸ್ತಕದಲ್ಲಿ ನಾನು ಬರೆದಿದ್ದೇನೆ ಎಂದರು. ಉದ್ಯಮಿಗಳಾಗಬೇಕಾದರೆ ಮೊದಲು ಸಮಸ್ಯೆಗಳನ್ನು ಸರಿಯಾಗಿ ಅರ್ಥೈಸಿಕೊಳ್ಳಬೇಕು. ಏಕೆಂದರೆ ನಮ್ಮ ನಡುವೆ ಮೂರು ತರಹದ ವ್ಯಕ್ತಿತ್ವ ಹೊಂದಿರುವ ಜನರಿದ್ದಾರೆ. ಆರಾಮಾಗಿ ಇದ್ದರಾಯಿತು ಎನ್ನುವವರು, ಸಮಸ್ಯೆ ಬಂದರೆ ಏಕೆ ಬಂತು ಎಂದು ಚಿಂತಿಸುತ್ತ ಕುಳಿತುಕೊಳ್ಳುವವರು ಮತ್ತು ಮೂರನೇಯವರು ಸಮಸ್ಯೆ ಬಂದರೆ ಧೈರ್ಯವಾಗಿ ಎದುರಿಸಬೇಕೆನ್ನುವವರು. ಹೀಗಾಗಿ ನಾವು ಮೂರನೇ ತರಹದ ವ್ಯಕ್ತಿತ್ವವನ್ನು ಹೊಂದಿದ್ದರೆ ಮಾತ್ರ ಯಶಸ್ಸು ಪಡೆಯಬಹುದು ಎಂದರು.[ದೇಶಾವಲೋಕನ ಕುರಿತು ಗುರುರಾಜ್ ದೇಶಪಾಂಡೆ ನುಡಿ] ಲೇಖಕರೊಂದಿಗೆ ಸಂವಾದ: ಪುಸ್ತಕವನ್ನು ಶ್ರೀನಿವಾಸ ದೇಶಪಾಂಡೆ ಮತ್ತು ಜಯಶ್ರೀ ದೇಶಪಾಂಡೆ ಬಿಡುಗಡೆ ಮಾಡಿದ ನಂತರ ಲೇಖಕರೊಂದಿಗೆ ಸಂವಾದ ನಡೆಯಿತು. ಸತೀಶ ಚಪ್ಪರಿಕೆಯವರು ಲೇಖಕರಾದ ಗುರುರಾಜ ದೇಶಪಾಂಡೆ ಮತ್ತು ಕನ್ನಡ ಅನುವಾದಕಿ ಬೆಂಗಳೂರು ನ್ಯಾಶನಲ್ ಕಾಲೇಜಿನ ಭೌತಶಾಸ್ತ್ರ ಪ್ರಾಧ್ಯಾಪಕಿ ವೈ.ಸಿ. ಕಮಲಾ ಅವರನ್ನು ಸಂವಾದದಲ್ಲಿ ಪುಸ್ತಕ ಬರೆಯುವಾಗಿನ ಅನುಭವಗಳನ್ನು ಹಂಚಿಕೊಂಡರು. [ಹುಬ್ಬಳ್ಳಿಯಲ್ಲಿ ದೇಶಪಾಂಡೆ ಫೌಂಡೇಶನ್‌ನಿಂದ ಅಭಿವೃದ್ಧಿ ಮಂತ್ರ] ಖ್ಯಾತ ಕವಿ ಚನ್ನವೀರ ಕಣವಿ ಅವರ ಪುತ್ರ ಪತ್ರಕರ್ತ ಬಿಸಿನೆಸ್ ಇಂಡಿಯಾ ಪತ್ರಿಕೆಯ ಸಂಪಾದಕ ಶಿವಾನಂದ ಕಣವಿ ಮತ್ತಿತರರು ಉಪಸ್ಥಿತರಿದ್ದರು.ಸಂವಾದದ ನಂತರ ಗುರುರಾಜ ದೇಶಪಾಂಡೆ ಅವರನ್ನು ಪುಸ್ತಕ ಪಡೆದುಕೊಂಡವರಿಗೆ ಆಟೋಗ್ರಾಫ್ ನೀಡಿ ಶುಭ ಹಾರೈಸಿದರು.
ವಿಶ್ವದ ರಹಸ್ಯವನ್ನು ಭೇದಿಸಲು ಹೊರಟ ವಿಜ್ಞಾನಿಗಳಿಗೆ ದೊಡ್ಡದೊಂದು ಬ್ರೇಕ್ ಸಿಕ್ಕಿದೆ. ವಿಶ್ವ ರಚನೆಗೆ ಸಂಬಂಧಿಸಿದಂತೆ ‘ಮಿಸ್ಸಿಂಗ್ ಲಿಂಕ್’ಗಳನ್ನು ಜೋಡಿಸುವಲ್ಲಿ ಒಂದು ಪ್ರಮುಖ ಕೊಂಡಿ. ಅದುವೇ ಗುರುತ್ವದ ಅಲೆಗಳ ಅಸ್ತಿತ್ವವನ್ನು ವಿಜ್ಞಾನಿಗಳು ಸಾಕ್ಷ್ಯ ಸಮೇತ ಖಚಿತಪಡಿಸಿರುವುದು. ಭೂಮಿಯಲ್ಲಿ ಜೀವಿಗಳ ಉಗಮಕ್ಕೆ ಮುನ್ನ ಹೊರಟ ಗುರುತ್ವ ಅಲೆಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ದೇಶ-ಕಾಲದ ಹರವಿನಲ್ಲಿ (Space-Time), ಗುರುತ್ವದ ಅಲೆಗಳ (Gravitational Waves) ಇರುವಿಕೆಯನ್ನು ಪತ್ತೆ ಮಾಡಿದ ಕೀರ್ತಿ ಅಮೆರಿಕ, ಭಾರತದ ವಿಜ್ಞಾನಿಗಳೂ ಸೇರಿದಂತೆ ಇಡೀ ವಿಶ್ವದ ವಿಜ್ಞಾನಿಗಳಿಗೆ ಸಲ್ಲುತ್ತದೆ. ಈ ಮೂಲಕ ವಿಶ್ವ ರಚನೆ ಕುರಿತಾದ ಪುರಾವೆಗಳ ಕ್ರೋಡೀಕರಣಕ್ಕೆ ಗಟ್ಟಿ ಪುರಾವೆಯೇ ಸಿಕ್ಕಿದೆ. ಇದರಿಂದ ಭವಿಷ್ಯದಲ್ಲಿ ಖಗೋಳಶಾಸ್ತ್ರದ ಅಧ್ಯಯನಕ್ಕೆ ಅದರಲ್ಲೂ ವಿಶ್ವದ ರಚನೆಯನ್ನು ಹೊಸ ದೃಷ್ಟಿಕೋನದಿಂದ ನೋಡಲು ಸಾಧ್ಯವಿದೆ.
1990ರ ದಶಕದಲ್ಲಿ The LIGO Scientific Collaboration (LSC) ಗೆ ಚಾಲನೆ ಸಿಕ್ಕಿತು. 15 ದೇಶಗಳ ಬಹಳಷ್ಟು ವಿಶ್ವವಿದ್ಯಾಲಯಗಳು, ವೈಜ್ಞಾನಿಕ ಸಂಶೋಧನಾ ಸಂಸ್ಥೆಗಳ ಸಾವಿರಕ್ಕೂ ಹೆಚ್ಚು ವಿಜ್ಞಾನಿಗಳು, ವಿದ್ಯಾರ್ಥಿ ಸಮೂಹ ಈ ಸಾಹಸದಲ್ಲಿ ತೊಡಗಿಸಿಕೊಂಡಿತ್ತು. ಗುರುತ್ವದ ಅಲೆಗಳನ್ನು ಪತ್ತೆ ಮಾಡುವ ಭೌತವಿಜ್ಞಾನದ ಅತ್ಯಂತ ಮಹತ್ವದ ಪ್ರಯೋಗವನ್ನು Laser Interferometer Gravitational – Wave Observatory (LIGO) ಮೂಲಕ ನಡೆಸಿಕೊಂಡು ಬರಲಾಗುತ್ತಿದೆ. 1.3 ಶತಕೋಟಿ ಜ್ಯೋತಿರ್ವರ್ಷಗಳಷ್ಟು ದೂರದಲ್ಲಿರುವ ಒಂದರಸುತ್ತ ಮತ್ತೊಂದು ಸುತ್ತುವ ಎರಡು ಕಪ್ಪುರಂದ್ರಗಳು ಪರಸ್ಪರ ಸಮಾಗಮಗೊಂಡಾಗ ಅವುಗಳಿಂದ ಸೃಷ್ಟಿಯಾದ ಗುರುತ್ವದ ಅಲೆಗಳೇ ಈಗ ಸಿಕ್ಕಿರುವುದು. 2015ರ ಸೆಪ್ಟೆಂಬರ್ 14 ರಂದು ಅಮೆರಿಕದ ಲಿವಿಂಗ್ಸ್ಟನ್ ಮತ್ತು ಹ್ಯಾನ್ಫೋರ್ಡ್ ನಲ್ಲಿರುವ ಪ್ರಯೋಗಶಾಲೆಗಳಲ್ಲಿ ಗುರುತ್ವದ ಅಲೆಗಳನ್ನು ದಾಖಲಿಸಲಾಯಿತು.
ಲಿಗೊ ವೀಕ್ಷಣಾಲಯ ಪಾತ್ರವೇನು: ಲಿಗೊ ಕೇಂದ್ರಗಳು ವಿಶ್ವದ ಹಲವೆಡೆ ಇವೆ. ಭಾರತದ ಪುಣೆಯಲ್ಲೂ ಲಿಗೊ ಸ್ಥಾಪನೆಗೊಳ್ಳಲಿದೆ. ಅಮೆರಿಕದಲ್ಲಿ ಎರಡು ವೀಕ್ಷಣಾಲಯಗಳು ಇವೆ. ಅವುಗಳೆಂದರೆ, ಲಿವಿಂಗ್ಟನ್ನಲ್ಲಿರುವ ವೀಕ್ಷಣಾಲಯ ಮತ್ತು ವಾಷಿಂಗ್ಟನ್ನ ಸಮೀಪದ ರಿಚ್ಲೆಂಡ್ನಲ್ಲಿರುವ ಹ್ಯಾನ್ಫೋರ್ಡ್ ವೀಕ್ಷಣಾಲಯ. ಇವೆರಡೂ ವೀಕ್ಷಣಾಲಯಗಳ ಮಧ್ಯೆ ಇರುವ ಅಂತರ 3,002 ಕಿ.ಮೀ.ಗಳು. ಗುರುತ್ವದ ಅಲೆಗಳನ್ನು ಖಚಿತಪಡಿಸಲು ಇವರೆಡೂ ವೀಕ್ಷಣಾಲಯಗಳ ಪಾತ್ರ ಮಹತ್ವದ್ದು.
ಗುರುತ್ವ ಅಲೆಗಳು ಇವೆರಡೂ ವೀಕ್ಷಣಾಲಯಗಳನ್ನು ಪ್ರವೇಶಿಸಿದ ಅಂತರವು ಕೇವಲ 7 ಮಿಲಿ ಸೆಕೆಂಡ್ಗಳಷ್ಟು. ಮುಮ್ಮೂಲೆಯ (triangulation) ಬಳಕೆಯಿಂದಾಗಿ, ಅಲೆಗಳ ಆಗಮನ ಮತ್ತು ವೀಕ್ಷಣಾಲಯವನ್ನು ತಲುಪಿದ ಸಮಯದ ಅಂತರವನ್ನು ಮತ್ತು ಅಲೆಯ ಮೂಲವನ್ನು ನಿಖರವಾಗಿ ಕಂಡುಕೊಳ್ಳಲು ಸಾಧ್ಯವಾಗಿದೆ. ವಿಶ್ವದಲ್ಲೇ ಅತ್ಯಂತ ಕಿರುಮಾಪನ ಮಾಡಲು ಸಾಧ್ಯವಾಗಿರುವುದೂ ಇದೇ ಪ್ರಥಮ, ಅಂದರೆ, ಒಂದು ಪರಮಾಣು ಬೀಜಕೇಂದ್ರಕ್ಕಿಂತಲೂ 10,000 ಪಟ್ಟು ಚಿಕ್ಕದಾದ ಚಲನೆಯನ್ನು ಮಾಪನ ಮಾಡಲಾಗಿದೆ. ಈ ಪ್ರಯೋಗದ ಸೂಕ್ಷ್ಮತೆಗೆ ಒಂದು ಉದಾಹರಣೆ. ಸಹಸ್ರ ಕೋಟಿ ರಾಗಿ ಕಾಳುಗಳ ಮಧ್ಯೆ ಒಂದು ಸಾಸಿವೆ ಕಾಳು ಹುಡುಕಿದಷ್ಟು ಸೂಕ್ಷ್ಮ.
ಭಾರತೀಯ ವಿಜ್ಞಾನಿಗಳ ಪಾತ್ರ: ಈ ಐತಿಹಾಸಿಕ ಯೋಜನೆಯಲ್ಲಿ ಭಾರತೀಯ ವಿಜ್ಞಾನಿಗಳೂ ಮಹತ್ವದ ಪಾತ್ರವಹಿಸಿದ್ದಾರೆ. ಇದು ವಿವಿಧ ದೇಶಗಳ ಸಾಮೂಹಿಕ ಪ್ರಯತ್ನವಾಗಿದ್ದರೂ, ಗಾಂಧಿನಗರದ ಇನ್ಸ್ಟಿಟ್ಯೂಟ್ ಆಫ್ ಪ್ಲಾಸ್ಮಾ ರೀಸರ್ಚ್, ಪುಣೆಯ ಇಂಟರ್ ಯುನಿವರ್ಸಿಟಿ ಸೆಂಟರ್ ಫಾರ್ ಆಸ್ಟ್ರೊನಮಿ ಮತ್ತು ಆಸ್ಟ್ರೋ ಫಿಸಿಕ್ಸ್ (ಐಯುಸಿಎಎ), ಇಂದೋರಿನ ರಾಜಾರಾಮಣ್ಣ ಸೆಂಟರ್ ಫಾರ್ ಅಡ್ವಾನ್ಸ್ಡ್ ಟೆಕ್ನಾಲಜಿ, ಬೆಂಗಳೂರಿನ ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರೀಸರ್ಚ್ ಮುಂತಾದ ಸಂಸ್ಥೆಗಳು ಬಹುಕಾಲದಿಂದ ಗುರುತ್ವ ಅಲೆಯ ಪತ್ತೆಕಾರ್ಯದಲ್ಲಿ ತೊಡಗಿಸಿಕೊಂಡಿವೆ.
ಭಾರತಕ್ಕೇನು ಪ್ರಯೋಜನ
ಭಾರತದಲ್ಲಿ ಲಿಗೊ ಸ್ಥಾಪನೆಯಿಂದ ಮೂರು ಬಗೆಯ ಪ್ರಯೋಜನಗಳಿವೆ.
1 ಭವಿಷ್ಯದಲ್ಲಿ ಭಾರತೀಯ ಖಗೋಳಶಾಸ್ತ್ರದಲ್ಲಿ ತೊಡಗಿರುವ ವಿಜ್ಞಾನಿಗಳಿಗೆ ಗುರುತ್ವದ ಅಲೆಯನ್ನು ಆಧರಿಸಿದ ವಿನೂತನ ಸಂಶೋಧನೆಗಳಿಗೆ ಅನುಕೂಲವಾಗಲಿದೆ. ಇದಕ್ಕೆ ಪೂರಕವಾಗಿ ಹಲವು ಹೊಸ ಯೋಜನೆಗಳನ್ನು ಆರಂಭಿಸಲು ಅವಕಾಶವಿದೆ. ಖಗೋಳ ವಿಜ್ಞಾನಿಗಳಲ್ಲದೆ, ಆಪ್ಟಿಕ್ಸ್, ಲೇಸರ್ಸ್, ಗುರುತ್ವ ಭೌತಶಾಸ್ತ್ರ, ಜ್ಯೋತಿರ್ವಿಜ್ಞಾನ, ಖಭೌತಶಾಸ್ತ್ರ, ಕಾಸ್ಮಾಲಜಿ, ಗಣಕ ವಿಜ್ಞಾನ, ಗಣಿತ ಮತ್ತು ಇಂಜಿನಿಯರಿಂಗ್ನ ವಿವಿಧ ಶಾಖೆಗಳ ತಜ್ಞರು ಒಟ್ಟಾಗಿ ಕೆಲಸ ಮಾಡುವ ಅವಕಾಶ ಒದಗಿ ಬರಲಿದೆ.
2 ಉದ್ಯಮಕ್ಕೆ ಬಲ: ಉನ್ನತ ಮಟ್ಟದ ಇಂಜಿನಿಯರಿಂಗ್ ಬೆಳವಣಿಗೆಗೆ ಸಹಾಯಕವಾಗಲಿದೆ. ವಿಶ್ವದ ಅತ್ಯಂತ ದೊಡ್ಡ ನಿರ್ವಾತ ಕೊಳವೆಯನ್ನು ನಿರ್ವಿುಸಲು ಇದರ ಅವಶ್ಯಕತೆ ಇದೆ. ವಿವಿಧ ವೈಜ್ಞಾನಿಕ ಸಂಶೋಧನಾ ಸಂಸ್ಥೆಗಳ ಜತೆಗಿನ ಸಹಯೋಗಕ್ಕೆ ಉದ್ಯಮಗಳಿಗೆ ಅವಕಾಶವಿದೆ.
3 ಶಿಕ್ಷಣಕ್ಕೆ ಉಪಯೋಗ: ಮೂಲ ವಿಜ್ಞಾನದತ್ತ ಯುವ ಮನಸ್ಸುಗಳನ್ನು ಸೆಳೆಯಲು ಇಂತಹ ಯೋಜನೆಗಳು ಉಪಯುಕ್ತ. ವಿದ್ಯಾರ್ಥಿಗಳು ಮತ್ತು ಯುವ ವಿಜ್ಞಾನಿಗಳಿಗೆ ಉತ್ತೇಜನ ನೀಡಲು ಸಾಧ್ಯವಾಗುತ್ತದೆ. ಇದಕ್ಕೆ ಮುಖ್ಯಕಾರಣವೆಂದರೆ, ಈ ವೀಕ್ಷಣಾಲಯದಲ್ಲಿ ಬಳಸಲ್ಪಡುವ ತಂತ್ರಜ್ಞಾನ, ಉಪಕರಣಗಳು ಅತ್ಯುನ್ನತ್ತ ಮಟ್ಟದ್ದಾಗಿದ್ದು, ಇವು ಯುವಜನರಲ್ಲಿ ಸಹಜವಾಗಿ ಭೌತಶಾಸ್ತ್ರ ಮತ್ತು ಇಂಜಿನಿಯರಿಂಗ್ ಫಿಸಿಕ್ಸ್ನಲ್ಲಿ ಆಸಕ್ತಿ ಮತ್ತು ಕುತೂಹಲ ಮೂಡಿಸುತ್ತವೆ. ಪರಿಣಾಮ ಈ ಕ್ಷೇತ್ರದಲ್ಲಿ ಶಿಕ್ಷಣ ಪಡೆದು ಬದುಕು ರೂಪಿಸಿಕೊಳ್ಳುವ ಬಗ್ಗೆ ಚಿಂತನೆ ನಡೆಸುತ್ತಾರೆ. ಬೇರೆ ದೇಶಗಳಲ್ಲೂ ಇಂತಹ ಯೋಜನೆಗಳಿಂದ ಭೌತಶಾಸ್ತ್ರದತ್ತ ಆಕರ್ಷಿತರಾಗಿದ್ದಾರೆ. ಈ ವೀಕ್ಷಣಾಲಯವು ಪೂರ್ಣಗೊಂಡಾಗ ಭಾರತದಲ್ಲಿ ಕೆಲವೇ ಕೆಲವು ಅಂತಾರಾಷ್ಟ್ರೀಯ ಮಹತ್ವದ ಅತ್ಯುನ್ನತ ವೈಜ್ಞಾನಿಕ ಸೌಲಭ್ಯಗಳ ಪೈಕಿ ಇದೂ ಒಂದಾಗಲಿದೆ. ದೇಶದಲ್ಲಿ ವೈಜ್ಞಾನಿಕ ಬೆಳವಣಿಗೆಗೆ ಇದೂ ನೆರವಾಗಲಿದೆ.
ಹೊಸ ಯುಗದ ಆರಂಭ
ಗುರುತ್ವದ ಅಲೆಯ ಪತ್ತೆಯು ಭೌತಶಾಸ್ತ್ರ ಮತ್ತು ಖಗೋಳವಿಜ್ಞಾನ ಕ್ಷೇತ್ರದಲ್ಲಿ ಹೊಸ ಯುಗಕ್ಕೆ ನಾಂದಿ ಹಾಡಲಿದೆ. ವಿಶ್ವದ ರಚನೆ, ಅಸ್ತಿತ್ವದ ಬಗೆಗಿನ ಚಿತ್ರಣಕ್ಕೆ ಮತ್ತೊಂದು ಪುರಾವೆ ಸಿಕ್ಕಿದೆ. ಅಂದರೆ, ಈ ಗುರುತ್ವದ ಅಲೆಗಳ ಮೂಲಕ ವಿಶ್ವವು ನಮ್ಮೊಂದಿಗೆ ಮತ್ತೊಮ್ಮೆ ಸಂಭಾಷಿಸಿದೆ. ವಿಶ್ವದ ಅಸ್ತಿತ್ವದ ಬಗ್ಗೆ ತಿಳಿಸುವ ಮೂಲಭೂತ ಸಂಶೋಧನೆ ಇದಾಗಿದ್ದು, ಕಾಲ-ದೇಶದ ಹರವಿನ ಬಗ್ಗೆ ಮತ್ತೊಂದಷ್ಟು ಮೂರ್ತರೂಪವನ್ನು ನಮಗೆ ನೀಡಿರುವುದಲ್ಲದೆ, ಹೊಸ ಸಂಶೋಧನೆಗಳಿಗೆ ನಾಂದಿ ಹಾಡಿದೆ. ಗುರುತ್ವದ ಅಲೆಯ ಪತ್ತೆ ಕಪ್ಪುರಂದ್ರ ಇರುವಿಕೆಯನ್ನು ಸಾಬೀತು ಮಾಡಿದೆ.
ಬೆಂಗಳೂರು: ‘ಡಿಜಿಟಲ್ ತಂತ್ರಜ್ಞಾನದ ಹೃದಯ ಇರುವುದು ಬೆಂಗಳೂರಿನಲ್ಲಿ. ಈ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ವಿಶ್ವದ ಪ್ರಮುಖ ಕಂಪೆನಿಗಳೇ ಈ ಮಾತನ್ನು ಒಪ್ಪಿಕೊಂಡಿವೆ’ ಎಂದು ಲೇಖಕ ಶಿವಾನಂದ ಕಣವಿ ಅಭಿಪ್ರಾಯಪಟ್ಟರು. ತಮ್ಮ ‘ಸ್್ಯಾಂಡ್ ಟು ಸಿಲಿಕಾನ್: ದಿ ಅಮೇಜಿಂಗ್ ಸ್ಟೋರಿ ಆಫ್ ಡಿಜಿಟಲ್ ಟೆಕ್ನಾಲಜಿ’ ಕೃತಿಯ ಕನ್ನಡಾನುವಾದ ‘ಡಿಜಿಟಲ್ ಕ್ರಾಂತಿ ಮತ್ತು ಭಾರತ’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು. ಕೃತಿಯನ್ನು ಡಾ.ವೈ.ಸಿ.ಕಮಲಾ ಅವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ‘ಡಿಜಿಟಲ್ ಕ್ರಾಂತಿ ಭಕ್ತಿ ಚಳವಳಿ ಇದ್ದಂತೆ. ಕುಲ, ಹಳ್ಳಿ, ರಾಷ್ಟ್ರಗಳನ್ನು ಮೀರಿ ಇದು ವ್ಯಾಪಿಸಿದೆ. ಇದಕ್ಕೆ ಜಾತಿ, ಮತ ಪಂಥಗಳ ಬೇಧವೂ ಇಲ್ಲ. ಜನರ ಒಳಿತಿಗಾಗಿ ಇದನ್ನು ಯಾರು ಬೇಕಾದರೂ ಬಳಸಬಹುದು. ಯಾರು ಬೇಕಾದರೂ ಬೆಳೆಸಬಹುದು’ ಎಂದು ಕಣವಿ ವಿಶ್ಲೇಷಿಸಿದರು. ‘ಭಾರಿ ಪ್ರಮಾಣದ ಸಮಗ್ರ ಸರ್ಕ್ಯೂಟ್ (ವೆರಿ ಲಾರ್ಜ್ ಸ್ಕೇಲ್ ಇಂಟೆಗ್ರೇಟೆಡ್ ಸರ್ಕ್ಯೂಟ್) ರೂಪಿಸುವ ತಂತ್ರಜ್ಞಾನ ಹೊಂದಿರುವ ವಿಶ್ವದ ಮೂರು ಮುಂಚೂಣಿ ರಾಷ್ಟ್ರಗಳ ಪೈಕಿ ಭಾರತವೂ ಒಂದು. ಈ ತಂತ್ರಜ್ಞಾನದಲ್ಲಿ ಅಮೆರಿಕ ಅಗ್ರಸ್ಥಾನದಲ್ಲಿದ್ದರೆ, ಇಸ್ರೇಲ್ ನಂತರದ ಸ್ಥಾನದಲ್ಲಿದೆ. ಫೈಬರ್ ಆಪ್ಟಿಕ್ಸ್, ಎಂಪಿ3, ಎಚ್‌ಡಿಟಿವಿ, ಮೊಬೈಲ್ ಫೋನ್‌ಗಳಲ್ಲಿ ಬಳಸುವ ಕೋಡಿಂಗ್ ತಂತ್ರಜ್ಞಾನಗಳ ಮೂಲಕರ್ತೃಗಳು ಭಾರತೀಯರು ಎಂಬುದು ಬಹುತೇಕರಿಗೆ ತಿಳಿದಿಲ್ಲ’ ಎಂದರು. ‘ದೇವಾಲಯವನ್ನು ನಿರ್ಮಿಸುವಾಗ ಯಾರೋ ಕಲ್ಲು ಕಟ್ಟುತ್ತಾರೆ. ಇನ್ನೊಬ್ಬರು ಕಲಶ ಇಡುತ್ತಾರೆ. ಕಲಶ ಇಟ್ಟವರೇ ದೇವಾಲಯ ನಿರ್ಮಿಸಿದರು ಎನ್ನಲಾಗದು. ತಂತ್ರಜ್ಞಾನದ ಕೊಡುಗೆಯೂ ಅದೇ ರೀತಿ. ತಂತ್ರಜ್ಞಾನಗಳ ಅಭಿವೃದ್ಧಿ ನಿಟ್ಟಿನಲ್ಲಿ ವಿಶ್ವದಾದ್ಯಂತ ಏಕಕಾಲದಲ್ಲಿ ಅನೇಕ ಕೆಲಸಗಳು ನಡೆಯುತ್ತಿರುತ್ತವೆ’ ಎಂದು ವಿವರಿಸಿದರು. ಜವಹರಲಾಲ್ ನೆಹರೂ ವೈಜ್ಞಾನಿಕ ಉನ್ನತ ಅಧ್ಯಯನ ಸಂಸ್ಥೆಯ ವಿಜ್ಞಾನಿ ಡಾ.ರೊದ್ದಂ ನರಸಿಂಹ ಮಾತನಾಡಿ, ‘ಬೆಂಗಳೂರು ಹಿಂದೆ ವಿಜ್ಞಾನ ನಗರ, ವೈಮಾಂತರಿಕ್ಷ ನಗರ ಎಂದು ಖ್ಯಾತವಾಗಿತ್ತು. ಈಗ ಮಾಹಿತಿ ತಂತ್ರಜ್ಞಾನದ ನಗರ ಎಂದು ಗುರುತಿಸಿಕೊಂಡಿದೆ. ನಗರದ ಮಾತೃ ಭಾಷೆಯಾದ ಕನ್ನಡದಲ್ಲಿ ಇಂತಹ ಕೃತಿಯ ಅಗತ್ಯ ಇತ್ತು’ ಎಂದರು. ‘ಕಿಸೆಯಲ್ಲಿ ಮೊಬೈಲ್ ಇಟ್ಟುಕೊಳ್ಳುವ ಕಾಲ ಬರುತ್ತದೆ ಎಂದು 25 ವರ್ಷ ಹಿಂದೆ ಯಾರೂ ಯೋಚಿಸಿಯೂ ಇರಲಿಲ್ಲ. ತಂತ್ರಾಂಶವನ್ನು ಚೆನ್ನಾಗಿ ರೂಪಿಸಬಲ್ಲೆವು ಎಂಬುದನ್ನು ನಾವೇ ಮೊದಲು ಗ್ರಹಿಸಿದ್ದರಿಂದ ಈ ಕ್ಷೇತ್ರದಲ್ಲಿ ಇತರರಿಗಿಂತ ಹೆಚ್ಚು ಸಾಧನೆ ಮಾಡಲು ಸಾಧ್ಯವಾಯಿತು. 1,500 ವರ್ಷಗಳಿಗೂ ಹಿಂದೆ ಗಣಿತಕ್ಕೂ ನಮ್ಮ ಕೊಡುಗೆ ಮಹತ್ತರವಾದುದು. ವಿಜ್ಞಾನದ ಬೆಳವಣಿಗೆಗೆಲ್ಲಾ ಅದೇ ತಳಹದಿ’ ಎಂದರು. ಭಾರತೀಯ ಬಾಹ್ಯಾಕಾಶ ಸಂಸ್ಥೆ ಅಧ್ಯಕ್ಷ.ಡಾ.ಎ.ಎಸ್.ಕಿರಣ್ ಕುಮಾರ್ ಮಾತನಾಡಿ, ‘ಡಿಜಿಟಲ್ ಕ್ರಾಂತಿಯಿಂದ ತರಕಾರಿ ಮಾರುವವರಿಂದ ಹಿಡಿದು ಬಡಗಿವರೆಗೆ ಎಲ್ಲರ ಬದುಕಿನಲ್ಲೂ ಬದಲಾವಣೆಗಳಾಗಿವೆ. ಮೊಬೈಲ್ ಬರುವ ಮುನ್ನ ಬಹುಮಹಡಿ ಕಟ್ಟಡದಲ್ಲಿದ್ದವರು ಒಂದು ಗ್ಲಾಸ್ ಚಹ ಬೇಕಿದ್ದರೂ ಇನ್ನೊಬ್ಬರನ್ನು ಚಹಾ ಮಾರುವವನ ಬಳಿ ಕಳುಹಿಸಬೇಕಿತ್ತು’ ಎಂದರು. ತಂದೆಗೆ ಸಲ್ಲಿಸಿದ ಗೌರವ ‘ಸ್ಯಾಂಡ್ ಟು ಸಿಲಿಕಾನ್: ದಿ ಅಮೇಜಿಂಗ್ ಸ್ಟೋರಿ ಆಫ್ ಡಿಜಿಟಲ್ ಟೆಕ್ನಾಲಜಿ’ ಕೃತಿಯ ಲೇಖಕ ಶಿವಾನಂದ ಕಣವಿ ಅವರ ತಂದೆ ಚೆನ್ನವೀರ ಕಣವಿ ಹಾಗೂ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ ಡಾ.ವೈ.ಸಿ.ಕಮಲಾ ಅವರ ತಂದೆ ಪಂಡಿತ ಚನ್ನಪ್ಪ ಎರೋಶೀಮೆ ಅವರಿಬ್ಬರೂ ಕನ್ನಡದ ಹೆಸರಾಂತ ಸಾಹಿತಿಗಳು. ಕೃತಿಯ ಲೇಖಕ ಹಾಗೂ ಅನುವಾದಕಿ ಸೇರಿ ತಂದೆಯಂದಿರ ದಿನ ತಂದೆ ಗೌರವ ಪಡುವಂಥ ಕಾರ್ಯ ಮಾಡಿದ್ದಾರೆ’ ಎಂದು ಸಭಿಕರೊಬ್ಬರು ಹೇಳಿದರು.
ವೈಜ್ಞಾನಿಕವಾಗಿ ವಿದ್ಯಾರ್ಥಿಗಳು ಸಮರ್ಥರಾಗುವ ಉದ್ದೇಶದಿಂದ ರಾಜ್ಯದ 411 ಸರಕಾರಿ ಕಾಲೇಜುಗಳಿಗೂ ಸ್ಮಾರ್ಟ್ ಕ್ಲಾಸ್‌ಗಳನ್ನು ವಿಸ್ತರಿಸುವ ಗುರಿಯಿದ್ದು, ಬಜೆಟ್‌ನಲ್ಲಿ ನೆರವು ನೀಡುವಂತೆ ಸರಕಾರಕ್ಕೆ ಮನವಿ ಮಾಡಲಾಗಿದೆ ಎಂದು ಕಾಲೇಜು ಶಿಕ್ಷೃಣ ಇಲಾಖೆ ನಿರ್ದೇಶಕ ಶಂಕರಪ್ಪ ಹೇಳಿದರು.
ವಿಕ ಸುದ್ದಿಲೋಕ | Updated:
ಮಂಗಳೂರು: ವೈಜ್ಞಾನಿಕವಾಗಿ ವಿದ್ಯಾರ್ಥಿಗಳು ಸಮರ್ಥರಾಗುವ ಉದ್ದೇಶದಿಂದ ರಾಜ್ಯದ 411 ಸರಕಾರಿ ಕಾಲೇಜುಗಳಿಗೂ ಸ್ಮಾರ್ಟ್ ಕ್ಲಾಸ್‌ಗಳನ್ನು ವಿಸ್ತರಿಸುವ ಗುರಿಯಿದ್ದು, ಬಜೆಟ್‌ನಲ್ಲಿ ನೆರವು ನೀಡುವಂತೆ ಸರಕಾರಕ್ಕೆ ಮನವಿ ಮಾಡಲಾಗಿದೆ ಎಂದು ಕಾಲೇಜು ಶಿಕ್ಷೃಣ ಇಲಾಖೆ ನಿರ್ದೇಶಕ ಶಂಕರಪ್ಪ ಹೇಳಿದರು.
ಕಂಕನಾಡಿಯ ಫಾತಿಮಾ ರಿಟ್ರೀಟ್ ಹೌಸ್ ಸಭಾಂಗಣದಲ್ಲಿ ಶನಿವಾರ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ವಿವಿಧ ಸಂಸ್ಥೆಗಳ ಆಶ್ರಯದಲ್ಲಿ ವಿಜ್ಞಾನ ಪದವಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ರಾಜ್ಯಮಟ್ಟದ ಅಂತರಕಾಲೇಜು ಕನ್ನಡ ವಿಜ್ಞಾನ ಉಪನ್ಯಾಸ ಸ್ಪರ್ಧೆ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಮೊದಲ ಹಂತದಲ್ಲಿ 100 ಕಾಲೇಜುಗಳಲ್ಲಿ ಸ್ಮಾರ್ಟ್ ಕ್ಲಾಸ್ ಆರಂಭಿಸಲು ಯೋಜನೆ ರೂಪಿಸಿದ್ದು, ಈ ಪೈಕಿ 80 ಕಾಲೇಜುಗಳಿಗೆ ಈಗಾಗಲೇ ಬೋಧನಾ ವೀಡಿಯೊಗಳನ್ನು ನೀಡಲಾಗಿದೆ. ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ಉಪನ್ಯಾಸವನ್ನು ವೀಡಿಯೊ ಚಿತ್ರೀಕರಿಸಿ ಅದನ್ನು ಎಲ್ಲ ಕಾಲೇಜುಗಳಿಗೂ ನೀಡಲಾಗುವುದು. ಅನುದಾನಿತ ಕಾಲೇಜುಗಳಿಗೂ ಇದನ್ನು ವಿಸ್ತರಿಸುವ ಗುರಿ ಹೊಂದಲಾಗಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಕಾರ್ಯಕ್ರಮ ಉದ್ಘಾಟಿಸಿ, ಮಕ್ಕಳಲ್ಲಿರುವ ಸಹಜ ಕುತೂಹಲವನ್ನು ಶಾಲೆಗಳು ಮೊಟಕುಗೊಳಿಸಬಾರದು. ವಿದ್ಯಾರ್ಥಿಗಳಲ್ಲಿ ಪ್ರಶ್ನಿಸುವ ಮನೋಭಾವ ಮೂಡಿಸಬೇಕು. ಶಿಕ್ಷೃಣದಿಂದ ಸಾಮಾಜಿಕ ಪ್ರಜ್ಞೆ ಜಾಗೃತವಾಗಬೇಕು ಎಂದವರು ನುಡಿದರು.
ಕಾಲೇಜು ಶಿಕ್ಷೃಣ ಇಲಾಖೆ ಶೈಕ್ಷೃಣಿಕ ಸಂಯೋಜಕಿ ಡಾ.ವೈ.ಸಿ.ಕಮಲಾ ಮಾತನಾಡಿ, ವಿಜ್ಞಾನ ಮತ್ತು ಸಮಾಜ ಬೇರ್ಪಡಿಸಲಾಗದಷ್ಟು ಸಂಬಂಧ ಹೊಂದಿವೆ. ವಿಜ್ಞಾನವನ್ನು ಮಾತೃಭಾಷೆಯಲ್ಲಿ ತಲುಪಿಸುವ ಸಂವಹನಕಾರರಾಗಬೇಕು ಎಂದರು. ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಕಾರ್ಯಕಾರಿ ಮಂಡಳಿ ಸದಸ್ಯ ಎಚ್.ಆರ್. ಸ್ವಾಮಿ ಅಧ್ಯಕ್ಷೃತೆ ವಹಿಸಿದ್ದರು.
ಕಾರ್ಯಕಾರಿ ಮಂಡಳಿ ಸದಸ್ಯ ಆರ್.ನಾಗೇಶ್ ಅರಳಕುಪ್ಪೆ, ಕಾಲೇಜು ಶಿಕ್ಷೃಣ ಇಲಾಖೆ ಮಂಗಳೂರು ವಿಭಾಗದ ಜಂಟಿ ನಿರ್ದೇಶಕ ಬಿ.ಎ.ಪಾಟೀಲ, ಸೇಂಟ್ ಆಗ್ನೆಸ್ ಕಾಲೇಜು ಪ್ರಾಧ್ಯಾಪಕ ಡಾ.ಜಯಂತ್ ಎಚ್., ವಿಜ್ಞಾನ ಪರಿಷತ್‌ನ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಅಧ್ಯಕ್ಷೃ ಕಡಮಜಲು ಸುಭಾಸ್ ರೈ, ಕಾರ್ಯದರ್ಶಿ ಅನಂತರಾಮ ಹೇರಳೆ, ಕೋಶಾಧಿಕಾರಿ ರೆನ್ನಿ ಡಿಸೋಜ ಮತ್ತಿತರರು ಉಪಸ್ಥಿತರಿದ್ದರು.
ಬೆಂಗಳೂರು: 'ಬೆಂಗಳೂರು ನನ್ನೂರು ಎಂಬ ಅಭಿಮಾನದ ಕೊರತೆ ನಗರದ ಜನರಲ್ಲಿ ಢಾಳಾಗಿ ಕಾಣುತ್ತಿದೆ' ಎಂದು ಚಾಮರಾಜಪೇಟೆ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸುರೇಶ್ ಮೂನ ಬೇಸರ ವ್ಯಕ್ತಪಡಿಸಿದರು.
ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರ ಕನ್ನಡ ಸಾಹಿತ್ಯ ಪರಿಷತ್ತು ಮಕ್ಕಳಕೂಟದಲ್ಲಿ ಶನಿವಾರ ಹಮ್ಮಿಕೊಂಡಿದ್ದ '3ನೇ ಕನ್ನಡ ಸಾಹಿತ್ಯ ಸಮ್ಮೇಳನ' ಉದ್ಘಾಟಿಸಿ ಅವರು ಮಾತನಾಡಿದರು.
'ನಗರದ ಸ್ಮಾರಕಗಳ ಹಿಂದೆ ಅದರ ಇತಿಹಾಸ ತಿಳಿಸುವ ಫಲಕಗಳನ್ನು ಅಳವಡಿಸಿ, ಮಕ್ಕಳಿಗೆ ಬೆಂಗಳೂರಿನ ಪರಿಚಯ ಮಾಡಿಸಬೇಕು. ಆಗ ನಮ್ಮ ನಾಡು, ನುಡಿ, ಸಂಸ್ಕೃತಿ ಹಾಗೂ ಪರಂಪರೆ ಬಗ್ಗೆ ಪ್ರೀತಿ ಬೆಳೆಸಿಕೊಳ್ಳುತ್ತಾರೆ' ಎಂದು ವಿವರಿಸಿದರು.
'ಚಾಮರಾಜಪೇಟೆಯಲ್ಲಿ ಐದು ಮುಖ್ಯ ರಸ್ತೆಗಳಿವೆ. ಎಲ್ಲವೂ ಒಂದೊಂದು ಪುಸ್ತಕವಾಗುವಷ್ಟು ಇತಿಹಾಸವನ್ನು ಹೊಂದಿವೆ. ಮಕ್ಕಳ ಕೂಟ ಸ್ಥಾಪನೆ, ಸಾಹಿತ್ಯ ಪರಿಷತ್ತಿನ ಹುಟ್ಟು ಹೀಗೆ ಅವುಗಳ ಹಿನ್ನಲೆ ತಿಳಿದರೆ, ಸಹಜವಾಗಿ ಪ್ರೀತಿ ಹುಟ್ಟುತ್ತದೆ.'
( ಸಮ್ಮೇಳನದಲ್ಲಿ ಪುಸ್ತಕ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು)
'ಬೆಂಗಳೂರು ಎನ್ನುವ ಪದಕ್ಕೆ 1,000 ವರ್ಷಗಳ ಇತಿಹಾಸವಿದೆ. ಕೆಂಪೇಗೌಡರಿಂದ ಸ್ಥಾಪನೆಯಾದ ಈ ನಗರವು ಮರಾಠರು, ಮೊಘಲರು, ಮುಸ್ಲಿಮರು, ಮೈಸೂರು ಅರಸರು, ಬ್ರಿಟಿಷರು, ದಿವಾನರು... ಹೀಗೆ ಎಲ್ಲರ ಆಡಳಿತದಲ್ಲಿ ಹಂತ ಹಂತವಾಗಿ ಅಭಿವೃದ್ಧಿಗೊಳ್ಳುತ್ತಾ ಬಂದಿದೆ. ಈ ರೀತಿ ನಗರದ ಇತಿಹಾಸವನ್ನು ಜನರಿಗೆ ತಲುಪಿಸುವ ಕೆಲಸ ಆಗಬೇಕು.'
'ಚಾಮರಾಜಪೇಟೆಯಲ್ಲಿ ವಿವಿಧ ದೇವಾಲಯ, ಮಸೀದಿ, ಚರ್ಚ್, ಜೈನ ಮಂದಿರ ಎಲ್ಲವೂ ಇದೆ. ಇದೊಂದು ಕೋಮುಸೌಹಾರ್ದಕ್ಕೆ ಮಾದರಿ ಪ್ರದೇಶ. ಇಲ್ಲಿ ಉತ್ಕೃಷ್ಟ ಸಂಸ್ಕೃತಿ ಇದೆ. ಭವ್ಯ ಪರಂಪರೆ ಇದೆ. ಇಂದು ಕಾಣುವ ಬದಲಾವಣೆ ತಾತ್ಕಾಲಿಕ. ಪರಿವರ್ತನೆಯ ಕಾಲ ಅಂತಾರಲ್ಲ ಹಾಗೆ. ಹೊಸ ತಂತ್ರಜ್ಞಾನ ರೂಪಿಸಿಕೊಂಡು ಮುಂದೆ ಸೊಗಸಾದ ನಗರವಾಗುತ್ತದೆ' ಎಂದು ಆಶಾಭಾವನೆ ವ್ಯಕ್ತಪಡಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ್, 'ಕನ್ನಡದ ವಾತಾವರಣ ಹಬ್ಬಿಸುವ ಕೆಲಸ ಆಗಬೇಕು. ರಾಜ್ಯದಲ್ಲಿ 1.15 ಕೋಟಿ ಮಕ್ಕಳಲ್ಲಿ 75 ಲಕ್ಷ ಮಕ್ಕಳು ಕನ್ನಡದಲ್ಲಿಯೇ ಕಲಿಯುತ್ತಿದ್ದಾರೆ. ಅವರಿಗೆ ಉತ್ತಮ ಸೌಲಭ್ಯ ನೀಡುವು ಮೂಲಕ ಹೆಚ್ಚು ಮಕ್ಕಳನ್ನು ಕನ್ನಡದೆಡೆಗೆ ಆಕರ್ಷಿಸಬೇಕು' ಎಂದು ತಿಳಿಸಿದರು.
ಸಂಸದ ಪಿ.ಸಿ. ಮೋಹನ್, 'ಎಲ್ಲಾ ಭಾಷೆಗಳನ್ನೂ ಮಾತನಾಡಲು ಸಾಧ್ಯವಾಗುವ ಏಕೈಕ ತಾಣವೆಂದರೆ ಅದು ಬೆಂಗಳೂರು. ಹೊರ ರಾಜ್ಯಗಳಿಂದ ಬಂದವರನ್ನು ಅವರ ಭಾಷೆಯಲ್ಲಿಯೇ ಮಾತನಾಡಿಸಿ, ಕನ್ನಡ ಕಲಿಯದಂತೆ ಮಾಡುತ್ತಿದ್ದೇವೆ' ಎಂದು ಹೇಳಿದರು.
( ಸಮ್ಮೇಳನಾಧ್ಯಕ್ಷ ಸುರೇಶ್ ಮೂನ ಅವರು ಕನ್ನಡ ಬಾವುಟವನ್ನು ಬೀಸಿದರು. ಎಂ.ಎನ್.ವ್ಯಾಸರಾವ್, ಮಾಯಣ್ಣ, ಹಿಂದಿನ ಸಮ್ಮೇಳನದ ಅಧ್ಯಕ್ಷೆ ನಾಗಮಣಿ ಎಸ್.ರಾವ್ ಹಾಗೂ ಪಿ.ಸಿ.ಮೋಹನ್ ಇದ್ದರು)
ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಾಯಣ್ಣ, 'ಸ್ಮಾರಕ, ಪ್ರಮುಖ ಕಟ್ಟಡಗಳ ಬಳಿ ಅವುಗಳ ಇತಿಹಾಸ ಕುರಿತ ಫಲಕ ಹಾಕಬೇಕೆಂದು ನಾನೂ ಆಲೋಚಿಸಿದ್ದೆ. ಅದನ್ನು ಕಾರ್ಯಗತಗೊಳಿಸಲು ಪ್ರಯತ್ನಿಸುತ್ತೇವೆ. ನಗರದಲ್ಲಿ ಸುಮಾರು 5,000 ಫಲಕಗಳನ್ನು ಹಾಕಿಸಲು ಅವಕಾಶವಿದೆ' ಎಂದು ಹೇಳಿದರು.
'ಈಗ ಜಯನಗರ, ಚಾಮರಾಜಪೇಟೆ, ಮಲ್ಲೇಶ್ವರ ಹೀಗೆ ದಕ್ಷಿಣ ಬೆಂಗಳೂರಿನಲ್ಲಿ ಮಾತ್ರ ಬಹುಸಂಖ್ಯೆಯಲ್ಲಿ ಕನ್ನಡಿಗರನ್ನು ಕಾಣುತ್ತೇವೆ. ಉಳಿದಂತೆ ಕನ್ನಡಿಗರನ್ನು ಹುಡುಕಬೇಕಾದ ಸ್ಥಿತಿ ಇದೆ. ಹೊರರಾಜ್ಯದಿಂದ ಬಂದು ಇಲ್ಲಿ ನೆಲೆಸಿರುವವರು ನೆಲ, ಜಲ, ಆಹಾರ ಹಾಗೂ ಕನ್ನಡದ ಋಣ ತೀರಿಸಬೇಕು. ಇಲ್ಲದಿದ್ದರೆ, ಅವರು ಉದ್ಧಾರವಾಗುವುದಿಲ್ಲ' ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರು ನಗರ ಜಿಲ್ಲಾ ಕಸಾಪ ಅಧ್ಯಕ್ಷ ಮಾಯಣ್ಣ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಬೆಂಗಳೂರು ನಗರ ಜಿಲ್ಲಾ ಕ.ಸಾ.ಪ ಗೌರವ ಅಧ್ಯಕ್ಷ ಅಶೋಕ್ ಕುಮಾರ್ ಪರಿಷತ್ತಿನ ಧ್ವಜಾರೋಹಣ ಹಾಗೂ ಚಾಮರಾಜಪೇಟೆ ಕ.ಸಾ.ಪ ಅಧ್ಯಕ್ಷ ಶ್ರೀಧರ್ ಧ್ವಜಾರೋಹಣ ಕನ್ನಡ ಧ್ವಜಾರೋಹಣ ನೆರವೇರಿಸಿದರು.
**
'ಕಸಾಪ ಕಟ್ಟಡ ನವೀಕರಣಕ್ಕೆ ₹50 ಲಕ್ಷ'
'1915ರಲ್ಲಿ ಸ್ಥಾಪನೆಯಾದ ಕನ್ನಡ ಸಾಹಿತ್ಯ ಪರಿಷತ್ತಿಗೆ (ಕಸಾಪ) 100 ವರ್ಷಗಳ ಇತಿಹಾಸವಿದೆ. ಕನ್ನಡ ಸಾಹಿತ್ಯದ ಪ್ರತಿರೂಪವಾಗಿ ಕೆಲಸ ಮಾಡುತ್ತಿರುವ ಈ ಸಂಸ್ಥೆ ರಾಜ್ಯ, ಹೊರ ರಾಜ್ಯ, ವಿದೇಶದಲ್ಲಿಯೂ ಹೆಸರು ಮಾಡಿದೆ. ಹಾಗಾಗಿ ಇದರ ಕೇಂದ್ರ ಕಚೇರಿಯನ್ನು ಸುಸ್ಥಿರವಾಗಿಟ್ಟುಕೊಳ್ಳುವುದು ನಮ್ಮ ಜವಾಬ್ದಾರಿ. ಕಟ್ಟಡದ ನವೀಕರಣಕ್ಕೆ ಹಾಗೂ ಪೀಠೋಪಕರಣಗಳ ಖರೀದಿಗಾಗಿ ಸಂಸದರ ನಿಧಿಯಿಂದ ₹ 50 ಲಕ್ಷ ನೀಡುತ್ತೇನೆ' ಎಂದು ಸಂಸದ ಪಿ.ಸಿ. ಮೋಹನ್ ಭರವಸೆ ನೀಡಿದರು.
( ಮೆರವಣಿಗೆಗೆ ಮೆರಗು ನೀಡಿದ ಡೊಳ್ಳು ಕುಣಿತ -ಪ್ರಜಾವಾಣಿ ಚಿತ್ರಗಳು)
ಮೊದಲ ಬಾರಿ ವಿಜ್ಞಾನ ಗೋಷ್ಠಿ
ಇದೇ ಮೊದಲ ಬಾರಿಗೆ ಚಾಮರಾಜಪೇಟೆ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿಜ್ಞಾನ ಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿತ್ತು. ವಿಜ್ಞಾನ ಸಂವಹನದ ವಿವಿಧ ರೂಪಗಳು ಹಾಗೂ ಕನ್ನಡ ಗ್ರಂಥಗಳ ಅಂಕೀಕರಣ ವಿಷಯದ ಕುರಿತು ಗೋಷ್ಠಿಗಳು ನಡೆದವು.
ವಿಜ್ಞಾನ ಸಂವಹನ ಕುರಿತು ಮಾತನಾಡಿದ ಪ್ರಾಧ್ಯಾಪಕಿ ವೈ.ಸಿ. ಕಮಲಾ, 'ಸಾಕ್ಷರತೆಯಲ್ಲಿ ನಮ್ಮ ದೇಶ 92ನೇ ಸ್ಥಾನದಲ್ಲಿದೆ. ಇನ್ನು ವಿಜ್ಞಾನ ಸಾಕ್ಷರತೆಯನ್ನಂತೂ ಕೇಳುವುದೇ ಬೇಡ. ಹೀಗೆಂದ ಮಾತ್ರಕ್ಕೆ ನಾವು ವಿಜ್ಞಾನದ ಅಭಿವೃದ್ಧಿಗಾಗಿ ಖರ್ಚು ಮಾಡುತ್ತಿಲ್ಲ ಎಂದಲ್ಲ. ವಿಜ್ಞಾನಕ್ಕಾಗಿ ಅತಿ ಹೆಚ್ಚು ಖರ್ಚು ಮಾಡುವ ದೇಶಗಳ ಸಾಲಿನಲ್ಲಿ ಭಾರತ 8ನೇ ಸ್ಥಾನದಲ್ಲಿದೆ' ಎಂದು ಹೇಳಿದರು.
'ವಿಜ್ಞಾನದ ಶಿಕ್ಷಣ, ಅಭಿವೃದ್ಧಿ, ಸಾಕ್ಷರತೆಗೆ ಹೆಚ್ಚು ಒತ್ತು ನೀಡಬೇಕು. ಮಾತೃಭಾಷೆಯಲ್ಲಿ ವಿಜ್ಞಾನವನ್ನು ಕಲಿಸಿದರೆ ಹೆಚ್ಚು ಜನರನ್ನು ತಲುಪಬಹುದು. ವಿಜ್ಞಾನದ ಪರಿಕಲ್ಪನೆಯನ್ನು ಇಂಗ್ಲಿಷ್ನಲ್ಲಷ್ಟೇ ವಿವರಿಸಲು ಸಾಧ್ಯ ಎನ್ನುವ ಮೌಢ್ಯ ನಮ್ಮಲ್ಲಿದೆ. ನ್ಯೂಟನ್ ಚಲನೆಯ ನಿಯಮಗಳನ್ನು ಮೊದಲು ಬರೆದಿದ್ದು, ಮಾತೃಭಾಷೆ ಲ್ಯಾಟಿನ್ನಲ್ಲಿ. ಐನ್ಸ್ಟೀನ್ ಸಾಪೇಕ್ಷತಾ ಸಿದ್ಧಾಂತವನ್ನು ವಿವರಿಸಿದ್ದು ಜರ್ಮನ್ ಭಾಷೆಯಲ್ಲಿ. ನಮ್ಮ ಮಾತೃಭಾಷೆಯ ಮೂಲಕವೂ ವಿಜ್ಞಾನದ ಸಂವಹನ ಸಾಧ್ಯ' ಎಂದರು.
'ಕಥೆ, ಕಾದಂಬರಿ, ಕವನ, ಪ್ರಬಂಧ, ಲೇಖನ, ಬ್ಲಾಗ್ನಲ್ಲಿ ಬರೆದುಕೊಳ್ಳುವುದು, ವಿಡಿಯೊ ರೂಪಿಸುವುದು, ಧ್ವನಿ ಪ್ರಸಾರದ ಮೂಲಕ ವಿಜ್ಞಾನ ಸಂವಹನ ನಡೆಸಬಹುದು. ಪಶ್ಚಿಮ ರಾಷ್ಟ್ರಗಳಲ್ಲಿ ಇದು ಹೆಚ್ಚು ಪ್ರಖ್ಯಾತಿ ಪಡೆದಿದೆ' ಎಂದು ವಿವರಿಸಿದರು.
ಗಣಕ ಪರಿಷತ್ತಿನ ಅಧ್ಯಕ್ಷ ನರಸಿಂಹಮೂರ್ತಿ ಅವರು ಕನ್ನಡ ಗ್ರಂಥಗಳ ಅಂಕೀಕರಣದ ಕುರಿತು ಮಾತನಾಡಿದರು.
**
ಗಮನ ಸೆಳೆದ ಮೆರವಣಿಗೆ
ಬೆಳ್ಳಿ ಸಾರೋಟಿನಲ್ಲಿ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಸಲಾಯಿತು. ಚಾಮರಾಜಪೇಟೆಯ ಮಲೆಮಹದೇಶ್ವರ ದೇವಸ್ಥಾನದಿಂದ ಹೊರಟ ಮೆರವಣಿಗೆ ವಿವಿಧ ರಸ್ತೆಗಳಲ್ಲಿ ಸಾಗಿ ಮಕ್ಕಳ ಕೂಟದಲ್ಲಿ ಮುಕ್ತಾಯಗೊಂಡಿತು. ಡೊಳ್ಳು ಕುಣಿತ, ವೀರಗಾಸೆ, ಕಂಸಾಳೆ ಜಾನಪದ ಕಲಾತಂಡಗಳು ಮೆರವಣಿಗೆಗೆ ಮೆರುಗು ನೀಡಿದವು. ವಿದ್ಯಾರ್ಥಿಗಳ ಬ್ಯಾಂಡ್ಸೆಟ್ ಗಮನ ಸೆಳೆಯಿತು.