Monday, 24 February 2014
Friday, 25 October 2013
ಸಂದರ್ಶನ ಮಾಡುವುದು ಒಂದು ಕುಶಲ ಕಲೆ . - Interviewing is an Art and Craft .
ಹಲವಾರು ದಿನಗಳಿಂದ ಕಾರಣಾಂತರಗಳಿಂದ ವಿಜ್ಞಾನ ಸಂವಹನೆಗಾಗಿ ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯವರು ನೀಡುವ ರಾಷ್ಟ್ರ ಪ್ರಶಸ್ತಿ ಪಡೆದಿರುವ ಈ ಮೂವರನ್ನು(ಒಟ್ಟು ಎಂಟು ಜನ ಇದ್ದಾರೆ )
ಸಂದರ್ಶಿಸುವ ಅಫೀಷಿಯಲ್ ಕೆಲಸ ಬಾಕಿ ಉಳಿದುಬಿಟ್ಟಿತ್ತು . ಮೂವರ ಅಪಾಯಿಂಟ್ ಮೆಂಟ್
ಅನ್ನು ಸಿನ್ಕ್ರೋನೈಸ್ ಮಾಡಿ ಒಂದೇ ದಿನದಲ್ಲಿ ಹ್ಯಾಟ್ರಿಕ್ ಸಾಧಿಸಿದ್ದು ಒಂದು ಸಾಧನೆಯೇ
ಸೈ .
ಈ ಮೂವರು ಹಿರಿಯರ ಮತ್ತು ಅವರ ಡಾಕ್ಟರುಗಳ ಅಪಾಯಿಂಟ್ಮೆಂಟ್ ಅನ್ನು ಅನುಸರಿಸಿ ನಿನ್ನೆಗೆ ಸಮಯ ಹೊಂದಿಕೆಯಾಯಿತು (25-10-2003).
ಭಟ್ಟರು (AKB) 24-10-2013 ರರ ಸಂಜೆ ಫೋನುಮಾಡಿ ಕಮಲಾ ಶನಿವಾರ (26-10-2013) ನನಗೆ ಸ್ವಲ್ಪ
ತೊಂದರೆಯಿದೆ ಶುಕ್ರವಾರವೇ ಬಂದುಬಿಡು ಉಳಿದ ಇಬ್ಬರನ್ನು ಒಪ್ಪಿಸುವುದು ನನ್ನ ಕೆಲಸ ಎಂದಾಗ
, ನನ್ನ ಕೆಲಸ ಸುಲಭವಾಯಿತು ಎಂದುಕೊಂಡು ಮನೆಕಡೆಗೆ ಎಲ್ಲ ವ್ಯವಸ್ಥೆಮಾಡಿ (ದೋಸೆಹಿಟ್ಟು,ಪಲ್ಯ , ಸಾರು ಇತ್ಯಾದಿ ) ಮೈಸೂರಿನ ಬಸ್ಸು ಹತ್ತಿ ಶುಕ್ರವಾರ ಅಲ್ಲಿದ್ದೆ.
ರಾಯರು, ಭಟ್ಟರು ಮತ್ತು ಶ್ರೀಮತಿ ಇವರುಗಳು ಬರೆದ ವಿಜ್ಞಾನ ಸಾಹಿತ್ಯ ಓದುತ್ತಾ ಬೆಳೆದಿದ್ದ ನನಗೆ ಇದೊಂದು ಸುವರ್ಣ ಅವಕಾಶವಾಗಿತ್ತು .
![]() |
| ಜೆ ಎಲ್ ಲಕ್ಷ್ಮಣ ರಾವ್ |
ಕನ್ನಡದಲ್ಲಿ
ವಿಜ್ಞಾನ ಸಂವಹನೆ ಯಾವ ಸನ್ನಿವೇಶದಲ್ಲಿ ಪ್ರಾರಂಭವಾಯಿತು ? ಆರಂಭದ ದಿನಗಳ
ಕಷ್ಟನಷ್ಟಗಳು ಏನು ? ಕನ್ನಡದಲ್ಲಿ ವಿಜ್ಞಾನ ಪ್ರಸಾರದ ಸಾಂಸ್ಥಿಕರಣವಾದ ಬಗೆ ಇತ್ಯಾದಿ
ಇತ್ಯಾದಿ ಕೇಳುತ್ತಾ ಹೋದಂತೆ ನನಗೆ ಬೇಕು ಬೇಕಾದ ಅನೇಕ ವಸ್ತುನಿಷ್ಠ ವಿಷಯಗಳು
ಸ್ಪಷ್ಟವಾಗಿ ಮೂಲ ಪುರುಷರಿಂದ ತಿಳಿಯುತ್ತಾ ಹೋಯಿತು .
ಆದರೆ ಸಂದರ್ಶನ ಮಾಡುವಾಗ ಎಚ್ಚರಿಕೆಯಿಂದ ಚರ್ಚೆಯನ್ನು ಟ್ರಾಕ್ ಮೇಲೆ ಇಡದಿದ್ದರೆ ಸಂದರ್ಶಿಸುವವರಿಗೆ ಅಷ್ಟರಮಟ್ಟಿಗೆ ಲಾಸ್ ಎಂದೇ ಹೇಳಬಹುದು .
ನನ್ನ ಉಪನ್ಯಾಸಕ ವೃತ್ತಿ , ನಿರೂಪಕಿಯ ಪ್ರವೃತ್ತಿ , ಬರವಣಿಗೆಯ ಒಳತುಡಿತ ಇವೆಲ್ಲವೂ
ಸೇರಿ ನಾನು ನಡೆಸಿದ ಮೊಟ್ಟ ಮೊದಲ "ಸರಣಿ ಸಂದರ್ಶನ"ದಲ್ಲಿ ಪರವಾಗಿಲ್ಲ ಎನಿಸಬಹುದಾಷ್ಟು
ವಿಷಯ ಸಂಗ್ರಹಣೆ ಮತ್ತು ತೃಪ್ತಿ ಪಡೆದಿದ್ದೇನೆ .
![]() |
| ಶ್ರೀಮತಿ ಹರಿಪ್ರಸಾದ್ |
![]() |
| ಅಡ್ಯನಡ್ಕ ಕೃಷ್ಣಭಟ್ |
ಇನ್ನು ಈ
ಮೂವರ ವಿಷಯದಲ್ಲೂ ಸಮಾನವಾಗಿ ಕಂಡ ಅಂಶವೆಂದರೆ ಜೀವನದಲ್ಲಿ ತಮಗೆದುರಾದ ಅನೇಕ ವೈಯುಕ್ತಿಕ
ಏರುಪೇರುಗಳ ನಡುವೆಯೂ, ಕನ್ನಡದ ಕಂದಮ್ಮಗಳಿಗೆ , ಕನ್ನಡಿಗರಿಗೆ ವಿಜ್ಞಾನ
ಸಾಹಿತ್ಯವನ್ನು ಒದಗಿಸಬೇಕೆಂಬ ಇವರುಗಳ ಕಳಕಳಿ ಮತ್ತು ಬದ್ದತೆ ಅನನ್ಯವಾದದ್ದು . ಇಂತಹ
ಕೆಲಸಕ್ಕೆ ರಾಷ್ಟ್ರಪ್ರಶಸ್ತಿ ನೀಡಿರುವುದು ನಿಜವಾದರೂ , ಅವರು ಇದನ್ನೆಂದೂ
ಕನಸಿನಲ್ಲಿಯೂ ಬಯಸಿ ಕೆಲಸ ಮಾಡಿದವರಲ್ಲ ಎಂಬುದೂ ಸಹ ಅಷ್ಟೇ ನಿಜವಾದುದು .
ಹಲವುಬಾರಿ ಕ್ಯಾಮೆರಾ ಮುಂದೆ ಸ್ಟೈಲ್ ಆಗಿ ಕುಳಿತು ಸಂದರ್ಶನ ನೀಡಿದ್ದ ನನಗೆ ,ಕೊನೆಗೆ ಅನ್ನಿಸಿದ್ದು ಸಂದರ್ಶಿಸುವುದು ಒಂದು ಕುಶಲಕಲೆ ಎಂದು .
Sunday, 1 September 2013
ಶಿಕ್ಷಕರ ದಿನಾಚರಣೆಯಂದು ನಿಮಗಿದೋ ನಮಸ್ಕಾರ ಮೇಷ್ಟ್ರೇ ........
ಪಾಠ ಹೇಳಿಕೊಟ್ಟ ಗುರುಗಳನ್ನು ನೆನೆಯಲು ಪ್ರತಿದಿನವೂ ಶಿಕ್ಷಕರ ದಿನಾಚರಣೆಯೇ ಎಂದರೆ ಅತಿಶಯೋಕ್ತಿಯೇನಿಲ್ಲ ಬಿಡಿ . ಆದರೆ ಸೆಪ್ಟೆಂಬರ್ ಐದರಂದು ಅದಕ್ಕಾಗೆ ಮೀಸಲಿರುವುದರಿಂದ ಎಂದೋ ಬರೆಯಬೇಕಾಗಿದ್ದ ಈ ವಿಷಯವನ್ನು ಇಂದು ಬರೆಯುತ್ತಿದ್ದೇನೆ ಅಷ್ಟೇ .
ನಮ್ಮ ಕಲಿಕೆಯ ವಿವಿದ ಹಂತಗಳಲ್ಲಿ ಹಲವಾರು ಗುರುಗಳು ನಮಗೆ
ನೆರವಾಗಿರುತ್ತಾರೆ ಅವರೆಲ್ಲರಿಗೂ ಮೊದಲಿಗೆ ಕೃತಜ್ಞತೆಗಳನ್ನು ಅರ್ಪಿಸಿಬಿಡುತ್ತೇನೆ .
ಅನಂತರ ಇಬ್ಬರು ವಿಶೇಷವಾದ ಗುರುಗಳಬಗ್ಗೆ ನಿಮಗೆ ತಿಳಿಸುತ್ತೇನೆ .
ಡಾ . ಸಿ. ಅರ್. ರಾಮಸ್ವಾಮಿ ಮತ್ತು ಡಾ . ಎಂ. ಜಿ. ನರಸಿಂಹನ್ ಅವರೇ ಈ ಇಬ್ಬರು ಗುರುಗಳು .
PhD ಮಹಾಪ್ರಬಂದವನ್ನು ಸಮರ್ಥಿಸಿಕೊಂಡ ದಿನ (2000,ಸೆಪ್ಟೆಂಬರ್ ), ನನ್ನ ಕುಟುಂಬ, ಗುರುಗಳಾದ ರಾಮಸ್ವಾಮಿ ಮತ್ತು ನರಸಿಂಹನ್ ಅವರೊಂದಿಗೆ ,ಹಂಪಿ ವಿ ವಿ ಯಲ್ಲಿ . ಅಪ್ಪನ ಹೆಗಲಲ್ಲಿರುವ ಪಲ್ಲವಿ ನಾಲ್ಕು ತಿಂಗಳ ಮಗು .
PhD ಮಹಾಪ್ರಬಂದವನ್ನು ಸಮರ್ಥಿಸಿಕೊಂಡ ದಿನ (2000,ಸೆಪ್ಟೆಂಬರ್ ), ನನ್ನ ಕುಟುಂಬ, ಗುರುಗಳಾದ ರಾಮಸ್ವಾಮಿ ಮತ್ತು ನರಸಿಂಹನ್ ಅವರೊಂದಿಗೆ ,ಹಂಪಿ ವಿ ವಿ ಯಲ್ಲಿ . ಅಪ್ಪನ ಹೆಗಲಲ್ಲಿರುವ ಪಲ್ಲವಿ ನಾಲ್ಕು ತಿಂಗಳ ಮಗು .
ರಾಮಸ್ವಾಮಿ ಬೆಂಗಳೂರು ವಿಶ್ವವಿದ್ಯಾಲದಲ್ಲಿ ನ್ಯೂಕ್ಲಿಯಾರ್ ಪಿಸಿಕ್ಸ್ ನ
ಪ್ರೊಫೆಸರ್ ಆಗಿದ್ದರೆ ನರಸಿಂಹನ್ ರಾಷ್ಟ್ರೀಯ ಉನ್ನತ ಅಧ್ಯಯನ ಸಂಸ್ಥೆಯಲ್ಲಿ
ಪ್ರೊಫೆಸರ್ ಆಗಿರುವವರು .
1996 ರ ಒಂದುದಿನ .
**********************
**********************
1996 ರ ಒಂದು ದಿನ ಕೈಯ್ಯಲ್ಲಿ ಅರ್ಜಿಯೊಂದನ್ನು ಹಿಡಿದ ನಾನು ಬೆಂಗಳೂರು
ವಿಶ್ವವಿದ್ಯಾಲಯದ ರಾಮಸ್ವಾಮಿಯವರ ಕೊಠಡಿಗೆ ತೆರಳಿ "ಮೇಷ್ಟ್ರೇ ಇದಕ್ಕೆ ಸೈನು ಮಾಡಿ"
ಎಂದೆ . ಅವಕ್ಕಾದ ಮೇಷ್ಟ್ರು "ಏನದು "ಎಂದರು "PhD ಗೆ ಅಪ್ಲೈ ಮಾಡಲು ಅರ್ಜಿ" ಎಂದೆ ."
ಯಾವ ವಿಷಯ ,ಯಾವ ವಿಶ್ವವಿದ್ಯಾಲಯ ,ಏನುಕತೆ" ಎಂದು ವಿಚಾರಿಸಿದರು .
"ಹಂಪಿ ಕನ್ನಡ ವಿಶ್ವವಿದ್ಯಾಲಯ , ಭೌತಶಾಸ್ತ್ರ ಮತ್ತು ಇತಿಹಾಸ
ಸಮ್ಮಿಲನಗೊಂಡ ವಿಷಯ" ಎಂದೆ . "ನನಗಿದು ಹೊಸದು ಅಷ್ಟಾಗಿ ತಿಳಿಯದು" ಎಂದು ಪ್ರಾಂಜಲ
ಮನಸ್ಸಿನಿಂದ ಹೇಳಿದರು . ಆಗ ನಾನು "ಮೇಷ್ಟ್ರೇ ನನಗೂ ಅಷ್ಟಾಗಿ ತಿಳಿಯದು ಅಧ್ಯಯನ
ಮಾಡುತ್ತಾ ಸಾಗೋಣ , ಮುಂದಿನದನ್ನು ನೋಡೋಣ" ಎಂದೆ . "ಅಕಸ್ಮಾತ್ ನಿನ್ನ ಕೆಲಸಕ್ಕೆ PhD
ಬರದಿದ್ದರೆ" ಎಂದರು ," ಪರವಾಗಿಲ್ಲ" ಎಂಬ ಉತ್ತರ ಕೊಟ್ಟ ಮೇಲೆ ಅರ್ಜಿಗೆ ಸಹಿ ಮಾಡಿದರು
. ವಿಶ್ವವಿದ್ಯಾಲಯಕ್ಕೆ ಅಪ್ಲೈ ಮಾಡಿ ನನ್ನ ಹೆಸರನ್ನು ನೊಂದಾಯಿಸಿ ಕೊಂಡೆ ( ಈ
ರಾಮಾಯಣಕ್ಕೆ ಮುಂಚೆ ಪ್ರವೇಶ ಪರೀಕ್ಷೆ ಬರೆದು ಪಾಸು ಮಾಡಿದ್ದೆ ).
ಹಿನ್ನಲೆ
***********
***********
ನಾನು MSc ಪಾಸು
(ಫಸ್ಟ್ ಕ್ಲಾಸು )ಮಾಡಿದ ತರುವಾಯದಲ್ಲಿ ಆಗಾಗ ಸಿಕ್ಕಾಗಲೆಲ್ಲ ರಾಮಸ್ವಾಮಿ ಮೇಷ್ಟ್ರು
"ಕಮಲಾ ನೀನು ಇನ್ನೂ ಏಕೆ PhD ಮಾಡಿಲ್ಲ ಬೇಗನೆ ಮಾಡು" ಎಂದು ಹೇಳುತ್ತಿದ್ದರು .
ಆಗೆಲ್ಲಾ ನಾನು "ಮೇಷ್ಟ್ರೇ ನೀವು ಗೈಡ್ ಮಾಡುವುದಾದರೆ ನಾನು ಮಾಡುತ್ತೇನೆ"
ಎನ್ನುತ್ತಿದ್ದೆ . ಆದರೆ ಮದುವೆ ಮಕ್ಕಳು ಸಂ-ಸಾರ ಎಂದೆಲ್ಲಾ ಸಿಕ್ಕಿಹಾಕಿಕೊಂಡಮೇಲೆ
(ಗೊತ್ತಿದ್ದೂ ಗೊತ್ತಿದ್ದೂ ಎಲ್ಲರೂ ಮಾಡುವ ತಪ್ಪು /ಸರಿ ?) ಅಧ್ಯಯನಕ್ಕೆ ಪುರುಸೊತ್ತೇ
ಸಿಕ್ಕಿರಲಿಲ್ಲ . ಅದೇನೋ ಗೊತ್ತಿಲ್ಲ ಇದ್ದಕ್ಕಿದ್ದಂತೆ ಅಧ್ಯಯನದ ಬಗ್ಗೆ ತೀವ್ರ
ಆಸಕ್ತಿ ವಹಿಸಿ ನನ್ನ ಫೀಲ್ಡ್ಅನ್ನು ಗುರುತಿಸಿಕೊಂಡು ಅದಕ್ಕೆ ಸ್ಪಂದಿಸಿದ
ವಿಶ್ವವಿದ್ಯಾಲಯವನ್ನು ಹುಡುಕಿ ಪ್ರವೇಶ ಪರೀಕ್ಷೆ ಬರೆದು ಪಾಸುಮಾಡಿ ಓದಲು ತಯಾರಾಗಿ
ನಿಂತುಬಿಟ್ಟೆ . ಆಗಲೇ ನಾನು ಅರ್ಜಿ ಹಿಡಿದು ಮೇಷ್ಟ್ರ ಬಳಿ ಓಡಿದ್ದು . ನನ್ನ ಹುಂಬತನ
ಹುಚ್ಚು ಯಾವುದನ್ನೂ ಪರಿಗಣಿಸದೆ ಈಕೆ ಮಾಡಬಲ್ಲಳು ಎಂಬ ನಂಬುಗೆಯಿಂದ ಒಮ್ಮೆಗೇ ಅರ್ಜಿಗೆ
ಸಹಿ ಹಾಕಿದರಲ್ಲ ಅದು ರಾಮಸ್ವಾಮಿ ಮೇಷ್ಟ್ರ ದೊಡ್ಡತನ .
ಮುನ್ನಲೆ
***********
***********
ಅರ್ಜಿ ಹಾಕಿದರೆ ಮುಗಿಯಿತೇ ? ಇಲ್ಲ ಅದು ಪ್ರಾರಂಭವಷ್ಟೇ .
ಒಂದೆರಡು ಬಾರಿ ನಾನು ಮತ್ತು ರಾಮಸ್ವಾಮಿ ಮೇಷ್ಟ್ರು ಭೇಟಿಯಾಗಿ ವಿಷಯವನ್ನು ಚರ್ಚಿಸತೊಡಗಿದೆವು .
ಕೊನೆಗೆ
ವಸಾಹತುಶಾಹಿ ಸನ್ನಿವೇಶದ ವಿಜ್ಞಾನ ಅದರಲ್ಲೂ ವಿಶೇಷವಾಗಿ ಭೌತಶಾಸ್ತ್ರದ ಬೆಳವಣಿಗೆಯ
ಸನ್ನಿವೇಶವನ್ನು ವಿಶ್ಲೇಷಣೆ ಮಾಡೋಣ ಎಂಬ ತೀರ್ಮಾನಕ್ಕೆ ಬಂದೆವು . ಆಗ ಮೇಷ್ಟ್ರು
ವೃತ್ತಿನಿರತ ವಿಜ್ಞಾನ ಇತಿಹಾಸಕಾರ ಮತ್ತು ತತ್ವಶಾಸ್ತ್ರಜ್ಞರೊಬ್ಬರು ಜೊತೆಗಿದ್ದರೆ
ಒಳ್ಳೆಯದು ಎಂದರು . ನನಗೂ ಸರಿ ಎನ್ನಿಸಿತು . ಆಗ ದುರ್ಬೀನು ಹಾಕಿಕೊಂಡು ಇವರನ್ನು
ಹುಡುಕಲು ಶುರುಮಾಡಿದೆ .
1997 ರ ಒಂದುದಿನ
********************
********************
ಬಸವನಗುಡಿಯ
ಬಿ ಪಿ ವಾಡಿಯ ರಸ್ತೆಯಲ್ಲಿರುವ Indian Institute Of World Culture ನಲ್ಲಿ Great
Experiments In Science ಎಂಬ ವಿಷಯದ ಮೇಲೆ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ
ಹಲವಾರು ಜನ ಉತ್ತಮೋತ್ತಮ ವಿಜ್ಞಾನಿಗಳು ಭಾಷಣ ಮಾಡಿದರು . ಆ ದಿನದ ಒಂದು ಭಾಷಣ
"ಕ್ವಾಂಟಮ್ ಭೌತಶಾಸ್ತ್ರ" ದ ಬೆಳವಣಿಗೆಯ ಬಗೆಗೆ ವಿಶ್ಲೇಷಣಾತ್ಮಕವಾದ ಭಾಷಣವಾಗಿತ್ತು .
ಅದನ್ನು ಕೇಳಿದ ಕೂಡಲೇ ನಾನು ಹುಡುಕುತ್ತಿರುವ ಗುರು ಈ ಭಾಷಣಕರ್ತ ಎಂಬುದು ಸ್ಪಷ್ಟವಾಗಿ
ಹೋಯಿತು . ಕಾರ್ಯಕ್ರಮ ಮುಗಿಯುವವರೆಗೂ ಕಾದಿದ್ದ ನಾನು , ಮುಗಿದ ಕೂಡಲೇ ಅವರ ಬಳಿ
ತೆರಳಿ ನನ್ನ ಪ್ರವರ ಹೇಳಿಕೊಂಡೆ . ನನ್ನ ಸಂಶೋಧನಾ ಅಭಿಯಾನಕ್ಕೆ ತಾವೂ ಸಹ ಮಾರ್ಗದರ್ಶಕರಾಗಬೇಕು ಎಂದು ವಿನಂತಿಸಿದೆ . ಹೆಚ್ಚಿನದೇನನ್ನೂ ಕೇಳದೆ ನಿಂತನೆಲದಲ್ಲೇ
ಆಯಿತು ಮಾರ್ಗದರ್ಶನ ಮಾಡುತ್ತೇನೆ ಎಂದುಬಿಟ್ಟರು ಡಾ ಎಂ ಜಿ ನರಸಿಂಹನ್ . ನನಗೆ ಬೇಕಾದ
ಗುರು ಯಾವ ವಶೀಲಿ ಬಾಜಿ ಇಲ್ಲದೆ ಗುರುತು ಪರಿಚಯವೂ ಇಲ್ಲದೆ ಸಿಕ್ಕಿಬಿಟ್ಟಿದ್ದರು .
"ಆದರೆ"
ಎಂದರು ನರಸಿಂಹನ್ , "ಏನು ಮೇಷ್ಟ್ರೇ", ಎಂದೆ "ನಾನು Junior college ನಲ್ಲಿ ಪಾಠ
ಮಾಡುತ್ತಿರುವ ಮೇಷ್ಟ್ರು ನೀವು Degree College ನಲ್ಲಿ ಪಾಠ ಮಾಡುತ್ತಿದ್ದೀರಿ
ಪರವಾಗಿಲ್ಲವೋ" ಎಂದರು . "ನಿಮ್ಮಲ್ಲಿ ವಿದ್ವತ್ತು ಇದೆ ನನಗೆ ಕಲಿಯುವ ಆಸಕ್ತಿಯಿದೆ
ಅಲ್ಲಿಗೆ ಮುಗಿಯಿತು" ಎಂದೆ . "ವಿಶ್ವವಿದ್ಯಾಲಯದವರು ಒಪ್ಪುತ್ತಾರೊ ?" ಎಂದರು "ಅದು
ನನಗಿರಲಿ" ಎಂದು ಹೇಳಿ ಮನೆಗೆ ಬಂದೆ . ಇದಾದ ಕೆಲವೇ ದಿನಗಳಲ್ಲಿ ನರಸಿಂಹನ್ National
Institute Of Advance Studies ಇಲ್ಲಿಗೆ ನಿಯೋಜನೆಗೊಂಡರು . ಅಲ್ಲಿಂದಾಚೆಗೆ ಎಲ್ಲ
ಸಂಕಷ್ಟಗಳೂ ಪರಿಹಾರವಾದವು .
1997 ರಿಂದ PhD ಪದವಿಯವರೆಗೆ
************************
ಇಬ್ಬರೂ
ಗುರುಗಳು ಸಿಕ್ಕಿದ ಮೇಲೆ ಸಾಕಷ್ಟು ವಿಸ್ತೃತವಾದ ಚರ್ಚೆ ಆದನಂತರ "ಪ್ರಬಂದದ ಸಾರಾಂಶ"
ವನ್ನು ವಿಶ್ವವಿದ್ಯಾಲಯಕ್ಕೆ ಕಳುಹಿಸಿದ್ದಾಯಿತು . ವಿ ವಿ ಯವರು ನಡೆಸುವ ಸಂಶೋಧನಾ
ಕಮ್ಮಟಗಳಲ್ಲಿ ಭಾಗವಹಿಸಿ ಸಣ್ಣ ಪುಟ್ಟ ಪ್ರಭಂದಗಳನ್ನು ಮಂಡಿಸಿ ಆಸ್ತಿತ್ವ
ಸ್ಥಾಪಿಸಿದ್ದಾಯಿತು . ನಿದ್ದೆ ಎಂಬುದು ಕನಸಿನ ಗಂಟಾಗಿ ಹೋಗಿತ್ತು . ಒಂದೆಡೆ ಮನೆ
ಕೆಲಸ ,ಮತ್ತೊಂದೆಡೆ ಕಾಲೇಜು ಕೆಲಸ ಇದರ ಜೊತೆಗೆ U K G ಓದುತ್ತಿದ್ದ ನನ್ನ ಪುಟ್ಟ
ಕೂಸು ನಿರಂಜನ ಇವೆಲ್ಲದರ ಜೊತೆಗೆ PhD ಅಧ್ಯಯನ ಸಾಗಿತ್ತು . ಹೀಗಿರಲಾಗಿ ಒಂದು ದಿನ
ನಾನು NIAS ಗೆ ತೆರಳಿದ್ದಾಗ ನನ್ನ ಪರಿಪಾಟಲು ಕಂಡು ಮೇಷ್ಟ್ರಿಗೆ ಏನನ್ನಿಸಿತೋ ಏನೋ
"ಕಮಲಾ ಇನ್ನು ಮುಂದೆ ನೀನಿರುವಲ್ಲಿಗೆ ಬಂದು ನಾನು ಪಾಠ ಹೇಳುತ್ತೇನೆ , ನೀನು
ಇಷ್ಟೊಂದು ಕಷ್ಟ ಪಡುವುದು ಬೇಡ " ಎಂದು ಬಿಟ್ಟರು . ಒಂದು ಕ್ಷಣ ನನಗೆ ಮಾತು
ಹೊರಡದಾಯಿತಾದರೂ , " ಮೇಷ್ಟ್ರೇ ನಿಮಗೇಕೆ ಕಷ್ಟ ಇದು ನನ್ನ ಕೆಲಸ ನನಗೆ ಯಾವ ತೊಂದರೆಯೂ
ಇಲ್ಲ ನಾನೇ ಬಂದು ಪಾಠ ಹೇಳಿಸಿಕೊಳ್ಳುತ್ತೇನೆ " ಎಂದೆ .
ಅದಕ್ಕೆ
ಮೇಷ್ಟ್ರು " ಅದು ಹಾಗಲ್ಲ ಕಮಲಾ ಅವರೇ , PhD ಅಧ್ಯಯನ ಎಂಬುದು ಒಂದು ಸೃಜನಶೀಲ
ಚಟುವಟಿಕೆ , ಇದಕ್ಕೆ ಮನಸ್ಸು ಆರಾಮವಾಗಿರಬೇಕು , ಓಡಾಡಿಕೊಂಡು ಹೆಚ್ಚು ಸಮಯವನ್ನು
ವ್ಯಯಮಾಡಿ ಮಾಡತಕ್ಕದ್ದಲ್ಲ, ನಿಮ್ಮ ಸಮಯವನ್ನು ಅಧ್ಯಯನಕ್ಕೆ ವಿನಿಯೋಗಿಸಿ" ಎಂದು
ಖಂಡಿತವಾಗಿ ಹೇಳಿಬಿಟ್ಟರು . ಇದಾದ ನಂತರ ಮುಂದೆ ಪದವಿ ಪಡೆಯುವ ವರೆಗೂ, ಅನಂತರವೂ,
ಇಬ್ಬರೂ ಗುರುಗಳು ನಾನು ಓದುವಂತೆ ನೋಡಿಕೊಂಡರು .
ಪದವಿ ಪ್ರಧಾನ ಸಮಾರಂಭದ ದಿನ (2000,ಡಿಸೆಂಬರ್ ),ಪಲ್ಲವಿ ಏಳು ತಿಂಗಳ ಮಗು .
ಪದವಿ ಪ್ರಧಾನ ಸಮಾರಂಭದ ದಿನ (2000,ಡಿಸೆಂಬರ್ ),ಪಲ್ಲವಿ ಏಳು ತಿಂಗಳ ಮಗು .
PhD ಎಂಬುದು
ಕೆಲವರಿಗೆ ದುಃಸ್ವಪ್ನ ದಂತೆ ಕಾಡಿ ಅಧ್ಯಯನ ಮುಗಿದ ಮೇಲೆ ಇನ್ನೆಂದಿಗೂ ಆ ದಿಕ್ಕಿನಲ್ಲಿ
ತಲೆಹಾಕಿ ಮಲಗುವುದಿಲ್ಲ ಎಂಬ ಶಪಥವನ್ನು ಮಾಡಿಸಿಬಿಡುತ್ತದೆ . ಆದರೆ ಈ ಇಬ್ಬರೂ ಗುರುಗಳು
ಅದಕ್ಕೆ ವಿರುದ್ದವಾಗಿ PhD ಅಧ್ಯಯನ ಮಾಡುವುದು ದೊಡ್ಡದಲ್ಲ , ಅನಂತರ ಅದರ ಪ್ರಯೋಜನ
ಸಮಾಜಕ್ಕೆ ದಕ್ಕಬೇಕು ಎಂಬ ಉದಾತ್ತ ಆಶಯದೊಂದಿಗೆ ಶಿಷ್ಯರ ಮನಸ್ಸನ್ನು ಕಾದು ಅವರನ್ನು
ಸಮಾಜಮುಖಿಯಾಗಿ ಆಲೋಚನೆ ಮಾಡುವಂತೆ ಮಾಡಿದ್ದಾರೆ . ಇದಕ್ಕಾಗಿ ಇವರಿಬ್ಬರೂ
ಅಭಿನಂದನಾರ್ಹರು .
ನಿಮ್ಮಂತಹ ಗುರುಗಳ ಸಂತತಿ ಹೆಚ್ಚಾಗಲಿ ಎಂದು ಆಶಿಸುತ್ತಾ , ಶಿಕ್ಷಕರ ದಿನಾಚರಣೆಯ ಸಂಧರ್ಭದಲ್ಲಿ ನಿಮಗೆ ಮತ್ತೊಮ್ಮೆ ನಮಸ್ಕರಿಸುತ್ತಾ ಈ ಲೇಖನ ಮುಗಿಸಲು ಇಚ್ಚಿಸುತ್ತೇನೆ .
ನಿಮ್ಮಂತಹ ಗುರುಗಳ ಸಂತತಿ ಹೆಚ್ಚಾಗಲಿ ಎಂದು ಆಶಿಸುತ್ತಾ , ಶಿಕ್ಷಕರ ದಿನಾಚರಣೆಯ ಸಂಧರ್ಭದಲ್ಲಿ ನಿಮಗೆ ಮತ್ತೊಮ್ಮೆ ನಮಸ್ಕರಿಸುತ್ತಾ ಈ ಲೇಖನ ಮುಗಿಸಲು ಇಚ್ಚಿಸುತ್ತೇನೆ .
Comments to this article can be sent at my email:yckamala@gmail.com
Thursday, 27 June 2013
ಮುಂಬೈ ಎಂಬ ಬೆಡಗಿಯೂ , ಸಾಂಪ್ರದಾಯಿಕ ಸುಂದರಿಯೂ ಹಾಗೂ (ಮಹಾಕೊಳಕಿಯೂ ).
ನಾನು
ಮುಂಬೈಗೆ ಮೊತ್ತಮೊದಲ ಭೇಟಿಕೊಟ್ಟದ್ದು 1995 ರಲ್ಲಿ . ಸೌದಿಅರೆಬಿಯ ಹೋಗುವ ದಾರಿಯಲ್ಲಿ
ವಿಮಾನ ನಿಲ್ದಾಣದ ನೆಲವನ್ನಷ್ಟೇ ಸ್ಪರ್ಶಿಸಿ ಮತ್ತೆ ಮೇಲೆ ಹಾರಿದ್ದೆ . ಅನಂತರದ
ವರ್ಷಗಳಲ್ಲಿ ಹಲವಾರು ಬಾರಿ ಈ ಬೆಡಗಿಯ ಬಳಿ ಬಂದಿದ್ದೆನಾದರೂ ಕೆಲವು ಸನ್ನಿವೇಶಗಳು
ಮಾತ್ರ ಸ್ವಾರಸ್ಯಕರ ವಾಗಿವೆ . ಅದರಲ್ಲಿ TIFR ನವರು YISC Young Indian Scientist
Colloquium ಆಹ್ವಾನಿಸಿದಾಗ ಬಂದದ್ದೂ ಒಂದು . ಈಗ್ಗೆ ಕೆಲವರ್ಷಗಳ ಹಿಂದೆ YISC ಎಂಬ
ಕಾರ್ಯಕ್ರಮ ನಡೆಸಿ ದೇಶಾದ್ಯಂತ ನೂರುಜನ ಕಾಲೇಜು ಅಧ್ಯಾಪಕರನ್ನು ಇದರಲ್ಲಿ ಭಾಗವಹಿಸಲು
ಆಹ್ವಾನಿಸಿದ್ದರು . ಅದರಲ್ಲಿ ನಾನೂ ಒಬ್ಬಳಾಗಿದ್ದೆ . ನನಗೆ ಪತ್ರಬಂದ ಕೂದಲೆ TIFRಗೆ
ಮೇಲ್ ಮಾಡಿದ ನಾನು ಬೆಂಗಳೂರಿನಿಂದ ಬೇರೆಯಾರನ್ನು ಅಹ್ವಾನಿಸಿದ್ದೀರಿ ? ಎಂದು ಕೇಳಿದಾಗ
ಶೋಭಾ ಮತ್ತು ಶರ್ಮಿಷ್ಠ ಎಂಬ ಹೆಸರನ್ನು ಕಳುಹಿಸಿದರು . ಅರೆರೆ ಈ TIFR ನವರಿಗೆ ನಮ್ಮ
ಹೆಸರನ್ನು ಕೊಟ್ಟವರಾರು? ಅದರಲ್ಲೂ ನಾವು ಮೂವರೂ ಸ್ನೇಹಿತೆಯರೆಂದು ಇವರಿಗೆ
ಹೇಳಿದವರಾರು ? (ಗೊತ್ತಿದ್ದರೆ ಕಳಿಸುತ್ತಿರಲಿಲ್ಲ ಬಿಡಿ ) ಎಂದೆಲ್ಲಾ ಯೊಚಿಸಿದೆವರಾದರೂ
ಅದನ್ನು ಅಲ್ಲಿಗೆ ಬಿಟ್ಟು ಒಂದೇ ರೈಲಿಗೆ ಮತ್ತು ವಾಪಸು ವಿಮಾನಕ್ಕೆ ಟಿಕೆಟ್ ಬುಕ್
ಮಾಡಿದೆವು . ಪ್ರಯಾಣಕ್ಕೆ ಅಗತ್ಯ ವಾದ ತಿಂಡಿ ತೀರ್ಥಗಳನ್ನು ಕಟ್ಟಿಕೊಂಡೆವು (ಹೇಳಿ
ಕೇಳಿ ಮೂವರು ಹೆಂಗಸರು ). ಅನಂತರ ರೈಲನ್ನೇರಿದನಾವು ಅದೆಷ್ಟು ಮಾತನಾಡಿದ್ದೇವೆಂದರೆ
ನಮ್ಮ "ಬಾಯಿ ಬೊಂಬಾಯಿ " ಯಾ ಮಾತು ನಡೆಯುತ್ತಿರುವಂತೆ ಮುಂಬೈ VT ನಿಲ್ದಾಣ ಬಂದೇ
ಬಿಟ್ಟಿತು . ಅಲ್ಲಿನಂದ ನಮಗೆ ಗೊತ್ತು ಮಾಡಿದ್ದ ಮೇಡಂ ಕಾಮ ರಸ್ತೆಯ (ಚರ್ಚ್ ಗೇಟ್
ಪ್ರದೇಶ ) ವಸತಿಯಲ್ಲಿ ಉಳಿದೆವು . ಮಾರನೆಯದಿನ ಕೊಲಾಬದಲ್ಲಿರುವ TIFR ತಲುಪಿ
ಉಪನ್ಯಾಸಗಳನ್ನು ಕೇಳಲು ಶುರುಮಾಡಿದೆವು . ಭಾರತದಲ್ಲಿ ಅತ್ಯುತ್ತಮವಾಗಿ ಸಂಶೂದನೆ
ಮಾಡುತ್ತಿರುವ ಯುವ ವಿಜ್ಞಾನಿಗಳು 5 ದಿನಗಳ ಕಾಲ ಅವ್ಯಾಹತವಾಗಿ ನೀಡಿದ ಉತ್ತಮೋತ್ತಮ
ಉಪನ್ಯಾಸಗಳು ಅವಾಗಿದ್ದವು . ಉಪನ್ಯಾಸದಬಗ್ಗೆ ಹೇಳಿ ನಿಮ್ಮತಲೆ ಕೊರೆಯಲಾರೆ , ಬದಲಿಗೆ
ಮುಂಬೈನ ಬೇರೆ ಅನುಭವಗಳನ್ನು ನಿಮಗೆ ಹೇಳುತ್ತೇನೆ . ಅಲ್ಲಿದ್ದ ಐದೂ ದಿನವೂ ಬೆಳಗ್ಗೆ
5ಗಂಟೆಗೆ ಕಾಲಿಗೆ ಬೂಟು ಕಟ್ಟಿಕೊಂಡು ನಾನು ಶೋಭಾ ಊರು ಸುತ್ತಲು ಪ್ರಾರಂಬಿಸಿದರೆ
(ಶರ್ಮಿಷ್ಠೆಗೆ ಅದರಲ್ಲಿ ಆಸಕ್ತಿಯಿಲ್ಲ ) 7 ಕ್ಕೆ ವಾಪಸು ಬಂದು ಉಪನ್ಯಾಸಕ್ಕೆ
ಹೊರಡುವುದು ದಿನಚರಿಯಾಗಿತ್ತು . ಮುಂಬೈನ ಎಡ ಬಲ ಗಲೆಲ್ಲವನ್ನೂ ಸುತ್ತಿ ಮುಗಿಸಿದೆವು .
ಇದೇನೂ ವಿಶೇಷವಲ್ಲ ಬಿಡಿ ಮುಂಬೈಗೆ ಬಂದವರೆಲ್ಲರೂ ನೋಡುತ್ತಾರೆ . ಆದರೆ ಕೆಲ
ವಿಶೇಷವಿದೆ ಅದನ್ನು ಮಾತ್ರ ಹೇಳುತ್ತೇನೆ .
Sea Link ಮತ್ತು ಬಾಂದ್ರ - ಕುರ್ಲಾ
ಕಾಂಪ್ಲೆಕ್ಸು .
-------------------------- ----------------
ಕೊನೆಯದಿನ TIFR ನಲ್ಲಿ ಮದ್ಯಾನ್ಹಕ್ಕೆ ಕೆಲಸ ಮುಗಿಯಿತು . ನಮ್ಮ ವಿಮಾನ ಮರುದಿನ
ಬೆಳಗ್ಗೆ ಇದ್ದುದರಿಂದ ಪೂರ ಅರ್ಧದಿನ ನಮ್ಮ ಕೈಯ್ಯಲ್ಲಿತ್ತು . ಶೋಭಾ "ಕಮಲಾ ಏನು ಮಾಡೋಣ
ಎಂದರು ?". ಅದಾಗ ತಾನೇ ಕುರ್ಲಾ ಯಿಂದ ಬಾಂದ್ರಾ ಗೆ ಹೋಗುವ ಸಮುದ್ರ ಸೇತುವೆ
ಉದ್ಘಾಟನೆ ಗೊಂಡಿದ್ದು ಬೆಂಗಳೂರಿನ ಪೇಪರ್ ಗಳಲ್ಲಿ ಮತ್ತು ಅಂತರಜಾಲದಲ್ಲಿ ದೊಡ್ಡ
ಸುದ್ದಿಯಾಗಿತ್ತು . ಆದ್ದರಿಂ"ದ "ನಡೆಯಿರಿ ಸಮುದ್ರದ ಸೇತುವೆಮೇಲೆ ಹೋಗೋಣ" ಎಂದೆ .
ಕೊಲಬದ TIFR ಮುಂಬಾಗದಲ್ಲಿ ಟ್ಯಾಕ್ಸಿ ಹತ್ತಿ ಸ್ಟೈಲ್ಆಗಿ "ಬಾಂದ್ರಾಗೆ ಸೇತುವೆಮೇಲೆ
ಹೋಗು" ಎಂದೆವು .ಆತ "ಸೇತುವೆ ಫೀಸು ನಿಮ್ಮದೇ " ಎಂದ . "ಆಯಿತಪ್ಪ ನಡಿ " ಎಂದು
ಮಾತನಾಡುತ್ತಾ ಕುಳಿತೆವು . ಸೇತುವೆಯಮೇಲೆ ಹೋಗುವಾಗ ಮಜಾ ಎನಿಸಿತು . ಬಾಂದ್ರಾ ಬಂದ
ಕೂಡಲೆ ಆತ "ಬಾಂದ್ರದಲ್ಲಿ ಎಲ್ಲಿಗೆ ಹೋಗಬೇಕು" ಎಂದ . "ಒಂದು ಕಾಂಪ್ಲೆಕ್ಸ್ ಗೆ ಬಿಡು
ಎಂದೆವು "(ಎಲ್ಲಿಗೆ ಹೋಗಬೇಕು ಎಂದು ಯೋಚಿಸಿದ್ದರೆ ತಾನೇ?). ಆತ ಸೀದಾ ತಂದು "ಬಾಂದ್ರಾ
- ಕುರ್ಲಾ ಕಾಂಪ್ಲೆಕ್ಸ್ " ಬಳಿ ನಿಲ್ಲಿಸಿ "ಯೇ ಮುಂಬೈ ಕೆ ಸಬ್ ಸೆ ಬಡಾ ಕಾಂಪ್ಲೆಕ್ಸ್
ಹೈ . ಇಸ್ ಕಾ ನಮ್ ಹೈ ಬಾಂದ್ರಾ -ಕುರ್ಲಾ ಕಾಂಪ್ಲೆಕ್ಸ್ ಹೈ " ಎಂದು ಹೇಳಿ ದುಡ್ಡು
ಪಡೆದು ಹೋದ . ಇತ್ತ ಶೋಭಾ "ಕಮಲಾ ಇದೇನಿದು ಕಾಂಕ್ರೀಟ್ ಕಾಡು , ಎನೂ ಅಂಗಡಿ
ಮುಂಗಟ್ಟು ಕಾಣುತ್ತಿಲ್ಲ ಎಂದರು". ನಾನು ಕತ್ತೆತ್ತಿ ನೋಡಿದೆ National Stock
Exchange(NSE) ಬೋರ್ಡ್ ದೊಡ್ಡ ಕಟದದ ಮೇಲೆ ಕಾಣಿಸಿತು . ಇತರೆ ಬ್ಯಾಂಕು ಆಫೀಸು ಗಳ
ಬೋರ್ಡು ಕಂಡವು . ಆಗ ಶೋಭಾಗೆ ಹೇಳಿದೆ " ಶೋಭಕ್ಕ ನೀನು ಬ್ಯಾಂಕ್ ಆಫಿಸರನ
ಹೆಂಡತಿಯಲ್ಲವೋ ಅದು ಡ್ರೈವರನಿಗೆ ಕನಸು ಬಿದ್ದಿರಬೇಕು ,ಆದ್ದರಿಂದಲೇ ಈ ಲಕ್ಷ್ಮೀ ಪೀಠದ
ಮುಂದೆ ತಂದು ನಿಲ್ಲಿಸಿದ್ದಾನೆ , ಬಾ ಈ ಕಾಂಪ್ಲೆಕ್ಸ್ ನಲ್ಲಿ ಏನಿದೆ ನೋಡಿ ಬರೋಣ "
ಎಂದೇ . ಆದರೆ ಅಂದು ಕಟ್ಟಡದಲ್ಲಿ ಬಾಂಬ್ ಇಟ್ಟಿದ್ದಾರೆ ಎಂಬ ಹುಸಿ ಕರೆ ಬಂದಿತ್ತಂತೆ
ಹಾಗಾಗಿ ನಾವು ಒಳ ಹೋಗುವ ಬದಲು ಅಲ್ಲಿದ್ದವರನ್ನೇ ಹೊರ ಕಳುಹಿಸುತ್ತಿದ್ದರು . ಸೇತುವೆ
ಮೇಲೆ ಬಂದದ್ದಷ್ಟೆ ಲಾಭ ಎಂದು ಕೊಂಡು ವಾಪಾಸು ಹೊರಟೆವು .
ಮೊತ್ತಮೊದಲ ಲೋಕಲ್ ಟ್ರೈನ್
ಪ್ರಯಾಣ
-------------------------- -----------
ಮುಂಬೈ ಲೋಕಲ್ ಟ್ರೈನ್ ಬಗ್ಗೆ ಸಾಕಷ್ಟು ಕಥೆ ಕೇಳಿದ್ದೆವಾದರೂ ಅನುಭವ ಇರಲಿಲ್ಲ .
ಆದ್ದರಿಂದ " ಶೋಭಾ ನಮಗೆ ಊರು
ಕೇರಿ ಸರಿಯಾಗಿ ಗೊತ್ತಿಲ್ಲ , ಆದ್ದರಿಂದ ಸುಮ್ಮನೆ ಬಾಂದ್ರಾದಿಂದ ರೈಲು ಹತ್ತಿ ಚರ್ಚ್ ಗೇಟ್ ಗೆ ಹೋಗೋಣ " ಎಂದೆ . ಶೋಭಾ ಸುಮ್ಮನೆ ತಲೆ ಆಡಿಸಿದರು (ಬೇರೆನು ಮಾಡಲು ಸಾಧ್ಯ ಹೇಳಿ ?). ಬಾಂದ್ರ ನಿಲ್ದಾಣಕ್ಕೆ ಬಂದು ಒಬ್ಬರಿಗೆ 6 ರುಪಾಯಿ ಕೊಟ್ಟು ಚರ್ಚ್ ಗೇಟ್ ರೈಲು ಹತ್ತಿದೆವು . ಕೇವಲ ಹದಿನೈದು ನಿಮಿಷದಲ್ಲಿ ಚರ್ಚ್ ಗೇಟ್ ಗೆ ಬಂದು ಇಳಿದದ್ದು ಬೆಂಗಳೂರಿನ ನಮಗೆ ಸೋಜಿಗದಂತೆ ಕಂಡಿತು . (ಏಕೆಂದರೆ ಬೆಂಗಳೂರಿನಲ್ಲಿ ಕೆಲವೊಮ್ಮೆ 4 ಕಿ ಮಿ ದಾರಿ ಒಂದು ಗಂಟೆ ತೆಗೆದು ಕೊಳ್ಳುತ್ತದೆ!!!!!!!!!! ). ನಾವು ರಾತ್ರಿ ರೂಮಿಗೆ ಬಂದು ಫೋನು ಮಾಡಿ ಹೇಳಿದ್ದೆ ಹೇಳಿದ್ದು (ಕಂಡಿರಲಿಲ್ಲ ವಲ್ಲ ಅದಕ್ಕೆ . ಈಗ ಬಿಡಿ ವಿವಿದ ಲೈನುಗಳು ಸ್ಟೇಷನ್ ಗಳು ಅಲ್ಪ ಸ್ವಲ್ಪ ಗೊತ್ತಾಗಿದೆ ). ಅನಂತರ ನಿದ್ದೆ ಮಾಡಿ ಮೇಲೆದ್ದು ದಡಬಡಾಯಿಸಿ ಪ್ಯಾಕ್ ಮಾಡಿಕೊಂಡು ವಿಮಾನವೇರಿ ಬೆಂಗಳೂರಿಗೆ ಬಂದೆವು . ಹೀಗಿತ್ತು ನಮ್ಮ ವಿಶೇಷ ಅನುಭವ . ಇದೆಲ್ಲಾ ಯಾಕೆ ಜ್ಞಾಪಕಕ್ಕೆ ಬಂತು ಎಂದರೆ ಮುಂಬೈ ಎಂಬ ಬೆಡಗಿಯೂ , ಸಾಂಪ್ರದಾಯಿಕ ಸುಂದರಿಯೂ ಮತ್ತು (ಮಹಾಕೊಳಕಿಯ ) ಬಳಿ ಹೋಗುವ ದಿನ ಮತ್ತೆ ಬಂದಿದೆ ಅದಕ್ಕೆ . ದೇಶದ ವಿವಿದ ಪ್ರದೇಶದಿಂದ ಬರುವ ಅಕಾಡೆಮಿಕ್ ಸ್ನೇಹಿತರು , ಬೆಂಗಳೂರಿನ ಸ್ನೇಹಿತರು ಎಲ್ಲರೂ ಸೇರಿ ಕೆಲಸ ಮುಗಿಸಿ ಹರಟೆ ಕೊಚ್ಚುವುದು ಇಲ್ಲಿಯೇ . ಆದ್ದರಿಂದಲೇ ಮುಬೈಗೆ ಬರುವುದೆಂದರೆ ನಮಗೆ ಅಪ್ಯಾಯಮಾನ . ಮುಂಬೈ ಬಗೆಗಿನ ಇನ್ನೂ ಹಲವಾರು ವಿಶೇಷ ಕಥೆಗಳಿವೆ , ಅಮಿತಾಭ್ ಬಚ್ಚನ್ ಮನೆ , ಮುಂಬೈ ಮಳೆ , ಜುಹೂ ಬೀಚು ಇತ್ಯಾದಿ ಇತ್ಯಾದಿ ಮುಂದೊಮ್ಮೆ ಯಾವಾಗಲಾದರೂ ಬರೆಯೋಣ . ಈಗ ಇಷ್ಟೇ ಟೈಪಿಸಲು ಆಗುತ್ತಿರುವುದು . ಟೈಮಾಯಿತ.

Monday, 10 June 2013
ಚಂದ್ರಿಕಾ ಒಂದು ಆಪ್ತ ನೆನಪು
ನಿನ್ನೆ ಸಂಜೆ( 9-6-2013) 6 30 ರಿಂದ 7 ಗಂಟೆ
-----------------------------------------
ನಿನ್ನೆ ಸಂಜೆ (9-6-2013) K R ಆಸ್ಪತ್ರೆಯ I C U ನಲ್ಲಿ ನಿಸ್ತೇಜವಾಗಿದ್ದ
ಚಂದ್ರಿಕಳ ಕೈಗಳನ್ನು ಮುಟ್ಟಿ ನೋಡಿದೆ ತಣ್ಣಗಾಗಿತ್ತು . ಹಣೆಯಮೇಲೆ ಕೈಯಿಟ್ಟೆ
ಬೆಚ್ಚಗಿತ್ತು . B P 51/33, Pulse 104, ಎಂದು ಮೆಶಿನು ತೋರಿಸುತ್ತಿತ್ತು . ಶೋಭಾ
ಕೂಡ ನೋಡಿಬಂದರು . ಶೋಭಾ, ಚಂದ್ರಿಕಾ ನಾಳಿನ "ಬೆಳಕು ಕಾಣುವುದಿಲ್ಲ " ಎಂದೆ .
"ಹಾಗೆಲ್ಲ ಅನ್ನಬೇಡಿ ಕಮಲಾ" ಎಂದರು ಶೋಭಾ . ಮನೆಯವರನ್ನು ಮಾತನಾಡಿಸಿ ಹೊರಬಂದೆವು .
ಅದೂ ಇದೂ ಮಾತನಾಡಿದೆವು . ಇಬ್ಬರೂ ನಮ್ಮ ನಮ್ಮ ಸ್ಕೂಟರ್ ಸ್ಟಾರ್ಟ್ ಮಾಡಿಕೊಂಡು
ಹೊರಟೆವು . ಗಾಡಿನಿಲ್ಲಿಸಿದ ನಾನು ಶೋಭಾ ವಿಷಯಗೊತ್ತಾದರೆ ಕೂಡಲೆ ತಿಳಿಸಿ ಎಂದು ಹೇಳಿ
ಮುಂದುವರೆದೆ . ಮನೆಗೆ ಬಂದು ಎಲ್ಲ ಕೆಲಸ ಮುಗಿಸುವ ಹೊತ್ತಿಗೆ ಚಂದ್ರಿಕಾ ಇನ್ನಿಲ್ಲ ಎಂಬ
ಸುದ್ದಿ ಅಲೆಯಲ್ಲಿ ತೇಲಿ ಬಂದೇಬಿಟ್ಟಿತು .
ಮಳವಳ್ಳಿ ಯಿಂದ ಬೆಂಗಳೂರಿಗೆ
----------------------------------------
ಚಂದ್ರಿಕಾ ನ್ಯಾಷನಲ್ ಕಾಲೇಜಿನಲ್ಲಿ BSc ಓದಿದ ನಂತರ ಸೆಂಟ್ರಲ್ ಕಾಲೇಜಿನಲ್ಲಿ MSc
ಭೌತಶಾಸ್ತ್ರ ಪದವಿ ಪಡೆದ ತರುವಾಯದಲ್ಲಿ ಮಂಡ್ಯ ಜಿಲ್ಲೆಯ ಮಳವಳ್ಳಿಯ ಕಾಲೇಜೊಂದರಲ್ಲಿ
ಉಪನ್ಯಾಸಕಿಯ ಕೆಲಸ ಪ್ರಾರಂಭಿಸಿದರು . ತಂದೆ ತಾಯಿ , ತಮ್ಮ ತಂಗಿಯರ ದೊಡ್ಡ ಕುಟುಂಬದ
ಹಿರಿಯ ಮಗಳಾಗಿ ಮನೆಗೆ ಆಸರೆಯಾಗಿ ನಿಂತರು .
ಉತ್ತಮ ಅಧ್ಯಾಪಕಿಯಾಗಿ ಹೆಸರು ಮಾಡಿದ
ಚಂದ್ರಿಕಾ ವಿದ್ಯಾರ್ಥಿ ಮತ್ತು ಅಧ್ಯಾಪಕವರ್ಗ ಇಬ್ಬರಿಗೂ ಸಹಾಯ ವಾಗುವಂತಹ ಕೆಲಸಗಳಲ್ಲಿ
ಅಲ್ಲಿಂದಲೇ ತೊಡಗಿಕೊಂಡರು . 1990 ರ ದಶಕದಲ್ಲಿ ದಾ. ಗುರುರಾಜ ಕರಜಗಿ ಯವರ
ಕಣ್ಣಿಗೆಬಿದ್ದ ಚಂದ್ರಿಕಾ ಅನಂತರ ಬೆಂಗಳೂರಿನ V V S ಕಾಲೇಜಿನಲ್ಲಿ
ಪ್ರತಿಷ್ಟಾಪಿತರಾದರು .
ಬೆಂಗಳೂರಿನಿಂದ ಭಾರತಾದ್ಯಂತ ಚಟುವಟಿಕೆ ವಿಸ್ತರಿಸಿ ಕೊಂಡ ಚಂದ್ರಿಕಾ .
----------------------------------------------------------------------------------
V V S ಕಾಲೇಜಿಗೆ ಬಂದದ್ದು ಚಂದ್ರಿಕಳಿಗೆ ನಾಲ್ಕು ಕೈ ಕಾಲುಗಳು ಹೆಚ್ಚಾಗಿ
ಬಂದಂತಾದುವು . ಅದಕ್ಕೆ ಪೂರಕವಾಗಿ ಆಕೆಯ ಕಾರ್ಯಚಟುವಟಿಕೆಯನ್ನು ಅಂದಿನ
ಪ್ರಾಂಶುಪಾಲರಾಗಿದ್ದ ಕರಜಗಿಯವರೂ ಪ್ರೋತ್ಸಾಹಿಸಿದರು . ಅದರ ಪರಿಣಾಮವಾಗಿ ಬಸವೇಶ್ವರನಗರ
ವಸತಿ ಪ್ರದೇಶದ ಒಂದು ಎಕರೆ ಜಾಗದಲ್ಲಿರುವ ಸಣ್ಣದಾದ V V S ಕಾಲೇಜಿನಲ್ಲಿ ರಾಜ್ಯ
ಮತ್ತು ರಾಷ್ಟ್ರಮಟ್ಟದ ಕಾರ್ಯಕ್ರಮಗಳು ಆಯೊಜನೆಗೊಳ್ಳ ತೊಡಗಿದವು . ಆ ಮೂಲಕ
ಅಧ್ಯಾಪಕರುಗಳು ಒಂದೆಡೆ ಕಲೆತು ಚರ್ಚಿಸಲು ವೇದಿಕೆ ರೂಪುಗೊಳ್ಳ ತೊಡಗಿತು . ತದನಂತರದ
ದಿನಗಳಲ್ಲಿ IAPT ಸಂಘಟನೆಗೆ ಚಳುವಳಿಯ ಮಾದರಿಯಲ್ಲಿ ಸದಸ್ಯತ್ವವನ್ನು ಮಾಡಿಸಿದರು .
IAPT ಯ ರಾಷ್ಟ್ರೀಯ ಅಧಿವೇಶನಗಲ್ಲಿ ಪಾಲ್ಗೊಳ್ಳುವಂತೆ ಅಧ್ಯಾಪಕರನ್ನು
ಹುರಿದುಂಬಿಸುತ್ತಿದ್ದ ಚಂದ್ರಿಕಾ , ಅವರಿಂದ ಪ್ರೀತಿಯಿಂದಲೇ ಸಂಶೋಧನಾ ಪ್ರಭಂಧ
ಮಂಡಿಸುವಂತೆ ಒತ್ತಾಯಿಸುತ್ತಿದ್ದರು .
ಬೆಂಗಳೂರಿನಿಂದ ಹತ್ತರಿಂದ ಹದಿನೈದು
ಪ್ರಭಂದ,ಪೋಸ್ಟರ್ , ಪ್ರಯೋಗಗಳು ಪಾಲ್ಗೊಳ್ಳುವಂತೆ ಮಾಡಿ ರಾಷ್ಟ್ರಮಟ್ಟದಲ್ಲಿ
ಕರ್ನಾಟಕದಿಂದ ಒಳ್ಳೆಯ ಸ್ಫರ್ಧೆಯನ್ನು ಒಡ್ಡುತ್ತಿದ್ದರು .
ಇದರ ಜೊತೆಗೆ
IAPT ವಿಧ್ಯಾರ್ಥಿಗಳಿಗೆ ಆಯೋಜಿಸುವ National Graduate Physics Examination,
Olympiad ಪರೀಕ್ಷೆಗಳನ್ನು ರಾಷ್ಟ್ರಾದ್ಯಂತ ಆಯೋಜಿಸಿ ಹೆಚ್ಚು ವಿಧ್ಯಾರ್ಥಿಗಳು
ಪಾಲ್ಗೊಳ್ಳಲು ಅನೇಕ ಅಧ್ಯಾಪಕರ ಜೊತೆ ಸಂಪರ್ಕದಲ್ಲಿದ್ದು ಸಾಕಷ್ಟು ಕೇಂದ್ರಗಳನ್ನು
ತೆರೆಯುವಂತೆ ನೋಡಿಕೊಳ್ಳುತ್ತಿದ್ದರು . IAPT ಯ ಹಲವು ರಾಷ್ಟ್ರಮಟ್ಟದ ಪರೀಕ್ಷೆಗಳು
ಪ್ರಾಯೋಗಿಕವಾಗಿದ್ದು ಪ್ರಯೋಗಶಾಲೆ ಬೇಕಾಗುತ್ತಿತ್ತು . ಜೊತೆಗೆ ಸಾಕಷ್ಟು ಅಧ್ಯಾಪಕರ
ಉಚಿತ ಸೇವೆಯೂ ಬೇಕಾಗುತ್ತಿತ್ತು . ಇದೆಲ್ಲವನ್ನು ತಮ್ಮ ಕಾಲೇಜಿನಲ್ಲಿ ಮಾಡುತ್ತಿದ್ದ
ಚಂದ್ರಿಕಾ ನಂತರ ಬೆಂಗಳೂರಿನ ಇತರೆ ಅಧ್ಯಾಪಕರನ್ನು ಮತ್ತು ಕಾಲೇಜನ್ನು ಇದಕ್ಕೆ ತಯಾರು
ಮಾಡಿದರು .
ಚಂದ್ರಿಕಾ ಕಾಲೇಜಿನೊಳಗೆ ಮಾದುವಕೆಲಸವಿದಾದರೆ , ಇನ್ನು ಕಾರ್ಯ
ಕಾರಣ ಸಂಭಂಧ ದೇಶ ಸುತ್ತ ಬೇಕಾಗುತ್ತಿತ್ತು . ಆಗೆಲ್ಲಾ ತನ್ನ ಪಾಠ ಪ್ರವಚನಗಳನ್ನು
ಮುಗಿಸಿ ಕಾಲೇಜಿನವರ ಜೊತೆ ಮಾತುಕತೆನಡೆಸಿ ರಜೆಹೊಂದಿಸಿಕೊಂಡು ವಯೋವೃದ್ಧ ತಾಯಿಗೆ
ನೋಡಿಕೊಳ್ಳುವವರ ವ್ಯವಸ್ಥೆ ಮಾಡಿ ಮೀಟಿಂಗು ಮುಗಿಸಿ ಬರುವಷ್ಟರಲ್ಲಿ ಸುಸ್ತಾಗಿ
ಹೋಗಿರುತ್ತಿದ್ದರು . ಆದರೂ ಭೌತಶಾಸ್ತ್ರ ಸಂಭಂದಿಸಿದ ಯಾವುದೇ ಕೆಲಸವಾದರೂ ಉತ್ಸಾಹದಿಂದ
ಪುಟಿದೇಳುತ್ತಿದ್ದರು .
ಹೊಸದಾಗಿ ಕಾರ್ಯಕ್ರಮ ಆಯೋಜಿಸುವ ಯಾರಿಗೇ ಆದರೂ
ಮುಂದೆ ನಿಂತು ಎಲ್ಲಾ ರೀತಿಯ ಸಹಾಯ ಒದಗಿಸಿ ಕೊಡುತ್ತಿದ್ದರು . ಒಟ್ಟಾರೆಯಾಗಿ ಇಂದು
ಬೆಳಗ್ಗೆ ನಮ್ಮ ರಾಘವೇಂದ್ರ (IISc)
ಹೇಳಿದಂತೆ She was resource person for resource persons.
ನಾನು ಚಂದ್ರಿಕಾ ಮತ್ತು ದೆಹಲಿ
------------------------------------
ನಾನು ಮತ್ತು ಚಂದ್ರಿಕಾ 2009 ರಲ್ಲಿ ಕಾನ್ಪುರಕ್ಕೆ ಒಟ್ಟಿಗೇ ಹೋಗಿದ್ದೆವು(
conference ಮತ್ತು ಕೆಲಸದ ಸಂಭಂದ) . ಒಂದುವಾರ ಇಬ್ಬರೂ ಒಂದೇ ರೂಮಿನಲ್ಲಿದ್ದು
ಸುತ್ತಾಡಿದ್ದು ಜೀವಂತ ಅನುಭವ . ಕಾನ್ಪುರದಿಂದ ದೆಹಲಿಗೆ ಬಂದ ನಾವಿಬ್ಬರೂ ಕರ್ನಾಟಕ
ಭವನದಲ್ಲಿ ಉಳಿದುಕೊಂಡಿದ್ದೆವು . 2012 ರಲ್ಲಿ ನಡೆಯಲಿದ್ದ ಏಶಿಯನ್ ಫಿಸಿಕ್ಸ್
ಒಲಿಂಪಿಯಾಡ್ ನಡೆಸುವ ಸಂಭಂಧದಲ್ಲಿ DST ಯಲ್ಲಿ ಹಣಕಾಸು ಸಂಭಂಧದ ಫೈಲು ಮೂವ್
ಮಾಡಿಸಬೇಕಿತ್ತು . ಕಪಿಲ್ ಸಿಬಲ್ ಅವರ ಕಚೇರಿಗೆ ತೆರಳಿದವು . ಅದಕ್ಕೂ ಮುನ್ನ
ದೆಹಲಿಯಲ್ಲಿದ್ದ ನನ್ನ ದೊಡ್ಡಣ್ಣ ನಾನೇನಾದರೂ ಸಹಾಯ ಮಾಡಲೇ ಎಂದು ಚಂದ್ರಿಕಳನ್ನು
ಕೇಳಿದಾಗ ಬೇಡ ಸರ್ ನಾನೆಲ್ಲಾ ವ್ಯವಸ್ಥೆ ಮಾದಿದ್ದೇನೆನ್ದರು . ಕೇಂದ್ರ ಸರ್ಕಾರಿ ಕಚೇರಿ
ಯೊಳಗೆ ಸಲೀಸಾಗಿ ಓಡಾಡ ಬಲ್ಲವರನ್ನು ಮೊದಲೇ ಗೊತ್ತುಮಾಡಿದ್ದ ಚಂದ್ರಿಕಾ ಅರ್ಧ
ದಿನದೊಳಗೆ ಎಲ್ಲ ಕೆಲಸ ಮುಗಿಸಿ ಕೊಂಡರು . ಆಗಲೇ ನನಗೆ ಚಂದ್ರಿಕಳ ಬುದ್ದಿವಂತಿಕೆ ಮತ್ತು
ಪವರ್ ಅರ್ಥವಾಗಿದ್ದು . "ಕಮಲಾ ದೂರದ ಊರಿನಿಂದ ಬಂದಿರುತ್ತೇವೆ ಕೆಲಸ ಮುಗಿಸಿಕೊಂಡು
ಹೋಗಬೇಕಾಗುತ್ತದೆ ಅದಕ್ಕಾಗಿ ಗೊತ್ತಾದವರನ್ನು ಹಣಕೊಟ್ಟದರೂ ಹೊಂದಿಸಿಕೊಳ್ಳಬೇಕು "ಎಂದು
ಹೇಳಿದ್ದು ಇನ್ನು ನನ್ನ ಕಿವಿಯಲ್ಲಿದೆ .
ಚಂದ್ರಿಕಾ ಈ ವರ್ಷ ಆಗಸ್ಟ್
ತಿಂಗಳಿನಲ್ಲಿ ನಿವೃತ್ತಿ ಹೊಂದಲಿದ್ದರು . ನಿವೃತ್ತಿಯನಂತರ ಪ್ರವೃತ್ತಿಯನ್ನೇ ಪೂರ್ಣ
ವೃತ್ತಿಯನ್ನಾಗಿಸಿಕೊಳ್ಳುವ ತಯಾರಿಯಲ್ಲಿದ್ದ ಚಂದ್ರಿಕಾ ಅಕಾಲ ಮರಣವನ್ನಪ್ಪಿದ್ದು ಇದು
ಯಾವ ನ್ಯಾಯ ಎಂದು ಕೇಳುವಂತಾಗಿದೆ . ಆದರೆ ಯಾರನ್ನು ಕೇಳೋಣ ?
ಚಂದ್ರಿಕಾ ಮನಸ್ಸು
ಮಾಡಿದ್ದರೆ ತಿಂಗಳಿಗೆ ಲಕ್ಷಾಂತರ ರೂಪಯಿಯನ್ನು ಪಾಠ ಮಾಡಿ ಸಂಪಾದಿಸ ಬಹುದಾಗಿತ್ತು .
ಅದಕ್ಕೆ ಅವರಿಗೆ ಹಲವು corporate tuition center ಗಳಿಂದ ಆಹ್ವಾನವು ಇತ್ತು .
ಚಂದ್ರಿಕಾ ಕಾಫಿ ಕುಡಿಯಲಿಲ್ಲ .
---------------------------------
ಈಗ್ಗೆ ಹತ್ತು ದಿನಗಳ ಹಿಂದೆ ರಾತ್ರಿ ಶೋಭಾ, ಚಂದ್ರಿಕಾಳ ಮನೆಗೆ ತೆರಳಿ,
ಚಂದ್ರಿಕಾರನ್ನು ಕರೆತಂದು ಆಸ್ಪತ್ರೆಗೆ ಸೇರಿಸಿ, B positive ರಕ್ತ ಬೇಕೆಂದು ನನಗೆ
ಬೆಳಗ್ಗೆ ಫೋನು ಮಾಡಿದರು . ಬೆಳಗ್ಗೆ 7 ಗಂಟೆ ಹೊತ್ತಿಗೆ ನನ್ನ ಮಗನನ್ನು ಕರೆದುಕೊಂಡು
ಆಸ್ಪತ್ರೆಯಲ್ಲಿದ್ದೆ . ಅಷ್ಟು ಹೊತ್ತಿಗೆ ಸ್ವಲ್ಪ ಚೇತರಿಸಿ ಕೊಂಡಿದ್ದರು . ಈಗಾಗಲೇ
ರಕ್ತ ಕೊಟ್ಟಿದ್ದಾರೆ ಬೇಕಾದ ತಕ್ಷಣ ತಿಳಿಸುತ್ತೇನೆ ಎಂದರು . ಸರಿ ಎಂದೆ . ಒಂದು ಗಂಟೆ
ಅವರ ಬಳಿ ಕುಳಿತೆ . ಉತ್ಸಾಹ ತುಂಬುವ ಮಾತನಾಡಿದೆ . ಆಕೆ ನನಗೆ "ಕಮಲಾ ಓಡಾಡಿಕೊಂಡಿರಿ
ಇದರಿಂದ ಸಂಪರ್ಕ ಇರುತ್ತದೆ ಕೆಲಸ ಕಾರ್ಯಗಳಿಗೆ ಸಂಪರ್ಕ ಬೇಕು " ಎಂದು ನನಗೇ ಉತ್ಸಾಹ
ತುಂಬುವ ಮಾತನ್ನು ಹೇಳಿದರು . "ಅದಿರಲಿ ನೀವು ಮೊದಲು ಹುಷಾರಾಗಿ , ಇನ್ನುಮುಂದೆ ದಿನವೂ
ಬೆಳಗ್ಗೆ ನಾನು ಕಾಫಿ ಕಳಿಸುತ್ತೇನೆ . ಹೋಟೆಲಿನ ಕಾಫಿ ಕುಡಿಯಬೇಡಿ . ನಿಮ್ಮ ಮನೆಯಿಂದ
ಬರುವವರು ಒಟ್ಟಿಗೇ ಉಪಹಾರ ತರಲಿ ಎಂದೆ ". "ಆಗಲಿ, ನನ್ನ ತಮ್ಮ ಜೊತೆಯಲ್ಲಿರುತ್ತಾನೆ
ಅವನು ಹಾಲು ಕುಡಿಯುತ್ತಾನೆ ಎಂದರು "." ಆಯಿತು ಅದನ್ನೂ ಕಳಿಸುತ್ತೇನೆ" ಎಂದು ಹೇಳಿದೆ ,
ನನ್ನ ಮಗನಿಗೆ ಮಗನೆ ದಿನವೂ ಬೆಳಗ್ಗೆ ಬೇಗ ಎದ್ದು ಆಸ್ಪತ್ರೆ ಕಾಫಿ ಸಪ್ಲೈ ಮಾಡು ಎಂದೆ .
ಆತನೂ ಒಪ್ಪಿದ . ಆದರೆ ಅಂದು ಮಧ್ಯಾನ್ಹ ಸಂಕೀರ್ಣತೆಗೊಳಗಾದ ಆಕೆಯ ಆರೋಗ್ಯದಿಂದಾಗಿ I
C U ಸೇರಿದರು . ನಂತರದ್ದೆಲ್ಲ ಬರೀ ಔಷಧಿ . ನಾನು ಕಾಫಿ ಕಳಿಸುವ ಪ್ರಮೇಯವೇ
ಬರಲಿಲ್ಲ. . ಚಂದ್ರಿಕಾ ಕಾಫಿ ಕುಡಿಯಲಿಲ್ಲ .
ವಿಧಿಯೋ ವಿಪರ್ಯಾಸವೋ ?
----------------------------------
ಒಂದು ವರ್ಷದಿಂದ ಆಸ್ಪತ್ರೆಗೆ ತೋರಿಸುತ್ತಲೇ ಇದ್ದ ಚಂದ್ರಿಕಾಳಿಗೆ ಏನಾಗಿತ್ತು ಎಂಬುದು
ನಿಖರವಾಗಿ ಗೊತ್ತಾಗಲೇ ಇಲ್ಲ . ಆಸ್ಪತ್ರೆಯ ಫೈಲು ಮಾತ್ರ ದಪ್ಪಗಾಗಿತ್ತು . ಎಲ್ಲವೂ
ಸರಿ ಎಂದು ಬರುತ್ತಿತ್ತು .
ಕೊನೆಗಾದದ್ದು ಮಾತ್ರ ಮಲ್ಟಿಪಲ್ ಆರ್ಗನ್ ಫೇಲ್ಯೂರ್ .
ಚಂದ್ರಿಕಳನ್ನು ಮೊದಲದಿನ ಆಸ್ಪತ್ರೆಯಲ್ಲಿ ಮಾತನಾಡಿಸಿದ್ದು ನಾನು ಮತ್ತು ಶೋಭಾ , ಕೊನೆಯ ದಿನ ಕಳಿಸಿಬಂದದ್ದೂ ನಾವಿಬ್ಬರೇ . ಇದು ಇದೆಂಥಹ ವಿಪರ್ಯಾಸ?
ಚಂದ್ರಿಕಾಳ ಸಾವು ನಮ್ಮೆಲ್ಲರಿಗೂ ತುಂಬಲಾರದ ನಷ್ಟ ನಿಜ . ಆದರೆ ತೊಂಭತ್ತರ ವಯೋವೃದ್ಧ
ತಾಯಿ ಈ ಹೊತ್ತಲ್ಲಿ ಭಾವನಾತ್ಮಕವಾಗಿ ಅನಾಥಳಾದದ್ದು ಯಾವ ತಂದೆ ತಾಯಿಗೂ ಬರಬಾರದ ಕಷ್ಟ .
ಅದನ್ನು ಭರಿಸುವ ಶಕ್ತಿಯನ್ನು ದೇವರು ಅವರ ಕುಟುಂಬಕ್ಕೆ ದೇವರು ನೀಡಲಿ .
ಇಂದು ಬೇರಾವ ಕೆಲಸವೂ ಮಾಡಲಾಗದ ನನಗೆ , ಚಂದ್ರಿಕಳ ಬಗ್ಗೆ ತೋಚಿದಷ್ಟು ಬರೆದಿದ್ದೇನೆ .
ಇದೊಂದು ಆಪ್ತಬರಹವಷ್ಟೇ . ಚಂದ್ರಿಕಾ ಇದಕ್ಕೂ ಮೀರಿದವರು ಎಂಬುದು ನಮ್ಮೆಲ್ಲರ ಅನಿಸಿಕೆ .
ಕಮಲಾ .
Saturday, 8 June 2013
ಡಾ . ಎಚ್ . ನರಸಿಂಹಯ್ಯ - 93
1997- 2004
-----------------
ನಾನು ನ್ಯಾಷನಲ್ ಕಾಲೇಜಿಗೆ ಕೆಲಸಕ್ಕೆ ಸೇರಿದ್ದು 1997ರಲ್ಲಿ . ಅಲ್ಲಿಯವರೆಗೂ ನನಗೂ H N ಗೂ ಹೇಳುವಂತಾ ಸಂಪರ್ಕವೇನೂ ಇರಲಿಲ್ಲ . ಆದರೆ ಅದೇನೋ ಗೊತ್ತಿಲ್ಲ ಕೆಲಸಕ್ಕೆ ಸೇರಿದಾಕ್ಷಣದಿಂದ ಅವರಿಗೂ ನನಗೂ ಉಂಟಾದ ಸ್ನೇಹ ಮಾತ್ರ ಐತಿಹಾಸಿಕ ವಾದದ್ದು (ಕಾಲೇಜಿನ ಮಟ್ಟಿಗೆ).
ನನ್ನ ಅವರ ಆಲೋಚನಾ ಕ್ರಮಗಳು , ಕೆಲಸ ಮಾಡುವ ವಿಧಾನ ಇಬ್ಬರಿಗೂ ಮೆಚ್ಚುಗೆಯಾಗಿ ದ್ದು ಇದಕ್ಕೆ ಕಾರಣವಿರಬಹುದು . ಮುಂದೆ ಅನೇಕ ಕೆಲಸಗಲ್ಲಿ ಅವರೊಂದಿಗೆ ಕೈ ಜೋಡಿಸಿದ ನನಗೆ ಅವರ ಒಡನಾಟ ಒಂದು ಅಧ್ಬುತ ಜೀವನ ಪಾಠ .
ಆಸ್ಪತ್ರೆಯಲ್ಲಿ ಊಟಮಾಡಿಸಿ ಬಾಯಿತೊಳೆದು ಬರುತ್ತಿದ್ದದ್ದು ಸೇವೆಮಾಡಲು ಒಂದು ನನಗೆ ಸಿಕ್ಕಿದ್ದ ಒಂದು ಅವಕಾಶ .
2004 ರ (ಸೆಪ್ಟೆಂಬರ್ -ಅಕ್ಟೋಬರ್?) ಒಂದುಸಂಜೆ
------------------------------ -----------------------------
ಮೇಲೆ ತಿಳಿಸಿದ ಸಮಯದಲ್ಲಿ ನಾನು ನನ್ನ ಅಣ್ಣನ ಕುಟುಂಬದೊಂದಿಗೆ ಗೋವಾ ಪ್ರವಾಸದಲ್ಲಿದ್ದ ಸಮಯ ವದು . ಯಾವುದೇ ಊರಿನಲ್ಲಿದ್ದರೂ ರಾತ್ರಿ ಒಮ್ಮೆ H N ಗೆ ಫೋನು ಮಾಡಿ ಆರೋಗ್ಯ ವಿಚಾರಿಸುವುದು ನನ್ನ ನಿತ್ಯದ ವಾಡಿಕೆಯಾಗಿತ್ತು . ಅದರಂತೆ ಗೋವಾ ದಿಂದಲೇ ಫೋನು ಮಾಡಿದೆ . ಆಕ್ಷಣಕ್ಕೆ ಫೋನು ಎತ್ತಿದ H N ಕೂಡಲೇ " ಕಮಲಾ ಇವತ್ತು ಮೀಟಿಂಗ್ನಲ್ಲಿ(Society A G M ) ನಾನು ಬಿಟ್ಟು ಬಿಡುತ್ತೇನೆಂದು ಹೇಳಿಬಿಟ್ಟೆ ". ಎಂದರು . " ಆಯಿತು ಅದರಬಗ್ಗೆ ಆಮೇಲೆ ಮಾತಾಡೋಣ ಈಗ ನಿಮ್ಮ ಆರೋಗ್ಯ ಹೇಗಿದೆ ಎಂದೇ?"
"ಪರವಾಗಿಲ್ಲ". ಎಂದರು .
ಬೆಂಗಳೂರಿಗೆ ಬಂಡ ಕೂಡಲೇ ಅವರ ಕೊಠಡಿ ಗೆ ತೆರಳಿದಾಗ ಮತ್ತದೇ ಅಧಿಕಾರ ತ್ಯಜಿಸುವ ಮಾತು . ಆಗ ನಾನು "ಒಳ್ಳೆಯ ಕೆಲಸ ಮಾಡಿದಿರಿ ಸ್ವಾಮೀ , ಒಂದೆರಡು ವರ್ಷ ಮೊದಲೇ ಬಿದಬಾರದಿತ್ತೆ ?" ಎಂದಾಗ , ಈ ಉತ್ತರ ನಿರೀಕ್ಷಿಸಿರದಿದ್ದ H N ಆ ಕೂಡಲೇ " ಅಮ್ಮ ನಾನು ಅಧಿಕಾರದಲ್ಲಿದ್ದರೆ ನಿನಗೆನಮ್ಮ ಹೊಟ್ಟೆಕಿಚ್ಚು ?" ಎನ್ನ ಬೇಕೇ?. " ಹೌದು ಸರ್ , ನೀವು ಇನ್ನೊಂದೆರಡು ವರ್ಷ ಮೊದಲೇ ಬಿಟ್ಟಿದ್ದಾರೆ ಇನ್ನೆರಡು ವರ್ಷ ಹೆಚ್ಚಾಗಿ ಬದುಕುತ್ತೀರಿ ಅದಕ್ಕೇ ಹೇಳಿದೆ . ಎಷ್ಟು ವರ್ಷ ಬೇಕಾದರೂ ಇರಿ ನನಗೇನಾಗಬೇಕು ಎಂದೇ ".
"ಅಧಿಕಾರ ಬಿಟ್ಟ ಮೇಲೆ ಸಮಯ ಹೇಗೆ ಕಳೆಯುತ್ತೀರಿ ?" ಎಂದೆ .
"ಅಮ್ಮ ನಾನು ಎಷ್ಟೋ ವರ್ಷಗಳಿಂದ ಓದುವುದು ನಿಂತು ಹೋಗಿದೆ . ಓದುವುದು ಬೇಕಾದಷ್ಟಿದೆ ನೆಮ್ಮದಿಯಾಗಿ ಕುಳಿತು ಓದುತ್ತೆನೆ". ಎಂದರು .
ಅನಂತರದಲ್ಲಿ ಅಧಿಕಾರ ತ್ಯಜಿಸುವುದನ್ನು ರೆಕಾರ್ಡ್ ಮಾಡಿಸಿದ ಕಿಲಾಡಿ ತಾತ .
ಆದರೆ ಅಧ್ಯಕ್ಷರಾಗಿದ್ದಾಗಲೇ , ದೆಹಾಂತ್ಯವಾಗಿದ್ದು (31-1-2005) ಸಾವು ನಮ್ಮ ಕೈಯ್ಯಲ್ಲಿಲ್ಲ ಎಂಬುದನ್ನು ಸೂಚಿಸುತ್ತದೆ .
ಸ್ಥೂಲ ಜೀವನ ಚಿತ್ರ
-----------------------
ನರಸಿಂಹಯ್ಯ ನವರಬಗ್ಗೆ ಇನ್ನೇನೂ ಉಳಿದಿಲ್ಲ ಎನ್ನುವಷ್ಟರ ಮಟ್ಟಿಗೆ ಅನೇಕರು ಬರೆದಿದ್ದಾರೆ .
ಆದರೆ ಆ ವ್ಯಕ್ತಿ ಒಂದು ವಿಶ್ವ ಕೋಶ , ಅಕ್ಷಯ ಪಾತ್ರೆ . ಬರೆದಷ್ಟು ಮೊಗೆದಷ್ಟು ವಿಷಯಗಳು ಸಿಕ್ಕುತ್ತಲೇ ಇರುತ್ತವೆ .
ಗೌರಿಬಿದನೂರಿನ ಹೊಸೂರು ಇಲ್ಲಿರುವ ಒಂದೂವರೆ ಚದರದ ಮನೆಯ ವಳಕಲ್ಲ ಪಕ್ಕದಲ್ಲಿ ಹುಟ್ಟಿದ್ದು .
ಎಂಟನೇ ತರಗತಿಗೆ ಶಾಲೆಗೇ ಸೇರಲು ಅಲ್ಲಿನದಲೇ ಕಾಲ್ನಡಿಗೆಯಲ್ಲಿ ಬೆಂಗಳೂರಿಗೆ ಬಂದದ್ದು ಅವರ ಜ್ಞಾನದಾಹ ಹಾಗೂ ಬದುಕು ಗೆಲ್ಲಬೇಕೆನ್ನುವ ಛಲವನ್ನು ಸೂಚಿಸುತ್ತದೆ .
9ನೇ ತರಗತಿಯಲ್ಲಿದ್ದಾಗ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಗಾಂಧಿಜಿಯವರನ್ನು ಭೇಟಿ ಮಾಡಿದ್ದು , ಅವರ ಭಾಷಣವನ್ನು ಕನ್ನಡಕ್ಕೆ ಭಾಷಾಂತರಿಸಿದ್ದು ಅವರ ಆತ್ಮ ವಿಶ್ವಾಸವನ್ನು ಸೂಚಿಸುತ್ತದೆ .
ಕಾಲೇಜು ಓದುವಾಗ ಸ್ವಾತಂತ್ರ ಚಳುವಳಿಯಲ್ಲಿ ಧುಮುಕಿದರೂ , BSc ಕೊನೆ ವರ್ಷದಲ್ಲಿ ಎಲ್ಲವಿಷಯಗಳ ಪರೀಕ್ಷೆಯನ್ನು ಒಟ್ಟಿಗೆ ಬರೆದು ಪಾಸುಮಾದಿದ್ದು ಮತ್ತೊಮ್ಮೆ ಬದುಕು ಗೆಲ್ಲಲೇ ಬೇಕೆಂಬ ಛಲದ ಸಾಬೀತು ಮಾಡಿದರು . ಈ ಹಂತದಲ್ಲಿ ರಾಮಕೃಷ್ಣ ವಿದ್ಯಾರ್ಥಿ ಮಂದಿರದಲ್ಲಿ ಆಸರೆ ಪಡೆದಿದ್ದ ಅವರು ಆಧ್ಯಾತ್ಮದ ಕಡೆಗೆ ಒಲವು ಬೆಳೆಸಿಕೊಂಡಿದ್ದರು . ಮದುವೆಯಬಗ್ಗೆ ನಿರ್ಲಿಪ್ತರಾಗಿದ್ದರು .
MSc ಪಾಸು ಮಾಡಿ ಕೆಲಸಕ್ಕೆ ಸೇರಿದ್ದು ಜೀವನಕ್ಕೆ ಸ್ವಲ್ಪ ಆಸರೆಯಾಯಿತಾದರೂ , ಮತ್ತೊಮ್ಮೆ ಚಳುವಳಿಗೆ ಧುಮುಕಿದರು .
ನಂತರದ ಹಂತದಲ್ಲಿ ಮತ್ತೊಮ್ಮೆ ನ್ಯಾಷನಲ್ ಕಾಲೇಜಿಗೆ ಕೆಲಸಕ್ಕೆ ಸೇರಿದ ಅವರು ಕಾಲೇಜನ್ನು ಅತೀ ಕಡಿಮೆ ಪಲಿತಾಂಶ ದಿಂದ ರಾಂಕು (rank) ಪಡೆಯುವ ಕಾಲೇಜಾಗಿ ಪರಿವರ್ತಿಸಿದ್ದು ಅವರ ಶೈಕ್ಷಣಿಕ ಶಕ್ತಿ , ಆಡಳಿತಾತ್ಮಕ ಶಕ್ತಿ ,ಮುತ್ತ್ಸದ್ದಿತನ , ಮತ್ತು ದೂರದರ್ಶಿತ್ವವನ್ನು ಬಿಂಬಿಸುತ್ತದೆ .
ತನ್ನ 36ನೇ ವಯಸ್ಸಿನಲ್ಲಿ ಅಮೆರಿಕಾಗೆ ತೆರಳಿ ಓಹಿಯೋ ವಿಶ್ವವಿದ್ಯಾಲಯದಲ್ಲಿ ನ್ಯೂಕ್ಲಿಯಾರ್ ಫಿಸಿಕ್ಸ್ ವಿಷಯದಮೇಲೆ ಸಂಶೋಧನೆ ಮಾಡಿ PhD ಪಡೆದದ್ದು ಅವರರ ಎರಡನೇ ಹಂತದ ಸಾಧನೆಗೆ ನಾಂದಿ ಹಾಡಿತು .
ಅವರು ಅಮೆರಿಕೆಗೆ ತೆರಳುವಾಗ ಏರ್ಪೋರ್ಟ್ ನಲ್ಲಿ ಶಿಷ್ಯರಾದಿಯಾಗಿ ಜನಸಮೂಹ ಬೀಳ್ಕೊಟ್ಟದ್ದು , ಅಷ್ಟುಹೊತ್ತಿಗೆ ಅವರು ಸಂಪಾದಿಸಿದ್ದ "ಆಸ್ತಿ"ಯನ್ನು ಸೂಚಿಸುತ್ತ ದೆ .
ಅಮೇರಿಕೆಯಿಂದ ವಾಪಾಸಾಗುವ ಹೊತ್ತಿಗೆ ಅವರ ಮನೋಭಾವದಲ್ಲಿ ಸಾಕಷ್ಟು ಬದಲಾವಣೆ ಆಗಿತ್ತು .
ಕಾಲೇಜಿನಲ್ಲಿ ಹೆಣ್ಣುಮಕ್ಕಳಿಗೆ ಪ್ರವೇಶಾವಕಾಶ ಮತ್ತು ಬೆಂಗಳೂರು ವಿಜ್ಞಾನ ವೇದಿಕೆಯ ಸ್ಥಾಪನೆ .
ನಂತರದ ದಿನಗಳಲ್ಲಿ ಕಾಲೇಜು ಅದ್ಯಾಪಕರೊಬ್ಬರು ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿಯಾಗಿ ಆಯ್ಕೆಯಾಗಿದ್ದು ಇತಿಹಾಸ . ವಿ. ವಿ. ಯನ್ನು ನಗರದ ಮಧ್ಯಭಾಗದಿಂದ ಹೊರವಲಯಕ್ಕೆ ಸ್ಥಳಂತರ ಗೊಳಿಸಿ ಅದನ್ನು ಕ್ರಿಯಾಶೀಲವನ್ನಾಗಿಸಿದ್ದು ಇಂದಿಗೂ ನೆನಪಿಸಿಕೊಳ್ಳ ಬಹುದಾದ ಸಾಧನೆ .
ಸಾಯಿ ಭಾಭಾ ವಿರುದ್ದ ತಿರುಗಿಬಿದ್ದದ್ದು , ಒಂದು ಕುಂಬಳ ಕಾಯಿ ಕೊಡೆಂದು ಕೇಳಿದ್ದು ಮೂಡನಂಬಿಕೆ ಮತ್ತು ಸಮಾಜದ ಬಗೆಗಿನ ಹೋರಾಟದ ಒಂದು ಅಧ್ಯಾಯವಷ್ಟೇ .
ಹಳ್ಳಿಗಳಲ್ಲಿ ಕಾಲೇಜು ಸ್ಥಾಪನೆ , K R V P ಸ್ಥಾಪಿಸಿ ಜನರಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವದಿಕ್ಕಿನಲ್ಲಿ ಒಟ್ಟು ಕೊಟ್ಟದ್ದು, ಅವರ ಸಮಾಜ ಮುಖಿ ಚಿಂತನೆಗಳು .
ಇದೆಷ್ಟೇ ಅಲ್ಲದೆ ಸಮಾಜದ ಎಲ್ಲ ಕ್ಷೇತ್ರಗಳೊಂದಿಗೆ ಸಂಪರ್ಕ ಇಟ್ಟುಕೊಂಡಿದ್ದರು . ರಾಜಕಾರಣಿಗಳೊಂದಿಗೆ ಸೂಜಿಗೆ ಮುತ್ತು ಕೊಟ್ಟಂತೆ ಸಂಭಂದ ಇಟ್ಟುಕೊಂಡಿದ್ದು ಅವರ ಮುತ್ಸದ್ದಿತನ ವನ್ನು ಸೂಚಿಸುತ್ತದೆ .
ಅವರ ಆಡಳಿತ ಶೈಲಿಯಂತೂ , ವಿಶಿಷ್ಟವಾದದ್ದು , IIM ನಲ್ಲಿ Dr. H N Stye of Administration ಎಂದು ಒಂದು ಪಾಠ ಸೇರಿಸಬಹುದು . ಸಣ್ಣ ಸಂಸ್ಥೆಗಳ ಆಡಳಿತಕ್ಕೆ ಮಾರ್ಗಸೂಚಿಯಾಗಬಲ್ಲುದು .
ನ್ಯಾಷನಲ್ ಎಜುಕೇಶನ್ ಸೊಸೈಟಿಯ ಅನಭಿಷಿಕ್ತ ದೊರೆಯಾಗಿ ಆಳಿದ್ದು, ಅಲ್ಲೇ ಕಾಲೇಜಿನ ಮೂಲೆಯಲ್ಲಿ ಹಾಸ್ಟೆಲ್ ಕೊಠಡಿಯಲ್ಲಿ ಜೀವಿಸಿದ್ದು ಅವರ ಜೀವನದ ದರ್ಶನವನ್ನು ವಾಸ್ತವಿಕ ನೆಲೆಗಟ್ಟಿನಲ್ಲಿ ಸೂಚಿಸುತ್ತದೆ .
ಇನ್ನು ಪ್ರಶಸ್ತಿ ,ಗೌರವಗಳು ಈ ಲೇಖನದ ಮಿತಿಗೆ ಹೊರತಾಗಿವೆ ಬಿಡಿ .
ಅವರಿಗೆ ಬಂದ ಶಾಲುಗಳನ್ನು ತಮ್ಮ ಸುತ್ತ ಮುತ್ತಲಿನವರಿಗೆ ಕೊಟ್ಟು ಮಿಕ್ಕಿದ್ದನ್ನು , ಒಂದು ದಿನ ರಾತ್ರಿ ಪರಿಚಯಸ್ಥರ ಕೈಗೆ ಕೊಟ್ಟು ಫುಟ್ಪಾತ್ ನಲ್ಲಿ ಮಲಗಿರುವ ನಿರ್ಗತಿಕರಿಗೆ ಹೊದೆಸಿಬರಲು ಹೇಳಿದ್ದರು !!!!!!!!!!!
ಬರೆಯುತ್ತಾ ಹೋದರೆ ಲೇಖನ ಮುಗಿಯುವುದಿಲ್ಲ .
ಇಂದು ಅವರ ಜನ್ಮದಿನವಾಗಿದ್ದು ಅವರಂತಹ ನಾಯಕರುಗಳು ಸಮಾಜಕ್ಕೆ ಪ್ರಸ್ತುತ ಮತ್ತು ಬೇಕು ಎಂದು ಹೇಳುವುದು ತೋರಿಕೆಯ ಮಾತಲ್ಲ ಬದಲಿಗೆ ಅವರನ್ನು ಕಂಡು ಅವರ ಒಡನಾಡಿಗಳಾಗಿದ್ದ ನಮ್ಮ ಅನುಭವದ ಮಾತು .
-----------------
ನಾನು ನ್ಯಾಷನಲ್ ಕಾಲೇಜಿಗೆ ಕೆಲಸಕ್ಕೆ ಸೇರಿದ್ದು 1997ರಲ್ಲಿ . ಅಲ್ಲಿಯವರೆಗೂ ನನಗೂ H N ಗೂ ಹೇಳುವಂತಾ ಸಂಪರ್ಕವೇನೂ ಇರಲಿಲ್ಲ . ಆದರೆ ಅದೇನೋ ಗೊತ್ತಿಲ್ಲ ಕೆಲಸಕ್ಕೆ ಸೇರಿದಾಕ್ಷಣದಿಂದ ಅವರಿಗೂ ನನಗೂ ಉಂಟಾದ ಸ್ನೇಹ ಮಾತ್ರ ಐತಿಹಾಸಿಕ ವಾದದ್ದು (ಕಾಲೇಜಿನ ಮಟ್ಟಿಗೆ).
ನನ್ನ ಅವರ ಆಲೋಚನಾ ಕ್ರಮಗಳು , ಕೆಲಸ ಮಾಡುವ ವಿಧಾನ ಇಬ್ಬರಿಗೂ ಮೆಚ್ಚುಗೆಯಾಗಿ ದ್ದು ಇದಕ್ಕೆ ಕಾರಣವಿರಬಹುದು . ಮುಂದೆ ಅನೇಕ ಕೆಲಸಗಲ್ಲಿ ಅವರೊಂದಿಗೆ ಕೈ ಜೋಡಿಸಿದ ನನಗೆ ಅವರ ಒಡನಾಟ ಒಂದು ಅಧ್ಬುತ ಜೀವನ ಪಾಠ .
ಆಸ್ಪತ್ರೆಯಲ್ಲಿ ಊಟಮಾಡಿಸಿ ಬಾಯಿತೊಳೆದು ಬರುತ್ತಿದ್ದದ್ದು ಸೇವೆಮಾಡಲು ಒಂದು ನನಗೆ ಸಿಕ್ಕಿದ್ದ ಒಂದು ಅವಕಾಶ .
2004 ರ (ಸೆಪ್ಟೆಂಬರ್ -ಅಕ್ಟೋಬರ್?) ಒಂದುಸಂಜೆ
------------------------------
ಮೇಲೆ ತಿಳಿಸಿದ ಸಮಯದಲ್ಲಿ ನಾನು ನನ್ನ ಅಣ್ಣನ ಕುಟುಂಬದೊಂದಿಗೆ ಗೋವಾ ಪ್ರವಾಸದಲ್ಲಿದ್ದ ಸಮಯ ವದು . ಯಾವುದೇ ಊರಿನಲ್ಲಿದ್ದರೂ ರಾತ್ರಿ ಒಮ್ಮೆ H N ಗೆ ಫೋನು ಮಾಡಿ ಆರೋಗ್ಯ ವಿಚಾರಿಸುವುದು ನನ್ನ ನಿತ್ಯದ ವಾಡಿಕೆಯಾಗಿತ್ತು . ಅದರಂತೆ ಗೋವಾ ದಿಂದಲೇ ಫೋನು ಮಾಡಿದೆ . ಆಕ್ಷಣಕ್ಕೆ ಫೋನು ಎತ್ತಿದ H N ಕೂಡಲೇ " ಕಮಲಾ ಇವತ್ತು ಮೀಟಿಂಗ್ನಲ್ಲಿ(Society A G M ) ನಾನು ಬಿಟ್ಟು ಬಿಡುತ್ತೇನೆಂದು ಹೇಳಿಬಿಟ್ಟೆ ". ಎಂದರು . " ಆಯಿತು ಅದರಬಗ್ಗೆ ಆಮೇಲೆ ಮಾತಾಡೋಣ ಈಗ ನಿಮ್ಮ ಆರೋಗ್ಯ ಹೇಗಿದೆ ಎಂದೇ?"
"ಪರವಾಗಿಲ್ಲ". ಎಂದರು .
ಬೆಂಗಳೂರಿಗೆ ಬಂಡ ಕೂಡಲೇ ಅವರ ಕೊಠಡಿ ಗೆ ತೆರಳಿದಾಗ ಮತ್ತದೇ ಅಧಿಕಾರ ತ್ಯಜಿಸುವ ಮಾತು . ಆಗ ನಾನು "ಒಳ್ಳೆಯ ಕೆಲಸ ಮಾಡಿದಿರಿ ಸ್ವಾಮೀ , ಒಂದೆರಡು ವರ್ಷ ಮೊದಲೇ ಬಿದಬಾರದಿತ್ತೆ ?" ಎಂದಾಗ , ಈ ಉತ್ತರ ನಿರೀಕ್ಷಿಸಿರದಿದ್ದ H N ಆ ಕೂಡಲೇ " ಅಮ್ಮ ನಾನು ಅಧಿಕಾರದಲ್ಲಿದ್ದರೆ ನಿನಗೆನಮ್ಮ ಹೊಟ್ಟೆಕಿಚ್ಚು ?" ಎನ್ನ ಬೇಕೇ?. " ಹೌದು ಸರ್ , ನೀವು ಇನ್ನೊಂದೆರಡು ವರ್ಷ ಮೊದಲೇ ಬಿಟ್ಟಿದ್ದಾರೆ ಇನ್ನೆರಡು ವರ್ಷ ಹೆಚ್ಚಾಗಿ ಬದುಕುತ್ತೀರಿ ಅದಕ್ಕೇ ಹೇಳಿದೆ . ಎಷ್ಟು ವರ್ಷ ಬೇಕಾದರೂ ಇರಿ ನನಗೇನಾಗಬೇಕು ಎಂದೇ ".
"ಅಧಿಕಾರ ಬಿಟ್ಟ ಮೇಲೆ ಸಮಯ ಹೇಗೆ ಕಳೆಯುತ್ತೀರಿ ?" ಎಂದೆ .
"ಅಮ್ಮ ನಾನು ಎಷ್ಟೋ ವರ್ಷಗಳಿಂದ ಓದುವುದು ನಿಂತು ಹೋಗಿದೆ . ಓದುವುದು ಬೇಕಾದಷ್ಟಿದೆ ನೆಮ್ಮದಿಯಾಗಿ ಕುಳಿತು ಓದುತ್ತೆನೆ". ಎಂದರು .
ಅನಂತರದಲ್ಲಿ ಅಧಿಕಾರ ತ್ಯಜಿಸುವುದನ್ನು ರೆಕಾರ್ಡ್ ಮಾಡಿಸಿದ ಕಿಲಾಡಿ ತಾತ .
ಆದರೆ ಅಧ್ಯಕ್ಷರಾಗಿದ್ದಾಗಲೇ , ದೆಹಾಂತ್ಯವಾಗಿದ್ದು (31-1-2005) ಸಾವು ನಮ್ಮ ಕೈಯ್ಯಲ್ಲಿಲ್ಲ ಎಂಬುದನ್ನು ಸೂಚಿಸುತ್ತದೆ .
ಸ್ಥೂಲ ಜೀವನ ಚಿತ್ರ
-----------------------
ನರಸಿಂಹಯ್ಯ ನವರಬಗ್ಗೆ ಇನ್ನೇನೂ ಉಳಿದಿಲ್ಲ ಎನ್ನುವಷ್ಟರ ಮಟ್ಟಿಗೆ ಅನೇಕರು ಬರೆದಿದ್ದಾರೆ .
ಆದರೆ ಆ ವ್ಯಕ್ತಿ ಒಂದು ವಿಶ್ವ ಕೋಶ , ಅಕ್ಷಯ ಪಾತ್ರೆ . ಬರೆದಷ್ಟು ಮೊಗೆದಷ್ಟು ವಿಷಯಗಳು ಸಿಕ್ಕುತ್ತಲೇ ಇರುತ್ತವೆ .
ಗೌರಿಬಿದನೂರಿನ ಹೊಸೂರು ಇಲ್ಲಿರುವ ಒಂದೂವರೆ ಚದರದ ಮನೆಯ ವಳಕಲ್ಲ ಪಕ್ಕದಲ್ಲಿ ಹುಟ್ಟಿದ್ದು .
ಎಂಟನೇ ತರಗತಿಗೆ ಶಾಲೆಗೇ ಸೇರಲು ಅಲ್ಲಿನದಲೇ ಕಾಲ್ನಡಿಗೆಯಲ್ಲಿ ಬೆಂಗಳೂರಿಗೆ ಬಂದದ್ದು ಅವರ ಜ್ಞಾನದಾಹ ಹಾಗೂ ಬದುಕು ಗೆಲ್ಲಬೇಕೆನ್ನುವ ಛಲವನ್ನು ಸೂಚಿಸುತ್ತದೆ .
9ನೇ ತರಗತಿಯಲ್ಲಿದ್ದಾಗ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಗಾಂಧಿಜಿಯವರನ್ನು ಭೇಟಿ ಮಾಡಿದ್ದು , ಅವರ ಭಾಷಣವನ್ನು ಕನ್ನಡಕ್ಕೆ ಭಾಷಾಂತರಿಸಿದ್ದು ಅವರ ಆತ್ಮ ವಿಶ್ವಾಸವನ್ನು ಸೂಚಿಸುತ್ತದೆ .
ಕಾಲೇಜು ಓದುವಾಗ ಸ್ವಾತಂತ್ರ ಚಳುವಳಿಯಲ್ಲಿ ಧುಮುಕಿದರೂ , BSc ಕೊನೆ ವರ್ಷದಲ್ಲಿ ಎಲ್ಲವಿಷಯಗಳ ಪರೀಕ್ಷೆಯನ್ನು ಒಟ್ಟಿಗೆ ಬರೆದು ಪಾಸುಮಾದಿದ್ದು ಮತ್ತೊಮ್ಮೆ ಬದುಕು ಗೆಲ್ಲಲೇ ಬೇಕೆಂಬ ಛಲದ ಸಾಬೀತು ಮಾಡಿದರು . ಈ ಹಂತದಲ್ಲಿ ರಾಮಕೃಷ್ಣ ವಿದ್ಯಾರ್ಥಿ ಮಂದಿರದಲ್ಲಿ ಆಸರೆ ಪಡೆದಿದ್ದ ಅವರು ಆಧ್ಯಾತ್ಮದ ಕಡೆಗೆ ಒಲವು ಬೆಳೆಸಿಕೊಂಡಿದ್ದರು . ಮದುವೆಯಬಗ್ಗೆ ನಿರ್ಲಿಪ್ತರಾಗಿದ್ದರು .
MSc ಪಾಸು ಮಾಡಿ ಕೆಲಸಕ್ಕೆ ಸೇರಿದ್ದು ಜೀವನಕ್ಕೆ ಸ್ವಲ್ಪ ಆಸರೆಯಾಯಿತಾದರೂ , ಮತ್ತೊಮ್ಮೆ ಚಳುವಳಿಗೆ ಧುಮುಕಿದರು .
ನಂತರದ ಹಂತದಲ್ಲಿ ಮತ್ತೊಮ್ಮೆ ನ್ಯಾಷನಲ್ ಕಾಲೇಜಿಗೆ ಕೆಲಸಕ್ಕೆ ಸೇರಿದ ಅವರು ಕಾಲೇಜನ್ನು ಅತೀ ಕಡಿಮೆ ಪಲಿತಾಂಶ ದಿಂದ ರಾಂಕು (rank) ಪಡೆಯುವ ಕಾಲೇಜಾಗಿ ಪರಿವರ್ತಿಸಿದ್ದು ಅವರ ಶೈಕ್ಷಣಿಕ ಶಕ್ತಿ , ಆಡಳಿತಾತ್ಮಕ ಶಕ್ತಿ ,ಮುತ್ತ್ಸದ್ದಿತನ , ಮತ್ತು ದೂರದರ್ಶಿತ್ವವನ್ನು ಬಿಂಬಿಸುತ್ತದೆ .
ತನ್ನ 36ನೇ ವಯಸ್ಸಿನಲ್ಲಿ ಅಮೆರಿಕಾಗೆ ತೆರಳಿ ಓಹಿಯೋ ವಿಶ್ವವಿದ್ಯಾಲಯದಲ್ಲಿ ನ್ಯೂಕ್ಲಿಯಾರ್ ಫಿಸಿಕ್ಸ್ ವಿಷಯದಮೇಲೆ ಸಂಶೋಧನೆ ಮಾಡಿ PhD ಪಡೆದದ್ದು ಅವರರ ಎರಡನೇ ಹಂತದ ಸಾಧನೆಗೆ ನಾಂದಿ ಹಾಡಿತು .
ಅವರು ಅಮೆರಿಕೆಗೆ ತೆರಳುವಾಗ ಏರ್ಪೋರ್ಟ್ ನಲ್ಲಿ ಶಿಷ್ಯರಾದಿಯಾಗಿ ಜನಸಮೂಹ ಬೀಳ್ಕೊಟ್ಟದ್ದು , ಅಷ್ಟುಹೊತ್ತಿಗೆ ಅವರು ಸಂಪಾದಿಸಿದ್ದ "ಆಸ್ತಿ"ಯನ್ನು ಸೂಚಿಸುತ್ತ ದೆ .
ಅಮೇರಿಕೆಯಿಂದ ವಾಪಾಸಾಗುವ ಹೊತ್ತಿಗೆ ಅವರ ಮನೋಭಾವದಲ್ಲಿ ಸಾಕಷ್ಟು ಬದಲಾವಣೆ ಆಗಿತ್ತು .
ಕಾಲೇಜಿನಲ್ಲಿ ಹೆಣ್ಣುಮಕ್ಕಳಿಗೆ ಪ್ರವೇಶಾವಕಾಶ ಮತ್ತು ಬೆಂಗಳೂರು ವಿಜ್ಞಾನ ವೇದಿಕೆಯ ಸ್ಥಾಪನೆ .
ನಂತರದ ದಿನಗಳಲ್ಲಿ ಕಾಲೇಜು ಅದ್ಯಾಪಕರೊಬ್ಬರು ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿಯಾಗಿ ಆಯ್ಕೆಯಾಗಿದ್ದು ಇತಿಹಾಸ . ವಿ. ವಿ. ಯನ್ನು ನಗರದ ಮಧ್ಯಭಾಗದಿಂದ ಹೊರವಲಯಕ್ಕೆ ಸ್ಥಳಂತರ ಗೊಳಿಸಿ ಅದನ್ನು ಕ್ರಿಯಾಶೀಲವನ್ನಾಗಿಸಿದ್ದು ಇಂದಿಗೂ ನೆನಪಿಸಿಕೊಳ್ಳ ಬಹುದಾದ ಸಾಧನೆ .
ಸಾಯಿ ಭಾಭಾ ವಿರುದ್ದ ತಿರುಗಿಬಿದ್ದದ್ದು , ಒಂದು ಕುಂಬಳ ಕಾಯಿ ಕೊಡೆಂದು ಕೇಳಿದ್ದು ಮೂಡನಂಬಿಕೆ ಮತ್ತು ಸಮಾಜದ ಬಗೆಗಿನ ಹೋರಾಟದ ಒಂದು ಅಧ್ಯಾಯವಷ್ಟೇ .
ಹಳ್ಳಿಗಳಲ್ಲಿ ಕಾಲೇಜು ಸ್ಥಾಪನೆ , K R V P ಸ್ಥಾಪಿಸಿ ಜನರಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವದಿಕ್ಕಿನಲ್ಲಿ ಒಟ್ಟು ಕೊಟ್ಟದ್ದು, ಅವರ ಸಮಾಜ ಮುಖಿ ಚಿಂತನೆಗಳು .
ಇದೆಷ್ಟೇ ಅಲ್ಲದೆ ಸಮಾಜದ ಎಲ್ಲ ಕ್ಷೇತ್ರಗಳೊಂದಿಗೆ ಸಂಪರ್ಕ ಇಟ್ಟುಕೊಂಡಿದ್ದರು . ರಾಜಕಾರಣಿಗಳೊಂದಿಗೆ ಸೂಜಿಗೆ ಮುತ್ತು ಕೊಟ್ಟಂತೆ ಸಂಭಂದ ಇಟ್ಟುಕೊಂಡಿದ್ದು ಅವರ ಮುತ್ಸದ್ದಿತನ ವನ್ನು ಸೂಚಿಸುತ್ತದೆ .
ಅವರ ಆಡಳಿತ ಶೈಲಿಯಂತೂ , ವಿಶಿಷ್ಟವಾದದ್ದು , IIM ನಲ್ಲಿ Dr. H N Stye of Administration ಎಂದು ಒಂದು ಪಾಠ ಸೇರಿಸಬಹುದು . ಸಣ್ಣ ಸಂಸ್ಥೆಗಳ ಆಡಳಿತಕ್ಕೆ ಮಾರ್ಗಸೂಚಿಯಾಗಬಲ್ಲುದು .
ನ್ಯಾಷನಲ್ ಎಜುಕೇಶನ್ ಸೊಸೈಟಿಯ ಅನಭಿಷಿಕ್ತ ದೊರೆಯಾಗಿ ಆಳಿದ್ದು, ಅಲ್ಲೇ ಕಾಲೇಜಿನ ಮೂಲೆಯಲ್ಲಿ ಹಾಸ್ಟೆಲ್ ಕೊಠಡಿಯಲ್ಲಿ ಜೀವಿಸಿದ್ದು ಅವರ ಜೀವನದ ದರ್ಶನವನ್ನು ವಾಸ್ತವಿಕ ನೆಲೆಗಟ್ಟಿನಲ್ಲಿ ಸೂಚಿಸುತ್ತದೆ .
ಇನ್ನು ಪ್ರಶಸ್ತಿ ,ಗೌರವಗಳು ಈ ಲೇಖನದ ಮಿತಿಗೆ ಹೊರತಾಗಿವೆ ಬಿಡಿ .
ಅವರಿಗೆ ಬಂದ ಶಾಲುಗಳನ್ನು ತಮ್ಮ ಸುತ್ತ ಮುತ್ತಲಿನವರಿಗೆ ಕೊಟ್ಟು ಮಿಕ್ಕಿದ್ದನ್ನು , ಒಂದು ದಿನ ರಾತ್ರಿ ಪರಿಚಯಸ್ಥರ ಕೈಗೆ ಕೊಟ್ಟು ಫುಟ್ಪಾತ್ ನಲ್ಲಿ ಮಲಗಿರುವ ನಿರ್ಗತಿಕರಿಗೆ ಹೊದೆಸಿಬರಲು ಹೇಳಿದ್ದರು !!!!!!!!!!!
ಬರೆಯುತ್ತಾ ಹೋದರೆ ಲೇಖನ ಮುಗಿಯುವುದಿಲ್ಲ .
ಇಂದು ಅವರ ಜನ್ಮದಿನವಾಗಿದ್ದು ಅವರಂತಹ ನಾಯಕರುಗಳು ಸಮಾಜಕ್ಕೆ ಪ್ರಸ್ತುತ ಮತ್ತು ಬೇಕು ಎಂದು ಹೇಳುವುದು ತೋರಿಕೆಯ ಮಾತಲ್ಲ ಬದಲಿಗೆ ಅವರನ್ನು ಕಂಡು ಅವರ ಒಡನಾಡಿಗಳಾಗಿದ್ದ ನಮ್ಮ ಅನುಭವದ ಮಾತು .
Saturday, 1 June 2013
ನಾನು ಅಂಬಿಕ ಮತ್ತು ಚಿತ್ರಾನ್ನ .
ನೀನು ಚಿತ್ರಾನ್ನ ಉಪ್ಪಿಟ್ಟು ಎಂದೆಲ್ಲಾ ಬರೆಯಲು ಶುರು ಮಾಡಿದೆಯಾ ? ನಮ್ಮ ಗತಿ ಏನಾಗಬೇಡ ? ಎಂದು ಸಿಟ್ಟಾಗಬೇಡಿ . ಅದಕ್ಕೊಂದು ಕಾರಣ ಇದೆ ಮುಂದೆ ಓದಿ . ಇದರ ಬಗ್ಗೆ ಬಹಳ ಹಿಂದೆಯೇ ಬರೆಯಬೇಕೆಂದು ಕೊಂಡಿದ್ದೆ . ಆದರೆ ಸ್ಯಾಂಡು ಕುಟ್ಟುವ ಕೆಲಸ ನಡೆಯುತ್ತಿತ್ತು . ಇಂದು ಅದಕ್ಕೆ ಬಿಡುವು . ಆದ್ದರಿಂದ ಇದನ್ನು ಬರೆದು ಮುಗಿಸುತ್ತಿದ್ದೇನೆ .
ಅಂಬಿಕ ಮೊದಲಿಗೆ ನನಗೆ PUC ಮತ್ತು BSc ಯಲ್ಲಿ ರಸಾಯನ ಶಾಸ್ತ್ರ ಪಾಠ ಹೇಳಿದ ಮೇಡಂ ,ನಂತರದಲ್ಲಿ ನನ್ನ ಸಹೋದ್ಯೋಗಿ , ಮೂರನೇ ಹಂತದಲ್ಲಿ ಪ್ರಾಂಶುಪಾಲೆಯಾಗಿ ನನಗೆ ಅಧಿಕಾರಿಣಿ . ಆದರೆ ಇವೆಲ್ಲವನ್ನೂ ಮೀರಿದ್ದು ಅವರು (ಆಕೆ!!! ನನಗೆಷ್ಟು ಧೈರ್ಯ ?) ನನ್ನ ಆತ್ಮೀಯ ಸ್ನೇಹಿತೆ .
ನಮ್ಮಿಬ್ಬರ ಸ್ನೇಹದ ಮಾತುಕತೆಗಳು ನಡೆಯುವುದು ನಾನೇನಾದರೂ ಬೆಳಗ್ಗೆ 5 30ಕ್ಕೆ ಪಾರ್ಕಿಗೆ ವಾಕಿಂಗ್ ಹೋದಾಗ . ಅಂಬಿಕ ಒಂದು ದಿನವೂ ವಾಕಿಂಗ್ ತಪ್ಪಿಸುವುದಿಲ್ಲ . ಆದರೆ ನಮ್ಮದು if but ಕಂಡಿಶನ್ ಗೆ ಒಳಪಟ್ಟಿರುತ್ತದೆ ಎನ್ನಿ ,ಏಕೆಂದರೆ ಮಕ್ಕಳಿನ್ನು ಚಿಕ್ಕವರಲ್ಲವೇ? . ನಾನು ಎಂದು ವಾಕಿಂಗ್ ಹೋದರೂ ಅಂದು, ಇಂದು ನೀನು ಸಿಕ್ಕುತ್ತೀಯ ಎಂದುಕೊಂಡು ಮನೆಯಿಂದ ಬಂದೆ ಎಂದು ಹೇಳಿಯೇ ಆತ್ಮೀಯವಾಗಿ ಸ್ವಾಗತಿಸುವ ಅಂಬಿಕಾ ಮೇಡಂ ಆಮೇಲೆ ಒಂದು ಗಂಟೆ ಹೇಗೆ ಹೋಯಿತು ಇಬ್ಬರಿಗೂ ತಿಳಿಯುವುದಿಲ್ಲವೆನ್ನಿ .
ನ್ಯಾಷನಲ್ ಕಾಲೇಜಿನಿಂದ ಒಂದಿಡೀ ವಿಶ್ವ ನಮ್ಮ ಮಾತುಕತೆಯಲ್ಲಿ ಮುಳುಗಿಹೋಗುತ್ತದೆ .
ಅಂಬಿಕಾ ಮೇಡಂ ವಿಶಿಷ್ಟ ವ್ಯಕ್ತಿತ್ವದ ಮಹಿಳೆ . ಮೊದಲಿಗೆ ಅಪ್ಪಟ ಗೃಹಿಣಿ , ನಂತರದಲ್ಲಿ ಅಧಿಕಾರಿಣಿ , ಬಿಡುವಿನವೇಳೆಯಲ್ಲಿ ವಿಜ್ಞಾನ ಮತ್ತು ಸಾಹಿತ್ಯ ಎರಡನ್ನೂ ಬರೆಯುತ್ತಾರೆ . ಕನ್ನಡ ಇಂಗ್ಲಿಷ್ ಎರಡೂ ಭಾಷೆಯಮೆಲಿನ ಅವರ ಹಿಡಿತ ಬಹಳ ಚೆನ್ನಾಗಿದೆ . ಅವರ ಸಮಗ್ರ ಬರವಣಿಗೆಯ ಮೂರು ಸಂಪುಟಗಳು ಬಿಡುಗಡೆಗೆ ಸಿದ್ದವಾಗಿವೆ . ಅಂಬಿಕ ಮೇಡಂ ಅತ್ಯುತ್ತಮ ಅಡುಗೆಕಾರ್ತಿ . ಅವರ ಕೈಯ್ಯಲ್ಲಿನ ಅಡುಗೆರುಚಿ ತಿಂದವರಿಗೆ ಗೊತ್ತು . ಅವರು ಏನೇ ವಿಶೇಷ ಅಡುಗೆ ಮಾಡಿದರೂ ಡಬ್ಬಿಯಲ್ಲಿ ತಂದು ಚೇಂಬರಿಗೆ ಕರೆದು (ಬಿಡುವಿನ ವೇಳೆಯಲ್ಲಿ) ಮಕ್ಕಳಿಗೆ ತಿನ್ನಿಸುವಂತೆ ನನಗೆ ಕೊಡುವ ಅಂಬಿಕ ಮೇಡಂ, ನಂತರ ಅದರಬಗ್ಗೆ ನಮ್ಮಿಬ್ಬರಿಗೂ ಚರ್ಚೆಯಾಗುತ್ತದೆ . ಅದರ technicality, methodology ಎಲ್ಲವೂ ಚರ್ಚೆಯಾಗುತ್ತದೆಯೇನ್ನಿ .
ಇಷ್ಟಕ್ಕೆ ಮುಗಿಯಲಿಲ್ಲ ಅವರ ವಿಶೇಷ , ಎಲ್ಲ ಹಬ್ಬಗಳನ್ನೂ ಸಮರ್ಪಕವಾಗಿ ಮಾಡುವ ಮೇಡಂ ಕಾಲೇಜಿಗೆ ಒಂದು ದಿನವೂ ತಡವಾಗಿ ಬರುವುದಿಲ್ಲ . ಅದು ಸಂಕ್ರಾಂತಿಯ ಸಕ್ಕರೆ ಅಚ್ಚು ಮಾಡುವುದಿರಲಿ , ದಸರಾ ಗೊಂಬೆ ಕೂರಿಸುವುದಿರಲಿ ಎಲ್ಲವೂ ಆಗಬೇಕು . ದಸರಾ ಹಬ್ಬದಲ್ಲಿ ಮನೆಗೆ ಕರೆದು ಉಪಚರಿಸುವ ಅಂಬಿಕಾ ಅವರ ಉತ್ಸಾಹಕ್ಕೆ ಅವರೇ ಸಾಟಿ . ಮೇಡಂ ಇಬ್ಬರು ಯಶಸ್ವೀ ಗಂಡುಮಕ್ಕಳ ತಾಯಿ . ಸಕ್ಕರೆ ಗೊಂಬೆಯಂತ ಮಾಡ್ರನ್ ಸೊಸೆಯಂದಿರು . ಆ ಸೊಸೆಯಂದಿರನ್ನು ultra modern ಬುದ್ದಿವಂತಿಕೆಯಿಂದ ಒಲಿಸಿಕೊಂಡಿರುವ ಅತ್ತೆ . ಎಲ್ಲರನೂ ವಿದೇಶಕ್ಕೆ ದತ್ತು ಕೊಟ್ಟಿದ್ದಾರೆನ್ನಿ .
ಇಂತಿಪ್ಪ ಮೇಡಂ ಈಗ್ಗೆ ಕೆಲದಿನಗಳ ಹಿಂದೆ ಫೋನು ಮಾಡಿ ಚೇಂಬರಿಗೆ ಬಾ ಎಂದರು . ಆಯಿತು ಎಂದು ಹೋದೆ . ಆಗ " ಕಮಲಾ ಮನೆ ಕ್ಲೀನು ಮಾಡುವಾಗ 1886 ರರಲ್ಲಿ ಪ್ರಿಂಟು ಆಗಿರುವ ಅರಮನೆಯ ಪಾಕಶಾಸ್ತ್ರದ ಪುಸ್ತಕ ಸಿಕ್ಕಿದೆ ಯಾರಿಗೆ ಕೊಡುವುದು ಎಂದು ಬಹಳ ಯೋಚಿಸಿದೆ , ನಿನಗೇ ಕೊಡಬೇಕು ಅನ್ನಿಸಿತು ಸ್ವೀಕರಿಸುವೆಯಾ?" ಎಂದಾಗ ಬಹಳ ಸಂತೋಷವಾಗಿ ಸಮ್ಮತಿಸಿದ್ದೆ . ದಾಕ್ಷಾಯನಮ್ಮನ ಗೊಂಬೆ ಗಳು , ಅಯ್ಯಂಗಾರ್ ಅಜ್ಜಿಯ ಈಳಿಗೆಮಣೆ ಗಿಫ್ಟು ಪಡೆದ ನನಗೆ ಇದೇನು ಹೊಸದೆನ್ನಿಸಲಿಲ್ಲ .(ಇದರಬಗ್ಗೆ ಮತ್ತೊಮ್ಮೆ ಬರೆಯುವೆ) ಈ ಪ್ರೀತಿ ಯಾರಿಗುಂಟು ಯಾರಿಗಿಲ್ಲ ಎಲ್ಲಾ ನಿಮ್ಮ ಆಶೀರ್ವಾದ ಎಂದು ಸ್ವೀಕರಿಸಿ ಇತ್ತುಕೊಳ್ಳುತ್ತೇನೆನ್ನಿ . (ನನ್ನ ಗಂಡ ಊರ ಕಸವೆಲ್ಲಾ ನಿನಗೆ ಗಿಫ್ತುಗಳೋ , ಎಂದು ಬೈದರೂ ,ಆ ಗಿಫ್ಟಿನ ಹಿಂದಿರುವ ಪ್ರೀತಿಯ ಆರ್ದ್ರತೆಯಿಂದ ಅವುಗಳನ್ನು ಸ್ವೀಕರಿಸುತ್ತೇನೆ ).
ಮಾರನೇ ದಿನ ಕರೆದು, ಮನೆಯಿಂದ ತಂದ ಪುಸ್ತಕ ನೀಡಿದ ಅಂಬಿಕಾ ಮೇಡಂ, ಇದರಲ್ಲಿರುವ ಅಡುಗೆ ಮಾಡಿದಾಗ ನನಗೆ ತಪ್ಪದೇ ತಲುಪಿಸಬೇಕೆಂದು ಕಂಡಿಶನ್ ಹಾಕಿದರು . ಆಯಿತು ಎಂದು ಹೇಳಿ ಮನೆಗೆ ತಂದೆ . ಪುಸ್ತಕ ಬಹಳ ಚೆನ್ನಾಗಿದೆ . ಅನ್ನ ಮಾಡುವ ವಿಧಾನನ್ನೇ ಹತ್ತಾರು ತರಹ ವರ್ಣಿಸಿದ್ದಾರೆ . ಸಾರುಗಳು , ಬಾತುಗಳು ತರಹೇವಾರಿ ಅಡುಗೆಯ ಲೋಕವೇ ಇದರಲ್ಲಿದೆ . ಈ ಪುಸ್ತಕ ಮನೆಗೆ ಬರುವುದಕ್ಕೂ ತೋತಾಪುರಿ ಮಾವಿನಕಾಯಿ ತರುವುದಕ್ಕೂ ಸರಿಹೋಯಿತೆನ್ನಿ . ಆಗ ಈ ಬಾರಿ ಈ ಪುಸ್ತಕದ ಮೆಥಡ್ ನಲ್ಲಿ ಚಿತ್ರಾನ್ನ ಮಾಡೋಣವೆಂದು ಮಾಡಿದೆ ಚೆನ್ನಾಗಿ ಆಗಿತ್ತು . ಅಂಬಿಕ ಮೇಡಂಗೆ ತಲುಪಿಸುವುದನ್ನು ಮರೆಯಲಿಲ್ಲವೆನ್ನಿ . ಮತ್ತೊಂದು ದಿನ ಈ ಪುಸ್ತಕದ ಬಗ್ಗೆಯೇ ತಿಳಿಸುತ್ತೇನೆ . ಏಕೆಂದರೆ ಅದರಲ್ಲಿನ ವಿಧಾನಗಳು ನಿಜಕ್ಕೂ ಚೆನ್ನಾಗಿವೆ . ನಾವೂ ರಾಜ ಭೋಜನವನ್ನು ಸವಿಯೋಣ ಅಲ್ಲವೇ?
ಕಮಲಾ
INSPIRE Oct.2012, National College Basavanagudi.
In the capacity of ORGANISING SECRETARY.
In the capacity of ORGANISING SECRETARY.
Subscribe to:
Posts (Atom)